ಸೋಮವಾರ, ಮಾರ್ಚ್ 1, 2021
30 °C

ಪಿಯು ಪ್ರವೇಶ: ದಾಖಲಾತಿಗೆ ನೂಕುನುಗ್ಗಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಿಯು ಪ್ರವೇಶ: ದಾಖಲಾತಿಗೆ ನೂಕುನುಗ್ಗಲು

ಮೈಸೂರು: ನಗರದ ಪದವಿಪೂರ್ವ ಕಾಲೇಜುಗಳಲ್ಲಿ ಪ್ರಥಮ ಪಿಯು ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಭರದಿಂದ ಸಾಗಿದ್ದು, ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ನೂಕುನುಗ್ಗಲು ಇದೆ. ವಿಜ್ಞಾನ ವಿಭಾಗದಲ್ಲಿ ಪಿಸಿಎಂಬಿ, ಕಲಾ ವಿಭಾಗದಲ್ಲಿ ಎಚ್‌ಇಜಿಪಿ, ವಾಣಿಜ್ಯ ವಿಭಾಗದಲ್ಲಿ ಸಿಇಬಿಎ  ಸಂಯೋಜನೆಗಳಿಗೆ ವ್ಯಾಪಕ ಬೇಡಿಕೆ ಇದೆ.  

 

ನಗರದ ಸದ್ವಿದ್ಯಾ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ (ಅನುದಾನರಹಿತ) ವಿಜ್ಞಾನ ಮತ್ತು ವಾಣಿಜ್ಯ ವಿಷಯಗಳ ಅಧ್ಯಯನಕ್ಕೆ ಅವಕಾಶ ಇದೆ. ಇಲ್ಲಿ ವಿವಿಧ ವಿಭಾಗಗಳಿಗೆ ಪ್ರವೇಶ ಕೋರಿ ಈವರೆಗೆ ಮೂರು ಸಾವಿಕ್ಕೂ ಅಧಿಕ ವಿದ್ಯಾರ್ಥಿಗಳೂ ಅರ್ಜಿ ಸಲ್ಲಿಸಿದ್ದಾರೆ. ಮೇ 27ರಂದು ಮೊದಲ ಆಯ್ಕೆ ಪಟ್ಟಿ ಪ್ರಕಟವಾಗಲಿದೆ.ಸೀಟು ಹಂಚಿಕೆ: ಒಟ್ಟು ಸೀಟುಗಳಲ್ಲಿ ಸರ್ಕಾರಿ ಖೋಟಾದಲ್ಲಿ ರೋಸ್ಟರ್‌ ಪದ್ಧತಿಯಡಿ ಮೆರಿಟ್‌ ಆಧರಿಸಿ ಶೇ 50 ಮತ್ತು ಆಡಳಿತ ಮಂಡಳಿ ಖೋಟಾದಲ್ಲಿ ಶೇ 50 ಸೀಟುಗಳಿಗೆ ಪ್ರವೇಶ ನೀಡಲಾಗುತ್ತದೆ. ಕಳೆದ ಬಾರಿ ಸಾಮಾನ್ಯ ಶೇ 90, ಹಿಂದುಳಿದ ವರ್ಗ ಶೇ 75 ಮತ್ತು ಪರಿಶಿಷ್ಟ ಜಾತಿ ಮತ್ತು ಪಗಂಡದವರಿಗೆ ಶೇ 65 ಕಟ್‌ ಆಫ್‌ ಕೊನೆಗೊಂಡಿತ್ತು. 

ಮಾಹಿತಿಗೆ ದೂ: 0821 2429966 ಸಂಪರ್ಕಿಸಬಹುದು.ಮರಿಮಲ್ಲಪ್ಪ ಪದವಿಪೂರ್ವ ಕಾಲೇಜು (ಅನುದಾನಿತ): ಈ ವಿದ್ಯಾಸಂಸ್ಥೆಯಲ್ಲಿ ವಿಜ್ಞಾನ, ಕಲಾ ಮತ್ತು ವಾಣಿಜ್ಯ ವಿಷಯಗಳ ಕಲಿಕೆಗೆ ಅವಕಾಶ ಇದೆ. ಈ ಕಾಲೇಜಿನಲ್ಲಿ ಪ್ರವೇಶ ಬಯಸಿ ಸುಮಾರು ಐದೂವರೆ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಅರ್ಜಿಗಳು ಸಲ್ಲಿಸಿದ್ದಾರೆ. ಮೇ 28ರಂದು ಮೊದಲ ಆಯ್ಕೆ ಪಟ್ಟಿ ಪ್ರಕಟವಾಗಲಿದೆ.ಸೀಟು ಹಂಚಿಕೆ: ಒಟ್ಟು ಸೀಟುಗಳಲ್ಲಿ ಸರ್ಕಾರಿ ಖೋಟಾದಲ್ಲಿ ರೋಸ್ಟರ್‌ ಪದ್ಧತಿಯಡಿ ಮೆರಿಟ್‌ ಆಧರಿಸಿ ಶೇ 80 ಮತ್ತು ಆಡಳಿತ ಮಂಡಳಿ ಖೋಟಾದಲ್ಲಿ ಶೇ 20 ಸೀಟುಗಳಿಗೆ ಪ್ರವೇಶ ನೀಡಲಾಗುತ್ತದೆ. ಕಳೆದ ಬಾರಿ ಸಾಮಾನ್ಯ ವರ್ಗದವರಿಗೆ ಶೇ 90ರಿಂದ 99ರವರೆಗೆ, ಹಿಂದಳಿದ ವರ್ಗದವರಿಗೆ ಶೇ 82 ರಿಂದ 97ರವರೆಗೆ ಮತ್ತು ಪ್ರವರ್ಗ–1,ಎಸ್‌ಸಿ, ಎಸ್‌ಟಿ ಅವರಿಗೆ ಶೇ 60ರಿಂದ 94ರವರೆಗೆ ವಿವಿಧ ವಿಭಾಗಗಳಲ್ಲಿ ಕಟ್‌ ಆಫ್ ಕೊನೆಗೊಂಡಿತ್ತು.

ಮಾಹಿತಿಗೆ ದೂ: 0821 2422537ಸಂಪರ್ಕಿಸಬಹುದು.ಮಹಾರಾಜ ಸರ್ಕಾರಿ ಪದವಿಪೂರ್ವ ಕಾಲೇಜು: ಈ ಕಾಲೇಜಿನಲ್ಲಿ ವಿಜ್ಞಾನ, ಕಲಾ ಮತ್ತು ವಾಣಿಜ್ಯ ವಿಷಯಗಳನ್ನು ಕಲಿಯಲು ಅವಕಾಶ ಇದೆ. ಈವರೆಗೆ ಸುಮಾರು ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿವಿಧ ವಿಭಾಗಗಳಿಗೆ ಪ್ರವೇಶ ಬಯಸಿ ಅರ್ಜಿ ಸಲ್ಲಿಸಿದ್ದಾರೆ.       ಮೇ 28ರಂದು ಮೊದಲ ಪಟ್ಟಿ ಪ್ರಕಟಗೊಳ್ಳಲಿದೆ.ಮಹಾರಾಣಿ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜು: ಈ ಕಾಲೇಜಿನಲ್ಲಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಷಯಗಳ ಅಧ್ಯಯನಕ್ಕೆ ಅವಕಾಶ ಇದೆ. ಈವರೆಗೆ ಪ್ರವೇಶ ಕೋರಿ ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿನಿಯರು ಅರ್ಜಿ ಹಾಕಿದ್ದಾರೆ. ಮೇ 28ರಂದು ಮೊದಲ ಆಯ್ಕೆ ಪಟ್ಟಿ ಪ್ರಕಟವಾಗಲಿದೆ.

ಸೀಟು ಹಂಚಿಕೆ: ಲಭ್ಯ ಇರುವ ಎಲ್ಲ ಸೀಟುಗಳನ್ನು ರೋಸ್ಟರ್‌ ಪದ್ಧತಿಯಡಿ ಮೆರಿಟ್‌ ಆಧರಿಸಿ ಹಂಚಿಕೆ ಮಾಡಲಾಗುತ್ತದೆ. 

ಮಾಹಿತಿಗೆ ದೂ: 0821 2426087 ಸಂಪರ್ಕಿಸಬಹುದು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.