ಪಿಯು ಕ್ರೀಡಾಕೂಟ ಆರಂಭ

7

ಪಿಯು ಕ್ರೀಡಾಕೂಟ ಆರಂಭ

Published:
Updated:

ಗುಲ್ಬರ್ಗ: ನಗರದ ಸಂತ ಜೋಸೆಫ್ ಕಾಲೇಜಿನ ಪೂಜಾ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದ ವೇಗದ ಓಟಗಾರ್ತಿಯಾಗಿ ಹೊರಹೊಮ್ಮಿದರು.  ನಗರದ ನೂತನ ವಿದ್ಯಾಲಯದಲ್ಲಿ ಶುಕ್ರವಾರ ಆರಂಭಗೊಂಡ ಎರಡು ದಿನಗಳ ಕ್ರೀಡಾಕೂಟದ 100 ಮೀಟರ್ ಓಟದ ಸ್ಪರ್ಧೆಯಲ್ಲಿ ರೇಣುಕಾ ಹಾಗೂ ತಬ್ಸುಮ್ ಅವರನ್ನು ಹಿಂದಿಕ್ಕಿದ ಪೂಜಾ ಮೊದಲಿಗರಾದರು. 200 ಮೀಟರ್ ಓಟದಲ್ಲೂ ತನ್ನ ಪಾರಮ್ಯ ಮುಂದುವರಿಸಿದ ಪೂಜಾ ಪ್ರಥಮ ಪ್ರಥಮ ಸ್ಥಾನ ಪಡೆದರು. ಆ ಮೂಲಕ ಸತತ ಎರಡನೇ ವರ್ಷ ರಾಜ್ಯಮಟ್ಟಕ್ಕೆ ಆಯ್ಕೆಯಾದರು.ಉಳಿದಂತೆ ಬಾಲಕಿಯರ ವಿಭಾಗದ ದೂರದ ಓಟದ ಸ್ಪರ್ಧೆಗಳಲ್ಲಿ ಚಿಂಚೋಳಿಯ ಚಂದನಕೇರಾ ಸರ್ಕಾರಿ ಪಿಯು ಕಾಲೇಜಿನ ಸುರೇಖಾ ಹ್ಯಾಟ್ರಿಕ್ ಪ್ರಶಸ್ತಿ ಪಡೆದರು. 1500ಮೀ, 3000 ಮೀ ಹಾಗೂ 5000 ಮೀ ಓಟದಲ್ಲಿ ಪ್ರಥಮ ಸ್ಥಾನ ಪಡೆದರು. ಉಳಿದಂತೆ ದಿನ ಬಾಲಕಿಯರ ಸ್ಪರ್ಧೆಗಳ ವಿವರ ಇಂತಿವೆ. 100 ಮೀ.ಓಟ-  ಪೂಜಾ(ಪ್ರ), ರೇಣುಕಾ (ದ್ವಿ), ತಬ್ಸುಮ್ (ತೃ)

200 ಮೀ. ಓಟ- ಪೂಜಾ (ಪ್ರ), ಕನ್ಯಾಕುಮಾರಿ (ದ್ವಿ), ಅಶ್ವಿನಿ (ತೃ)

400 ಮೀ. ಓಟ- ರೇಣುಕಾ (ಪ್ರ), ನಂದಾ (ದ್ವಿ), ಹೀರಾಬಾಯಿ (ತೃ)

800 ಮೀ. ಓಟ- ಲಕ್ಷ್ಮೀ (ಪ್ರ), ಮಲ್ಲಮ್ಮ (ದ್ವಿ), ಸ್ನೇಹಾ (ತೃ)

1500 ಮೀ. ಓಟ- ಸುರೇಖಾ (ಪ್ರ), ಸುಶೀಲ (ದ್ವಿ), ಭಾಗ್ಯಶ್ರೀ (ತೃ)

3,000 ಮೀ. ಓಟ- ಸುರೇಖಾ (ಪ್ರ), ರೂಪಾ (ದ್ವಿ), ಭಾಗ್ಯಶ್ರೀ (ತೃ)

5,000 ಮೀ. ಓಟ- ಸುರೇಖಾ (ಪ್ರ), ಕವಿತಾ (ದ್ವಿ), ರೇಣುಕಾ (ತೃ)

ಜಾವೆಲಿನ್ ಎಸೆತ- ಸಂಗೀತಾ (ಪ್ರ), ವೈಷ್ಣವಿ (ದ್ವಿ), ಕಾವೇರಿ (ತೃ)

ಶಾಟ್‌ಪುಟ್-ಐಶ್ವರ್ಯ(ಪ್ರ), ಹಮೀದಾ ಬೇಗಂ(ದ್ವಿ), ಶೋಭಾ (ತೃ)

ಡಿಸ್ಕಸ್ ಎಸೆತ- ಶೋಭಾ (ಪ್ರ), ಶೀಲಾಬಾಯಿ (ದ್ವಿ), ಫರ್ಹಾನಾ (ತೃ)

4X400 ಮೀ. ಓಟ- ಚಂದನಕೇರಾ ಪಿಯು ಕಾಲೇಜು (ಪ್ರ), ಸೇಡಂ ಮಾತೃಛಾಯಾ ಪಿಯು ಕಾಲೇಜು (ದ್ವಿ)  

4X100 ಮೀ. ಓಟ- ನರ್ಮದಾದೇವಿ ಪಿಯು ಕಾಲೇಜು (ಪ್ರ), ಚಿಂಚೋಳಿ ಪಿಯು ಕಾಲೇಜು (ದ್ವಿ)

ಹಲವು ಸ್ಪರ್ಧೆಗಳು ಶುಕ್ರವಾರ ನಡೆದವು. ಶನಿವಾರವೂ ಕ್ರೀಡಾಕೂಟ ಮುಂದುವರಿಯಲಿದ್ದು, ಸಮಾರೋಪ ಸಮಾರಂಭ ನಡೆಯಲಿದೆ.ಉದ್ಘಾಟನೆ: ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಾರ್ಯಾಲಯ ಹಾಗೂ ಮಿಲಿಂದ ಪದವಿಪೂರ್ವ ಕಾಲೇಜಿನ ಸಹಯೋಗದಲ್ಲಿ ಆಯೋಜಿಸದ ಕ್ರೀಡಾಕೂಟವನ್ನು ಬೆಳಿಗ್ಗೆ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮಾರುತಿರಾವ ಡಿ. ಮಾಲೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, `ಬಿಸಿಲಿನ ಝಳದಲ್ಲೂ ಸ್ಪರ್ಧಿಸುವ ವಿದ್ಯಾರ್ಥಿಗಳ ಸ್ಪೂರ್ತಿಯು ಮೆಚ್ಚುವಂತದ್ದು.

ಇದೇ ರೀತಿಯಾಗಿ ರಾಜ್ಯಮಟ್ಟದಲ್ಲಿ ಜಯ ಗಳಿಸಿ ಜಿಲ್ಲೆಗೆ ಕೀರ್ತಿ ತರಬೇಕು. ಕ್ರೀಡಾಪಟುವಿಗೆ ಸ್ಪೂರ್ತಿ ಮುಖ್ಯವೇ ಹೊರತು ಸೋಲು-ಗೆಲುವಲ್ಲ' ಎಂದರು.`ಉತ್ತಮ ಪ್ರದರ್ಶನ ನೀಡಿ ಯಶಸ್ಸು ಪಡೆಯಿರಿ' ಎಂದು ಅಧ್ಯಕ್ಷತೆ ವಹಿಸಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಎಂ. ಸಾಳುಂಕೆ ಹಾರೈಸಿದರು.ನೂತನ ವಿದ್ಯಾಲಯ ಸಂಸ್ಥೆಯ ಕಾರ್ಯದರ್ಶಿ ಶ್ಯಾಮರಾವ ಖಣಗೆ, ಸಂಸ್ಥೆಯ ಕ್ರೀಡಾ ಸಮಿತಿ ಅಧ್ಯಕ್ಷ ಡಾ.ಗೌತಮ ಆರ್. ಜಾಹಗೀರದಾರ, ಇಲಾಖೆಯ ಸಹಾಯಕ ನಿರ್ದೇಶಕ ಎ.ಎಚ್.ಎಲಿಮನಿ, ಕ್ರೀಡಾ ಕೂಟದ ಸಂಚಾಲಕ ಎಸ್.ವಿ. ದೇಶಪಾಂಡೆ, ಸಿದ್ಧರಾಮ ಸ್ಥಾವರಮಠ, ವಾಸುದೇವ ಕುಲಕರ್ಣಿ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry