ಪಿಯುಸಿ: ಜಿಲ್ಲೆಯಲ್ಲಿ ಆಲೂರಿಗೆ ಅಗ್ರ ಸ್ಥಾನ

7

ಪಿಯುಸಿ: ಜಿಲ್ಲೆಯಲ್ಲಿ ಆಲೂರಿಗೆ ಅಗ್ರ ಸ್ಥಾನ

Published:
Updated:
ಪಿಯುಸಿ: ಜಿಲ್ಲೆಯಲ್ಲಿ ಆಲೂರಿಗೆ ಅಗ್ರ ಸ್ಥಾನ

ಹಾಸನ: ಪಿಯುಸಿ ಫಲಿತಾಂಶದಲ್ಲಿ ಹಾಸನ ಜಿಲ್ಲೆ ಎರಡು ಸ್ಥಾನಗಳಷ್ಟು ಮೇಲೇರಿದ್ದರೂ ಜಿಲ್ಲೆಯ ನಾಲ್ಕು ಸರ್ಕಾರಿ ಪದವಿಪೂರ್ವ ಕಾಲೇಜುಗಳ ಮಾತ್ರ ಶೇ 100ರಷ್ಟು ಫಲಿತಾಂಶ ದಾಖಲಿಸಲು ಯಶಸ್ವಿಯಾಗಿವೆ.ಚನ್ನರಾಯಪಟ್ಟಣ ತಾಲ್ಲೂಕು ಸಾತೇನಹಳ್ಳಿಯ ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಶ್ರೀನಿವಾಸಪುರದ ಸರ್ಕಾರಿ ಪದವಿಪೂರ್ವ ಕಾಲೇಜು, ಹಾಸನ ತಾಲ್ಲೂಕು ಬೈಲಹಳ್ಳಿಯ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಸಕಲೇಶಪುರ ತಾಲ್ಲೂಕು ಯಸಳೂರಿನ ಸರ್ಕಾರಿ ಪದವಿಪೂರ್ವ ಕಾಲೇಜು ಬಿಟ್ಟು ಬೇರೆ ಯಾವ ಕಾಲೇಜಿನಲ್ಲೂ ಶೇ 100ಫಲಿತಾಂಶ ಬಂದಿಲ್ಲ. ಆದರೆ ಶೂನ್ಯ ಫಲಿತಾಂಶ ದಾಖಲೆಯ ಕಾಲೇಜುಗಳೂ ಜಿಲ್ಲೆಯಲ್ಲಿಲ್ಲ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ತಾಲ್ಲೂಕುವಾರು ಫಲಿತಾಂಶದಲ್ಲಿ ಶೇ 85.53 ಫಲಿತಾಂಶ ದಾಖಲಿಸುವ ಮೂಲಕ ಆಲೂರು ತಾಲ್ಲೂಕು ಮೊದಲ ಸ್ಥಾನ ಪಡೆದಿದೆ. ಇದರ ನಂತರದ ಸ್ಥಾನಗಳನ್ನು ಪಡೆದ ತಾಲ್ಲೂಕುಗಳ ವಿವರ ಇಂತಿದೆ :ಸಕಲೇಶಪುರ (ಶೇ 81.74), ಬೇಲೂರು (ಶೇ 80.83), ಹಾಸನ (ಶೇ 75.94), ಚನ್ನರಾಯಪಟ್ಟಣ (ಶೇ 75.62), ಅರಕಲಗೂಡು (ಶೇ 73.85), ಅರಸೀಕೆರೆ (ಶೇ 72.25) ಹಾಗೂ ಶೇ 66.66 ಫಲಿತಾಂಶ ದಾಖಲಿಸುವ ಮೂಲಕ ಹೊಳೆನರಸೀಪುರ ತಾಲ್ಲೂಕು ಕೊನೆಯ ಸ್ಥಾನ ಪಡೆದುಕೊಂಡಿದೆ.ಜಿಲ್ಲೆಯಲ್ಲಿ ಕಲಾ ವಿಭಾಗದ ವಿದ್ಯಾರ್ಥಿಗಳು ಶೇ 59.74, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಶೇ 71.67 ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಶೇ 51.26 ಫಲಿತಾಂಶ ದಾಖಲಿಸಿದ್ದಾರೆ. ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತಲೂ ಗ್ರಾಮಾಂತರ ವಿದ್ಯಾರ್ಥಿಗಳು ಈ ಬಾರಿ ಉತ್ತಮ ಸಾಧನೆ ಮಡಿದ್ದಾರೆ. ನಗರ ಪ್ರದೇಶದಲ್ಲಿ ಶೇ 60.13 ಫಲಿತಾಂಶ ಬಂದಿದ್ದರೆ, ಗ್ರಾಮಾಂತರ ಪ್ರದೇಶದಲ್ಲಿ ಶೇ 63.12ರಷ್ಟು ಫಲಿತಾಂಶ ಬಂದಿದೆ.ಕಾಲೇಜುಗಳ ಸಾಧನೆ: ಹಾಸನದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಶೇ 64 ಫಲಿತಾಂಶ ದಾಖಲಿಸಿದೆ.  ಪರೀಕ್ಷೆಗೆ ಹಾಜರಾದ 409 ವಿದ್ಯಾರ್ಥಿಗಳಲ್ಲಿ 262 ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದಾರೆ.ಇಬ್ಬರು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದರೆ, 117 ಪ್ರಥಮ, 88 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ವಾಣಿಜ್ಯ ವಿಭಾಗದ ಅನುಷಾ ಎಚ್.ಕೆ 514(ಶೇ 85.66) ಹಾಗೂ ಕಲಾ ವಿಭಾಗದಲ್ಲಿ ಕೆ.ಜೆ. ಸರಸ್ವತಿ 513 (ಶೇ 85.5) ಅಂಕ ಪಡೆದಿದ್ದಾರೆ.ಮೊಸಳೆ ಹೊಸಹಳ್ಳಿ: ತಾಲ್ಲೂಕಿನ ಮೊಸಳೆಹೊಸಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಶೇ 76 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 50 ವಿದ್ಯಾರ್ಥಿಗಳಲ್ಲಿ 38 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, 22 ಪ್ರಥಮ ಹಾಗೂ 10 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಎಸ್.ಪಿ. ಪುಷ್ಪಾ 498(ಶೇ 83) ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.ಜಾವಗಲ್ ವರದಿ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಶೇ 72 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 169 ವಿದ್ಯಾರ್ಥಿಗಳ ಪೈಕಿ 121 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಪ್ರಥಮ 56 ಹಾಗೂ 41 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಹೊಂದಿದ್ದಾರೆ.ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 6 ವಿದ್ಯಾರ್ಥಿಗಳಲ್ಲಿ 5 ವಿದ್ಯಾರ್ಥಿಗಳು ತೇರ್ಗಡೆಯಾದರೆ, ವಾಣಿಜ್ಯ ವಿಭಾಗದಲ್ಲಿ 63 ವಿದ್ಯಾರ್ಥಿಗಳ ಪೈಕಿ 49 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಲಾ ವಿಭಾಗದಲ್ಲಿ 100 ವಿದ್ಯಾರ್ಥಿಗಳ ಪೈಕಿ 67 ವಿದ್ಯಾರ್ಥಿಗಳು ಉತ್ತಿರ್ಣಾರಾಗಿದ್ದಾರೆ.ವಾಣಿಜ್ಯ ವಿಭಾಗದಲ್ಲಿ ಕೆ.ಆರ್.ರಘು 515(ಶೇ 85.83) ಹಾಗೂ ಚೈತ್ರಾ 513 (ಶೇ 85.5) , ಕಲಾ ವಿಭಾಗದಲ್ಲಿ ಕೆ.ವಿ.ಸೌಮ್ಯಾ 511 (ಶೇ 85.16) ಫಲಿತಾಂಶ ದಾಖಲಿಸಿದ್ದಾರೆ.ಕೂಳಗುಂದ ಸರ್ಕಾರಿ ಪದವಿ ಪೂರ್ವ ಕಾಲೇಜು ಶೇ 80 ಫಲಿತಾಂಶ ದಾಖಲಿಸಿದೆ. ಪರೀಕ್ಷೆ ಬರೆದ 21 ವಿದ್ಯಾರ್ಥಿಗಳಲ್ಲಿ 19 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ವಾಣಿಜ್ಯ ವಿಭಾಗದಿಂದ ಪರೀಕ್ಷೆಗೆ ಹಾಜರಾದ 11 ವಿದ್ಯಾರ್ಥಿಗಳು ತೇರ್ಗಡೆಯಾದರೆ. ಕಲಾ ವಿಭಾಗದ 10 ವಿದ್ಯಾರ್ಥಿಗಳಲ್ಲಿ 8 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಲಾ ವಿಭಾಗದಲ್ಲಿ ಅನಿತಾ 449 ಹಾಗೂ ವಾಣಿಜ್ಯ ವಿಭಾಗದಲ್ಲಿ ಭವ್ಯಾ 440 ಅಂಕ ಗಳಿಸಿದ್ದಾರೆ.ಹೊಳೆನರಸೀಪುರ ವರದಿ: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಲ್ಲೂಕಿನ ಮಳಲಿ ಮತ್ತು ಹಳ್ಳಿಮೈಸೂರು ಕಾಲೇಜುಗಳು ಉತ್ತಮ ಫಲಿತಾಂಶ ಪಡೆದಿದೆ. ಮಳಲಿ ಕಾಲೇಜಿನ ವಿದ್ಯಾರ್ಥಿನಿ ಶೋಭಾ ಕಲಾ ವಿಭಾಗದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ (ಶೇ 91) ಉತ್ತೀರ್ಣರಾಗಿದ್ದಾರೆ.  25 ವಿದ್ಯಾರ್ಥಿಗಳಲ್ಲಿ 10 ಮಂದಿ ಪ್ರಥಮ ಹಾಗೂ 10 ಮಂದಿ ದ್ವಿತೀಯ ದರ್ಜೆ ಪಾಸಾಗಿದ್ದು, ಒಟ್ಟಾರೆ ಶೇ 92 ಫಲಿತಾಂಶ ದಾಖಲಿಸಿದೆ ಎಂದು ಉಪನ್ಯಾಸಕ ಹರೀಶ್ ತಿಳಿಸಿದ್ದಾರೆ. ಹಳ್ಳಿಮೈಸೂರು ಪದವಿ ಪೂರ್ವ ಕಾಲೇಜಿನ ಕಲಾವಿಭಾಗದಲ್ಲಿ 67 ವಿದ್ಯಾರ್ಥಿಗ ಳಲ್ಲಿ 26 ಮಂದಿ ಪ್ರಥಮ, 13 ಮಂದಿ ದ್ವಿತೀಯ ಹಾಗೂ 11 ಮಂದಿ ತೃತೀಯ ದರ್ಜೆಯಲ್ಲಿ ಪಾಸಾಗಿದ್ದು ಒಟ್ಟಾರೆ ಶೇ 74.62 ಫಲಿತಾಂಶ ದಾಖಲಿಸಿದೆ.