ಸೋಮವಾರ, ಜೂನ್ 21, 2021
30 °C

ಪಿಯು ಪರೀಕ್ಷೆ: ಒಬ್ಬ ವಿದ್ಯಾರ್ಥಿ ಡಿಬಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಪದವಿ ಪೂರ್ವ ದ್ವಿತೀಯ ವರ್ಷದ ಸಮಾಜಶಾಸ್ತ್ರ ಹಾಗೂ ವಾಣಿಜ್ಯ ವಿಭಾಗದ ಲೆಕ್ಕಶಾಸ್ತ್ರ ವಿಷಯ ಪರೀಕ್ಷೆ ಶುಕ್ರವಾರ ನಡೆ­ಯಿತು. ಮಾನ್ವಿ ಪರೀಕ್ಷಾ ಕೇಂದ್ರ­ವೊಂದರಲ್ಲಿ ನಕಲು ಮಾಡುತ್ತಿದ್ದ ಒಬ್ಬ ವಿದ್ಯಾರ್ಥಿಯನ್ನು ಡಿಬಾರ್ ಮಾಡಲಾ­ಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಮೂಲಗಳು ತಿಳಿಸಿವೆ.ಜಿಲ್ಲೆಯಲ್ಲಿ ಸಮಾಜಶಾಸ್ತ್ರ ವಿಷಯ ಪರೀಕ್ಷೆಗಾಗಿ ಒಟ್ಟು 7,592 ವಿದ್ಯಾರ್ಥಿ­ಗಳು ನೋಂದಣಿ ಮಾಡಿ­ಕೊಂಡಿದ್ದು, ಇದರಲ್ಲಿ 7,011 ವಿದ್ಯಾರ್ಥಿಗಳು ಹಾಜರಾಗಿದ್ದರು. 581 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ವಾಣಿಜ್ಯ ವಿಭಾಗದ ಲೆಕ್ಕಶಾಸ್ತ್ರ ವಿಷಯ ಪರೀಕ್ಷೆಗೆ 3,507 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ 3,335 ವಿದ್ಯಾರ್ಥಿಗಳು ಹಾಜರಾಗಿದ್ದರು. 172 ವಿದ್ಯಾರ್ಥಿಗಳು ಗೈರು ಹಾಜರಾ­ಗಿದ್ದರು.ಶನಿವಾರ ಭೌತಶಾಸ್ತ್ರ ಮತ್ತು ವಾಣಿಜ್ಯ ವಿಭಾಗದ ಆರ್ಥಿಕ ವಿಷಯದ ಪರೀಕ್ಷೆ ನಡೆಯಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ­ನಿರ್ದೇಶಕ ಎಸ್‌.ಗುಂಡೂರಾವ್ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.