ಹಳೇಬೀಡು ವರದಿ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದೆ ವಾಣಿಜ್ಯ ವಿಭಾಗದಲ್ಲಿ 28 ವಿದ್ಯಾರ್ಥಿಗಳ ಪೈಕಿ 27 ಮಂದಿ, ಕಲಾ ವಿಭಾಗದಲ್ಲಿ 103 ವಿದ್ಯಾರ್ಥಿಗಳಲ್ಲಿ 69 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ  ಎಂ.ಎಂ.ತೇಜ ಅತ್ಯುನ್ನತ ಶ್ರೇಣಿ (523) ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.ಚನ್ನರಾಯಪಟ್ಟಣ ವರದಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಟ್ಟಣದ ಸರ್ಕಾರಿ ಸ್ವತಂತ್ರ ಪದವಿ ಪೂರ್ವ(ಹೊಸದು) ಕಾಲೇಜಿಗೆ ಶೇ  86.21 ಫಲಿತಾಂಶ ಲಭಿಸಿದೆ. 203 ವಿದ್ಯಾರ್ಥಿಗಳಲ್ಲಿ  174 ಮಂದಿ ತೇರ್ಗಡೆ ಹೊಂದಿದ್ದಾರೆ. ನಾಲ್ವರು ಅತ್ಯುನ್ನತ ಶ್ರೇಣಿ, 72 ಮಂದಿ ಪ್ರಥಮ , 64 ಮಂದಿ ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ.    ಕಲಾವಿಭಾಗದಲ್ಲಿ ಎ.ಆರ್. ಅನಿತ.-541, ವಾಣಿಜ್ಯ ವಿಭಾಗದಲ್ಲಿ ಆಯಿಷಾ ಸಿದ್ದಿಕ್ -530, ಎಂ.ಎನ್.ರಕ್ಷಿತ -518, ವಿಜ್ಞಾನ ವಿಭಾಗದಲ್ಲಿ  ಎಚ್.ಎನ್. ಶ್ರುತಿ -514 ಅಂಕಗಳಿಸಿದ್ದಾರೆ ಎಂದು ಕಾಲೇಜು ಪ್ರಾಚಾರ್ಯ ಈರೇಗೌಡ ತಿಳಿಸಿದ್ದಾರೆ.ಸ್ವತಂತ್ರ ಪದವಿಪೂರ್ವ ಕಾಲೇಜು ಶೇ 84.45 ಫಲಿತಾಂಶ ಪಡೆದಿದೆ. 296 ವಿದ್ಯಾರ್ಥಿಗಳಲ್ಲಿ 250 ಮಂದಿ ಪಾಸಾಗಿದ್ದಾರೆ.ಅತ್ಯುನ್ನತ ಶ್ರೇಣಿ- 12, ಪ್ರಥಮ-148,  ದ್ವಿತೀಯ ದರ್ಜೆ-66 ಮಂದಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಎಸ್.ಎನ್. ಮದನ್‌ಕುಮಾರ್-565,ಡಿ.ಅರ್ಪಿತ- 560,  ಎನ್. ಕಾರ್ತಿಕ್-545, ಸಿ.ಎಂ. ಕವನಶ್ರೀ- 538, ಕೆ. ಕೌಶಿಕ್- 533, ಪಿ.ಹೇಮಂತ್‌ಕುಮಾರ್-524, ಎ.ಆರ್. ನಿರ್ಮಲ-517, ಆರ್. ರಕ್ಷಿತ- 513, ಕಲಾವಿಭಾಗದ ಎ.ಬಿ. ಅಕ್ಷತಾ- 524, ವೈ.ಎಚ್. ರಂಜಿತ-515, ಟಿ.ಎಲ್. ರಮ್ಯಶ್ರೀ- 514, ವಾಣಿಜ್ಯ ವಿಭಾಗದ ಎನ್.ಬಿ. ಶಿಲ್ಪ- 520 ಅಂಕ ಗಳಿಸಿ ಸಾಧನೆ ಮೆರೆದಿದ್ದಾರೆ ಎಂದು ಪ್ರಾಚಾರ್ಯ ಕೆ.ವಿ ಮೂರ್ತಿ ತಿಳಿಸಿದ್ದಾರೆ.ಶೇ100 ಫಲಿತಾಂಶ: ತಾಲ್ಲೂಕಿನ ಸಾತೇನಹಳ್ಳಿಯ ಸರ್ಕಾರಿ ಪದವಿಪೂರ್ವ ಕಾಲೇಜು ಶೇ 100 ಫಲಿತಾಂಶ ದಾಖಲಿಸಿದೆ. 24 ವಿದ್ಯಾರ್ಥಿಗಳಲ್ಲಿ  ಪ್ರಥಮ ದರ್ಜೆ- 14, ದ್ವಿತೀಯ ದರ್ಜೆ- 6 ಉಳಿದವರು ತೃತೀಯ ದಜೆಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಕಾಲೇಜು ಪ್ರಾಚಾರ್ಯ ಶಿವರಾಂ ತಿಳಿಸಿದ್ದಾರೆ.ನವೋದಯ ಪದವಿಪೂರ್ವ ಕಾಲೇಜಿಗೆ ಶೇ 72.51ಫಲಿತಾಂಶ: ಪಟ್ಟಣದ ನವೋದಯ ಪದವಿಪೂರ್ವ ಕಾಲೇಜಿಗೆ ಶೇ 72. 51 ಫಲಿತಾಂಶ ಪಡೆದಿದೆ ಎಂದು ಕಾಲೇಜು ಪ್ರಾಚಾರ್ಯ ಓ.ಆರ್. ರಂಗೇಗೌಡ  ತಿಳಿಸಿದ್ದಾರೆ. 360 ವಿದ್ಯಾರ್ಥಿಗಳಲ್ಲಿ  265 ಮಂದಿ ಪಾಸಾಗಿದ್ದಾರೆ.ಅತ್ಯುನ್ನತ ಶ್ರೇಣಿ-10,  ಪ್ರಥಮ ದರ್ಜೆ-120, ದ್ವಿತೀಯ ದರ್ಜೆಯಲ್ಲಿ 87 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

 ವಿಜ್ಞಾನ ವಿಭಾಗ ಎಂ.ಆರ್. ಶುಭ- 569 ಅಂಕ  ಪಡೆದು ತಾಲ್ಲೂಕಿಗೆ ಪ್ರಥಮ ಸ್ಥಾನಗಳಿಸಿದ್ದಾಳೆ. ಸಿ.ಎಂ. ಅಮಿತಾ- 523, ಕಲಾವಿಭಾಗದ ಜಿ.ಆರ್. ರಾಖೇಶ್- 511, ಎಂ.ಆರ್. ನಿರೂಷಾ ಹಾಗೂ ಬಿ.ಎಚ್. ನಾಗರತ್ನ, ತಲಾ 510, ವಾಣಿಜ್ಯ ವಿಭಾಗದ ಟಿ.ಎನ್.ಮಾನಸ- 551, ಸಿ.ಎಂ. ಕಾವ್ಯಶ್ರೀ- 532, ಸಿ.ಡಿ. ಅಶ್ವಿನಿ  ಹಾಗೂ ಎಸ್.ಜೆ. ಸರೋಜ ತಲಾ 526, ನಾಬಿಮುಲ್ಲಾ ಬೇಗ್- 522 ಅಂಕ ಪಡೆದು ಸಾಧನೆ ಮೆರೆದಿದ್ದಾರೆ. ಅರಸೀಕೆರೆ ವರದಿ:  ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಗದ್ಗುರು ಕೋಡಿಮಠ ಪದವಿ ಪೂರ್ವ ಕಾಲೇಜು ಹಾಗೂ ಪ್ರತಿಭಾ ಕಾಲೇಜು ಉತ್ತಮ ಸಾಧನೆ ಮಾಡಿವೆ.ಕೋಡಿಮಠ ಕಾಲೇಜಿನಲ್ಲಿ 374 ವಿದ್ಯಾರ್ಥಿಗಳಲ್ಲಿ 279 ಮಂದಿ ಉತ್ತೀರ್ಣರಾಗಿದ್ದು, ಶೇ 77.67 ಫಲಿತಾಂಶ ಬಂದಿದೆ. ವಿಜ್ಞಾನ ವಿದ್ಯಾರ್ಥಿಪಿ.ಎಂ ಶಿವಪ್ರಸಾದ್ - 574 ಅಂಕಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾನೆ. 40 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ ಎಂದು ಪ್ರಾಂಶುಪಾಲ ಪಿ.ಸಿ.ಬಸವರಾಜ್ ತಿಳಿಸಿದ್ದಾರೆ.  ವಿಜ್ಞಾನ ವಿಭಾಗದಲ್ಲಿ 170 ವಿದ್ಯಾರ್ಥಿಗಳಲ್ಲಿ 20 ಮಂದಿ ಅತ್ಯುನ್ನತ ಶ್ರೇಣಿ, 50 ಮಂದಿ ಪ್ರಥಮ ದರ್ಜೆ, 34 ದ್ವಿತಿಯ, 34 ಸಾಮಾನ್ಯ ದರ್ಜೆಯಲ್ಲಿ ಪಾಸಾಗಿದ್ದಾರೆ.ಕಲಾ ವಿಭಾಗದ 120 ಮಂದಿಯಲ್ಲಿ 84 ಮಂದಿ ಪಾಸಾಗಿದ್ದು, 5 ಅತ್ಯುನ್ನತ ಶ್ರೇಣಿ, 30 ಪ್ರಥಮ 21 ದ್ವಿತಿಯಾ, 28 ಸಾಮಾನ್ಯ ದರ್ಜೆ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 84 ಮಂದಿಗೆ 79 ಮಂದಿ ತೇರ್ಗಡೆ ಹೊಂದಿದ್ದು, 15 ಮಂದಿ ಅತ್ಯುನ್ನತ, 47 ಪ್ರಥಮ, 12 ದ್ವಿತಿ ಯಾ, 5 ಸಾಮಾನ್ಯ ದರ್ಜೆಯಲ್ಲಿ ಪಾಸಾಗಿ ಶೇಕಡ 94  ಸಾಧನೆ ಮಾಡಿದ್ದಾರೆ.ಪ್ರತಿಭಾ ಕಾಲೇಜು: ಕಲಾ ವಿಭಾಗದಲ್ಲಿ 230 ವಿದ್ಯಾರ್ಥಿಗಳಿಗೆ 175 ಮಂದಿ ತೇರ್ಗಡೆ ಹೊಂದಿದ್ದು, ಶೇ 75.01, ವಾಣಿಜ್ಯ ವಿಭಾಗದಲ್ಲಿ 76 ವಿದ್ಯಾರ್ಥಿಗಳಲ್ಲಿ 51 ಮಂದಿ ತೇರ್ಗಡೆಯಾಗಿ ಶೇ 79 ಮತ್ತು ವಿಜ್ಞಾನ ವಿಭಾಗದಲ್ಲಿ 72 ವಿದ್ಯಾರ್ಥಿಗಳ ಪೈಕಿ 32 ಮಂದಿ ಪಾಸಾಗಿದ್ದು, ಶೇ 41 ಫಲಿತಾಂಶ ಬಂದಿದೆ.ಆದಿಚುಂಚನಗಿರಿ ಕಾಲೇಜಿನಲ್ಲಿ 27 ಮಂದಿಗೆ 22 ಮಂದಿ ತೇರ್ಗಡೆಯಾಗಿದ್ದು, ಶೇ 81.82 ಫಲಿತಾಂಶ ಬಂದಿದೆ. ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ 30 ವಿದ್ಯಾರ್ಥಿಗಳಲ್ಲಿ  25 ಮಂದಿ ಪಾಸಾಗಿದ್ದಾರೆ.11 ಪ್ರಥಮ 4ದ್ವಿತಿಯಾ, 10 ಸಾಮಾನ್ಯ, ವಾಣಿಜ್ಯ ವಿಭಾಗದಲ್ಲಿ 27 ಮಂದಿಗೆ 24ಮಂದಿ ತೇರ್ಗಡೆ ಹೊಂದಿದ್ದು,10 ಪ್ರಥಮ ದರ್ಜೆ 10 ದ್ವಿತಿಯಾ 4 ಸಾಮಾನ್ಯ ವಿಜ್ಞಾನ ವಿಭಾಗದಲ್ಲಿ 4 ಮಂದಿಗೆ 3ಮಂದಿ ತೇರ್ಗಡೆ ಹೊಂದಿದ್ದು, 2ಪ್ರಥಮ 1ದ್ವಿತಿಯಾ ದರ್ಜೆಯಲ್ಲಿ ಪಾಸಾಗಿದ್ದಾರೆ.   ಕಿತ್ತನಕೆರೆ ಶಿವಲಿಂಗಸ್ವಾಮಿ ಸಂ.ಪ.ಪೂ ಕಾಲೇಜಿನ ಕಲಾ ವಿಭಾಗದಲ್ಲಿ 57 ವಿದ್ಯಾರ್ಥಿಗಳಲ್ಲಿ 45 ಮಂದಿ ತೇರ್ಗಡೆಯಾಗಿದ್ದು, ಶೇ 81ರಷ್ಟು ಫಲಿ ತಾಂಶ ಬಂದಿದೆ. 20 ಮಂದಿ ಪ್ರಥಮ ದರ್ಜೆಯಲ್ಲೂ 13 ದ್ವಿತಿಯ ಹಾಗೂ 8 ಮಂದಿ ತೃತೀಯ ಸ್ಥಾನದಲ್ಲಿ ಪಾಸಾಗಿದ್ದಾರೆ. ಇದೇ ಕಾಲೇಜಿನ ಎನ್.ವಿ ಸಂತೋಷ 540 ಅಂಕ ಗಳಿಸಿದ್ದಾರೆ.ಕಣಕಟ್ಟೆ ವಿದ್ಯಾರಣ್ಯ ಸಂ.ಪ,ಪೂ ಕಾಲೇಜಿನಲ್ಲಿ ಪರೀಕ್ಷೆ ಬರೆದ 72 ವಿದ್ಯಾರ್ಥಿಗಳ ಪೈಕಿ 60 ಮಂದಿ ಪಾಸಾಗಿದ್ದು, ಅತ್ಯುನ್ನತ 2, 37 ಪ್ರಥಮ ದರ್ಜೆ, 11 ದ್ವಿತಿಯ ಹಾಗೂ 10 ಸಾಮಾನ್ಯ ದರ್ಜೆ ಪಡೆದಿದ್ದಾರೆ.ಹಿರೀಸಾವೆ ವರದಿ: ಪಟ್ಟಣದ ನಾಗಮ್ಮ ಶ್ರೀಕಂಠಯ್ಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಶೇ 92 ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಶೇ 82.61 ಫಲಿತಾಂಶ ಪಡೆದಿವೆ. ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಲಕ್ಷ್ಮಣ-536, ಕಲಾ ವಿಭಾಗದ ಅನಿಲ್‌ಕುಮಾರ್- 524, ದಿವಾಕರ್-510, ದಯಾನಂದ್-509 ಅಂಕ ಗಳಿಸಿದ್ದಾರೆ. ಕನ್ನಡ, ಇಂಗ್ಲಿಷ್, ರಾಜ್ಯ ಶಾಸ್ತ್ರ, ಬಿಜಿನೆಸ್‌ಸ್ಟಡಿಶ್ ವಿಷಯಗಳಲ್ಲಿ ಶೇ 100 ಫಲಿತಾಂಶ ಬಂದಿದೆ.  ನಾಗಮ್ಮ ಶ್ರೀಕಂಠಯ್ಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಕಲಾ ವಿಭಾಗ  ಶೇ 91 ಮತ್ತು ವಾಣಿಜ್ಯ ವಿಭಾಗದಲ್ಲಿ ಶೇ 93 ಫಲಿತಾಂಶ ಗಳಿಸಿದೆ. ಕಲಾ ವಿಭಾಗದ ಪವಿತ್ರ 509, ಪಲ್ಲವಿ 503 ಅಂಕ ಗಳಿಸಿದ್ದಾರೆ. ಕನ್ನಡ, ರಾಜ್ಯ ಶಾಸ್ತ್ರ ಮತ್ತು ಬಿಜಿನೆಸ್ ಸ್ಟಡಿಶ್ ವಿಷಯಗಳಲ್ಲಿ 100 ಕ್ಕೆ 100 ಫಲಿತಾಂಶ ಪಡೆದಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ. ಅರಕಲಗೂಡು ವರದಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಟ್ಟಣದ ಬಿ.ಜಿ.ಎಸ್  ವಿಜ್ಞಾನ ಪದವಿ ಪೂರ್ವ ಕಾಲೇಜಿಗೆ ಶೇ 75 ಫಲಿತಾಂಶ ಲಭಿಸಿದೆ. 60 ವಿದ್ಯಾರ್ಥಿಗಳಲ್ಲಿ 45 ಮಂದಿ ತೇರ್ಗಡೆಯಾಗಿದ್ದಾರೆ.  ಫರೀನ್ ತಾಜ್ 504 ಅಂಕ ಪಡೆದಿದ್ದಾರೆ. ಪ್ರಥಮ ದರ್ಜೆ-20, ದ್ವಿತೀಯ ದರ್ಜೆ- 10, ತೃತೀಯ ದರ್ಜೆ-15 ಮಂದಿ  ಪಡೆದಿದ್ದಾರೆ ಎಂದು ಎಂದು ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ತಿಳಿಸಿದ್ದಾರೆ.ಬಾಲಕಿಯರ ಪದವಿ ಪೂರ್ವ ಕಾಲೇಜು: ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಶೇ 68 ಫಲಿತಾಂಶ ದಾಖಲಿಸಿದೆ. 247 ವಿದ್ಯಾರ್ಥಿಗಳಲ್ಲಿ 179 ಮಂದಿ ತೇರ್ಗಡೆಯಾಗಿದ್ದಾರೆ. ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ 74 ಮಂದಿ ತೇರ್ಗಡೆಯಾ ಗಿದ್ದು ಪಿ.ಎಂ.ಶ್ವೇತ -561, ಜಿ.ಡಿ. ಧನಲಕ್ಷಿ-516, ನಗ್ಮಾ ಸುಲ್ತಾನ್-518, ಎಚ್. ಸಿ. ಸುಧಾ- 514 ಅಂಕ ಗಳಿಸಿ ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ. ಪ್ರಥಮ ದರ್ಜೆ-71, ದ್ವಿತೀಯ ದರ್ಜೆ-52 ಹಾಗೂ ತೃತೀಯ ದರ್ಜೆಯಲ್ಲಿ 56 ಮಂದಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 12 ವಿದ್ಯಾರ್ಥಿಗಳಲ್ಲಿ ಇಬ್ಬರು ಮಾತ್ರ ತೇರ್ಗಡೆಯಾಗಿದ್ದಾರೆ ಎಂದು ಪ್ರಾಂಶುಪಾಲ ಕೃಷ್ಣಮೂರ್ತಿ ತಿಳಿಸಿದ್ದಾರೆ.ಸಕಲೇಶಪುರ ವರದಿ: ಪಿಯುಸಿ ಪರೀಕ್ಷೆಯಲ್ಲಿ ತಾಲ್ಲೂಕಿನ ಯಸಳೂರು ಹೋಬಳಿ ಕೇಂದ್ರದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಶೇ 100 ಫಲಿತಾಂಶ ಬಂದಿದೆ. 19 ವಿದ್ಯಾರ್ಥಿಗಳಲ್ಲಿ 15 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 3 ವಿದ್ಯಾರ್ಥಿಗಳು  ದ್ವಿತೀಯ ದರ್ಜೆಯಲ್ಲಿ ಉತೀರ್ಣರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry