ಪಿಯು ಫಲಿತಾಂಶ: ಬಾಲಕಿಯರ ಮೇಲುಗೈ

7

ಪಿಯು ಫಲಿತಾಂಶ: ಬಾಲಕಿಯರ ಮೇಲುಗೈ

Published:
Updated:

ಚಿತ್ರದುರ್ಗ: ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶದಲ್ಲಿ ಜಿಲ್ಲೆಯಲ್ಲೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಈ ಬಾರಿ ಪರೀಕ್ಷೆಗೆ ಒಟ್ಟು 15,977 ವಿದ್ಯಾರ್ಥಿಗಳು ಹಾಜರಾಗಿದ್ದು, 7,803 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಮೂಲಕ ಶೇಕಡಾ 48.84 ಫಲಿತಾಂಶ ದೊರೆತಿದ್ದು, 24ನೇ ಸ್ಥಾನ ಲಭಿಸಿದೆ.

ಪರೀಕ್ಷೆಗೆ ಹಾಜರಾದ 8,124 ಬಾಲಕರ ಪೈಕಿ 3,483 ಬಾಲಕರು ಉತ್ತೀರ್ಣರಾಗಿದ್ದು, ಶೇ 42.87 ಫಲಿತಾಂಶ ದೊರೆತಿದೆ. 7,853 ಬಾಲಕಿಯರ ಪೈಕಿ 4,320 ಉತ್ತೀರ್ಣರಾಗಿದ್ದು, ಶೇ 55.01 ಫಲಿತಾಂಶ ದೊರೆತಿದೆ.

ಆಂಗ್ಲ ಮಾಧ್ಯಮದಲ್ಲಿ 4,647 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2,021 ವಿದ್ಯಾರ್ಥಿಗಳು ಉರ್ತ್ತೀಣರಾಗುವುದರ ಮೂಲಕ ಶೇ 43.49 ಹಾಗೂ ಕನ್ನಡ ಮಾಧ್ಯಮದಲ್ಲಿ 11,330 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಇದರಲ್ಲಿ 5,782 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ 51.03ರಷ್ಟು ಫಲಿತಾಂಶ ದೊರೆತಿದೆ.

ಈ ಬಾರಿಯ ಪರೀಕ್ಷೆಯಲ್ಲಿ ಹೊಸದಾಗಿ 11,460 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 6716 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇಕಡಾ 58.06ರಷ್ಟು ಫಲಿತಾಂಶ ಬಂದಿದೆ.

ಖಾಸಗಿಯಾಗಿ 634 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 209 ವಿದ್ಯಾಥಿಗಳು ಉರ್ತ್ತೀಣರಾಗುವ ಮೂಲಕ ಶೇಕಡಾ 32.97 ಫಲಿತಾಂಶ ದೊರೆತಿದೆ. ಇದೇ ವರ್ಷದಲ್ಲಿ 3,883 ವಿದ್ಯಾರ್ಥಿಗಳು ಪುನರ್ ಪರೀಕ್ಷೆ ಬರೆದಿದ್ದು, ಆದರಲ್ಲಿ 878 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇಕಡಾ 22.61 ಫಲಿತಾಂಶ ಲಭ್ಯವಾಗಿದೆ.

ಕಲಾ ವಿಭಾಗದಲ್ಲಿ 10,186 ವಿದ್ಯಾರ್ಥಿಗಳಿಗೆ 4,991 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇಕಡಾ 49 ಫಲಿತಾಂಶ ದೊರೆತಿದೆ.

ಅರ್ಥಶಾಸ್ತ್ರ ವಿಭಾಗದಲ್ಲಿ 2,027 ವಿದ್ಯಾರ್ಥಿಗಳಿಗೆ 1,287 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇಕಡಾ 63.49, ವಿಜ್ಞಾನ ವಿಭಾಗದಲ್ಲಿ 3,764 ವಿದ್ಯಾರ್ಥಿಗಳಿಗೆ 1,525 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇಕಡಾ 40.52 ಫಲಿತಾಂಶ ಲಭ್ಯವಾಗಿದೆ.

ಈ ಬಾರಿಯ ಪರೀಕ್ಷೆಯಲ್ಲಿ ನಗರದ ಮಟ್ಟದಲ್ಲಿ 9,367 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡ್ದ್ದಿದರು. ಇದರಲ್ಲಿ ಬಾಲಕರು 1,753, ಬಾಲಕಿಯರು 2,224 ಸೇರಿದಂತೆ ಒಟ್ಟು 3,977 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇಕಡಾ 42.46 ಫಲಿತಾಂಶ ಬಂದಿದೆ.

ಗ್ರಾಮಾಂತರ ಮಟ್ಟದಲ್ಲಿ 6,610 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ ಬಾಲಕರು 1,730, ಬಾಲಕಿಯರು 2,096 ಸೇರಿದಂತೆ ಒಟ್ಟು 3,826 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 57.88ರಷ್ಟು ಫಲಿತಾಂಶ ದೊರೆತಿದೆ.

ಪಾರದರ್ಶಕ ಪರೀಕ್ಷೆ: ಈ ಬಾರಿ ಪರೀಕ್ಷೆಯನ್ನು ಬಿಗಿಯಾಗಿ ಮತ್ತು ಪಾರದರ್ಶಕತೆಯಿಂದ ನಡೆಸಲಾಗಿದೆ. ಇದು ಸಹ ಕಡಿಮೆ ಫಲಿತಾಂಶಕ್ಕೆ ಕಾರಣವಾಗಿದೆ. ಜತೆಗೆ ಈ ಬಾರಿ ಸರ್ಕಾರ ಚಿತ್ರದುರ್ಗ ಜಿಲ್ಲೆಗೆ 16 ಪಿ.ಯು. ವಿಜ್ಞಾನ ಕಾಲೇಜುಗಳನ್ನು ಗ್ರಾಮಾಂತರ ಪ್ರದೇಶಗಳಿಗೆ ಮಂಜೂರು ಮಾಡಿತು. ಆದರೆ, ಅದಕ್ಕೆ ತಕ್ಕಂತೆ ಸರಿಯಾದ ಸಿಬ್ಬಂದಿ ಹಾಗೂ ಉಪಕರಣಗಳು ಬರುವುದು ತಡವಾದ್ದರಿಂದ ಈ ಬಾರಿ ಫಲಿತಾಂಶದಲ್ಲಿ ಇಳಿಕೆಯಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಪ್ರಭಾರ ಉಪ ನಿರ್ದೇಶಕ ತಿಮ್ಮರಾಯಪ್ಪ ತಿಳಿಸಿದರು.

ಎಸ್‌ಬಿಎಸ್ ಪಿಯು ಕಾಲೇಜಿಗೆ ಉತ್ತಮ ಫಲಿತಾಂಶ

ಇಲ್ಲಿನ ಜೆಎಂಐಟಿ ಆವರಣದಲ್ಲಿರುವ ಬೃಹನ್ಮಠ ಸಂಯುಕ್ತ ಪದವಿಪೂರ್ವ ಕಾಲೇಜಿನ (ಎಸ್‌ಬಿಸಿ) ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಕಾಲೇಜಿನ ವಿಜ್ಞಾನ ವಿಭಾಗದ ಅಕ್ಷಯಕುಮಾರ್ 584 (ಶೇಕಡಾ 97.33)  ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಈ ವಿದ್ಯಾರ್ಥಿ ಗ್ರಾಮೀಣ ಪ್ರತಿಭೆಯಾಗಿರುವುದೊಂದು ವಿಶೇಷ.

ಇದೇ ಕಾಲೇಜಿನ ಪೃಥ್ವಿ ಪಟೇಲ್-539, ರಜತ್-538, ವಿ. ಮೇಘನಾ - 527, ಶಾಲಿನಿ - 517, ಜಿ. ಚೇತನಾ- 511 ಅಂಕ ಗಳಿಸಿದ್ದಾರೆ.

ಮುರುಘಾಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರನ್ನು ಅಕ್ಷಯಕುಮಾರನನ್ನು ಗುರುವಾರ ಅಭಿನಂದಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಸಿ.ವಿ. ಸಾಲಿಮಠ ಹಾಗೂ ಅಕ್ಷಯಕುಮಾರ್ ತಂದೆ ಮಲ್ಲಿಕಾರ್ಜುನ ಉಪಸ್ಥಿತರಿದ್ದರು.

ಕಲಾ ವಿಭಾಗ: ಬೃಹನ್ಮಠ ಸಂಯುಕ್ತ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದಲ್ಲಿ ಎಂ. ಶ್ವೇತಾ-528, ಆರ್. ಶೋಭಾ- 514, ಟಿ. ರಂಜಿತಾ - 513 ಹಾಗೂ ಸುಮನಾ -  511 ಅಂಕಗಳನ್ನು ಗಳಿಸಿದ್ದಾರೆ. ಪ್ರಥಮದರ್ಜೆಯಲ್ಲಿ 38, ದ್ವಿತೀಯ - 5 ಹಾಗೂ ತೃತೀಯ ವಿಭಾಗದಲ್ಲಿ 4 ಜನರು ಉತ್ತೀರ್ಣರಾಗಿದ್ದು, ಶೇಕಡಾ 51ರಷ್ಟು ಫಲಿತಾಂಶ ಬಂದಿದೆ ಎಂದು ಕಾಲೇಜಿನ ಪ್ರಾಚಾರ್ಯರಾದ ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅನಾಥ ವಿದ್ಯಾರ್ಥಿಗೆ ಶೇ 84ರಷ್ಟು ಅಂಕ

ದ್ವಿತೀಯ ಪಿಯು ವಾಣಿಜ್ಯ ವಿಭಾಗದಲ್ಲಿ ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ವಿಜಯಾನಂದಸ್ವಾಮಿ ಜಿ. ಹಿರೇಮಠ ಶೇ 84.05ರಷ್ಟು ಅಂಕಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಪೋಷಕರಿಲ್ಲದ ಈ ವಿದ್ಯಾರ್ಥಿ ನಗರದ ಬಸವೇಶ್ವರ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಮಠದ ಕುರುಬರಹಟ್ಟಿಯ ಗಾಂಧಿ ಮತ್ತು ಅಂಬೇಡ್ಕರ್ ಅನಾಥ ಮಕ್ಕಳ ಕುಟೀರದಲ್ಲಿ ಆಶ್ರಯ ಪಡೆದು ಹೆಚ್ಚಿನ ಅಂಕ ಪಡೆದಿದ್ದಾನೆ. ಇದೇ ಕುಟೀರದ ಮತ್ತೊಬ್ಬ ವಿದ್ಯಾರ್ಥಿ ವಿರೂಪಾಕ್ಷಪ್ಪ ಶೇ.55.33ರಷ್ಟು ಅಂಕಪಡೆದಿದ್ದಾನೆ ಎಂದು ಬಸವೇಶ್ವರ ವಿದ್ಯಾಸಂಸ್ಥೆ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿರಿಯೂರು ವರದಿ

ತಾಲ್ಲೂಕಿನ ಆರನಕಟ್ಟೆ ಗ್ರಾಮದ ಸರ್ಕಾರಿ ಪಿಯು ಕಾಲೇಜಿನಲ್ಲಿ ಗುರುವಾರ ಪ್ರಕಟವಾಗಿರುವ ಪಿಯು ಫಲಿತಾಂಶದಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ 100 ಫಲಿತಾಂಶ ಬಂದಿದೆ ಎಂದು ಕಾಲೇಜಿನ ಪ್ರಾಂಶುಪಾಲ ಕೆ.ಆರ್. ವೀರಭದ್ರಯ್ಯ ತಿಳಿಸಿದ್ದಾರೆ.

ಪರೀಕ್ಷೆಗೆ ಹಾಜರಾಗಿದ್ದ 19 ವಿದ್ಯಾರ್ಥಿಗಳಲ್ಲಿ ಎಂ. ರೋಜಾ ಎಂಬ ವಿದ್ಯಾರ್ಥಿನಿ 4 ಅಂಕ ಗಳಿಸುವ ಮೂಲಕ ಉನ್ನತಶ್ರೇಣಿ ಪಡೆದಿದ್ದರೆ, 13 ಪ್ರಥಮ, 5 ದ್ವಿತೀಯ ದರ್ಜೆ, ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾಗಿದ್ದ 36 ವಿದ್ಯಾರ್ಥಿಗಳಲ್ಲಿ 18 ಪ್ರಥಮ, 9 ದ್ವಿತೀಯ ಹಾಗೂ 04 ತೃತೀತ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, ಒಟ್ಟು ಫಲಿತಾಂಶ ಶೇ 90 ಎಂದು ತಿಳಿಸಿದ್ದಾರೆ.

ಸರ್ಕಾರಿ ಪಿಯು ಕಾಲೇಜು: ನಗರದ ಸರ್ಕಾರಿ ಪಿಯು ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾಗಿದ್ದ 410 ವಿದ್ಯಾರ್ಥಿಗಳ ಪೈಕಿ 210 ಜನ ಉತ್ತೀರ್ಣರಾಗ್ದ್ದಿದಾರೆ.ಕಲಾ ವಿಭಾಗದಲ್ಲಿ 210ಕ್ಕೆ 116 ವಾಣಿಜ್ಯ ವಿಭಾಗದಲ್ಲಿ 100ಕ್ಕೆ 62, ವಿಜ್ಞಾನ ವಿಭಾಗದಲ್ಲಿ 100ಕ್ಕೆ 32 ಮಂದಿ ತೇರ್ಗಡೆಯಾಗಿದ್ದಾರೆ. ಇಬ್ಬರು ಉನ್ನತ ಶ್ರೇಣಿ ಪಡೆದಿದ್ದಾರೆ ಎಂದು ಪ್ರಾಂಶುಪಾಲ ಎಚ್.ಟಿ. ಚಂದ್ರಶೇಖರಯ್ಯ ತಿಳಿಸಿದ್ದಾರೆ.

ಗಿರೀಶ ಬಾಲಕಿಯರ ಕಾಲೇಜು: ನಗರದ ಗಿರೀಶ ಬಾಲಕಿಯರ ಪಿಯು ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾದ 172 ವಿದ್ಯಾರ್ಥಿನಿಯರ ಪೈಕಿ 98 ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿದ್ದಾರೆ. 2 ಉನ್ನತಶ್ರೇಣಿ, 38 ಪ್ರಥಮದರ್ಜೆ, 34 ದ್ವಿತೀಯ ಮತ್ತು 34 ಜನ ತೃತೀಯದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

2012-13ನೇ ಸಾಲಿಗೆ ಪ್ರಥಮ ಪಿಯ ತರಗತಿಗಳಿಗೆ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದ್ದು ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಿಗೆ ಯಾವುದೇ ವಂತಿಗೆ ಪಡೆಯದೆ ಪ್ರವೇಶ ನೀಡುವುದಾಗಿ ಪ್ರಾಂಶುಪಾಲ ವಿ.ಟಿ. ಮಂಜುನಾಥ್ ತಿಳಿಸಿದ್ದಾರೆ.

ಬಾಲಕಿಯರ ಸರ್ಕಾರಿ ಕಾಲೇಜು: ನಗರದ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನಲ್ಲಿ ಶೇ. 87.11 ಫಲಿತಾಂಶ ಬಂದಿದ್ದು, ಕಲಾ ವಿಭಾಗದಲ್ಲಿ ಶೇ 86, ವಾಣಿಜ್ಯ ವಿಭಾಗದಲ್ಲಿ ಶೇ 93ಮತ್ತು ವಿಜ್ಞಾನ ವಿಭಾಗದಲ್ಲಿ ಶೇ 78.5 ಫಲಿತಾಂಶ ಬಂದಿದ್ದು, 2 ಉನ್ನತಶ್ರೇಣಿ, 79 ಪ್ರಥಮ, 37 ದ್ವಿತೀಯ ಹಾಗೂ 24 ವಿದ್ಯಾರ್ಥಿನಿಯರು ತೃತೀಯದರ್ಜೆಯಲ್ಲಿ ತೇರ್ಗಡೆ ಆಗಿದ್ದಾರೆ ಎಂದು ಪ್ರಾಂಶುಪಾಲ ಬಿ. ಚಿಕ್ಕಣ್ಣ ತಿಳಿಸಿದ್ದಾರೆ.

ಯಲ್ಲದಕೆರೆ: ತಾಲ್ಲೂಕಿನ ಯಲ್ಲದಕೆರೆ ಗ್ರಾಮದ ಸರ್ಕಾರಿ ಪಿಯು ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾಗಿದ್ದ 32 ವಿದ್ಯಾರ್ಥಿಗಳ ಪೈಕಿ  10 ಪ್ರಥಮ, 08 ದ್ವಿತೀಯ ಹಾಗೂ 06 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಪ್ರಾಂಶುಪಾಲ  ಎಚ್.ಎಸ್. ಶಾಂತರಾಜಯ್ಯ ತಿಳಿಸಿದ್ದಾರೆ.

ಚಿಕ್ಕಜಾಜೂರು ವರದಿ

ಪಿಯು ಪರೀಕ್ಷೆಯಲ್ಲಿ ಇಲ್ಲಿನ ಎಸ್‌ಜೆಎಂ ಪದವಿಪೂರ್ವ ಕಾಲೇಜಿಗೆ ಶೇ 91.16, ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜಿಗೆ ಶೇ 55.35 ಫಲಿತಾಂಶ ಲಭಿಸಿದೆ.

ಎಸ್‌ಜೆಎಂ ಕಾಲೇಜು: ಪರೀಕ್ಷೆಗೆ ಹಾಜರಾದ 102 ವಿದ್ಯಾರ್ಥಿಗಳಲ್ಲಿ 79 ವಿದ್ಯಾರ್ಥಿಗಳು ಉತ್ತೀರ್ಣ ಆಗಿದ್ದಾರೆ. ಇದರಲ್ಲಿ 1 ಡಿಸ್ಟಿಂಕ್ಷನ್, 33 ಪ್ರಥಮದರ್ಜೆ, 20 ದ್ವಿತೀಯದರ್ಜೆ ಹಾಗೂ 25 ತೃತೀಯದರ್ಜೆ. ಕಲಾ ವಿಭಾಗದ 54 ವಿದ್ಯಾರ್ಥಿಗಳಲ್ಲಿ 47 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆರ್. ಶ್ರೀನಿವಾಸ್ 547 ಅಂಕ ಪಡೆದಿದ್ದಾರೆ. ವಾಣಿಜ್ಯ ವಿಭಾಗದ 10 ವಿದ್ಯಾರ್ಥಿಗಳಲ್ಲಿ 8 ಮಂದಿ ಉತ್ತೀರ್ಣರಾಗಿದ್ದಾರೆ. ಡಿ.ಎಂ. ಸುರೇಶ್ 509, ವಿಜ್ಞಾನ ವಿಭಾಗದ 38 ವಿದ್ಯಾರ್ಥಿಗಳಲ್ಲಿ 24 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಎಂ.ಒ. ಸಂತೋಷ 485 ಹೆಚ್ಚಿನ ಅಂಕ ಗಳಿಸಿದ್ದಾರೆ. ಈ ವಿದ್ಯಾರ್ಥಿಗಳನ್ನು ಪ್ರಾಂಶುಪಾಲ ವಿಜಯಕುಮಾರ್ ಅಭಿನಂದಿಸಿದ್ದಾರೆ.

ಸರ್ಕಾರಿ ಸ್ವತಂತ್ರ ಪಿಯು ಕಾಲೇಜು: 12 ವಿದ್ಯಾರ್ಥಿಗಳಲ್ಲಿ 61 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ 2 ಡಿಸ್ಟಿಂಕ್ಷನ್, 24 ಪ್ರಥಮದರ್ಜೆ, 21 ದ್ವಿತೀಯದರ್ಜೆ, 14 ತೃತೀಯದರ್ಜೆ. ಕಲಾ ವಿಭಾಗದ ಕೆ.ಪಿ. ಮಮತಾ 519, ವಾಣಿಜ್ಯ ವಿಭಾಗದ ಎಸ್. ಕವಿತಾ 519 ಹೆಚ್ಚಿನ ಅಂಕ ಗಳಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಹೊಳಲ್ಕೆರೆ ವರದಿ

ತಾಲ್ಲೂಕಿನ ಎನ್.ಜಿ. ಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ದ್ವಿತೀಯ ಪಿಯನಲ್ಲಿ ಶೇಕಡಾ 68.75 ಫಲಿತಾಂಶ ಬಂದಿದೆ. ಪರೀಕ್ಷೆ ಬರೆದ 32 ವಿದ್ಯಾರ್ಥಿಗಳಲ್ಲಿ 22 ವಿದ್ಯಾರ್ಥಿಗಳು ಉತೀರ್ಣರಾಗಿದ್ದು, 9 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 5 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ, 7 ವಿದ್ಯಾರ್ಥಿಗಳು ತೃತೀಯ ಶ್ರೇಣಿ ಪಡೆದಿದ್ದಾರೆ. ಎಚ್.ಜೆ. ರಂಗಸ್ವಾಮಿ ಎಂಬ ವಿದ್ಯಾರ್ಥಿ 514 ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಕಾಲೇಜಿನ ಪ್ರಾಂಶುಪಾಲ ಎನ್.ಆರ್. ನಾಗರಾಜಪ್ಪ, ಕಾಲೇಜು ಅಭಿವೃದ್ಧಿ ಮಂಡಳಿಯ ಗೌರವಾಧ್ಯಕ್ಷ ಕೆ.ಟಿ. ಶ್ರೀಶೈಲ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಪ್ರಕಾಶ್, ಜಿಲ್ಲಾ ಪಂಚಾಯ್ತಿ ಸದಸ್ಯ ಪಿ.ಆರ್. ಶಿವಕುಮಾರ್, ತಾಲ್ಲೂಕು ಪಂಚಾಯ್ತಿ ಸದಸ್ಯ ಮೋಹನ್ ನಾಗರಾಜ್ ಮತ್ತು ಸಿಬ್ಬಂದಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ಮಲ್ಲಾಡಿಹಳ್ಳಿ ಕಾಲೇಜಿಗೆ ಶೇ 85 ಫಲಿತಾಂಶ: ತಾಲ್ಲೂಕಿನ ಮಲ್ಲಾಡಿ ಹಳ್ಳಿಯ ಅನಾಥ ಸೇವಾಶ್ರಮ ಪದವಿಪೂರ್ವ ಕಾಲೇಜಿಗೆ ದ್ವಿತೀಯ ಪಿಯುನಲ್ಲಿ ಶೇಕಡಾ 85 ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗಕ್ಕೆ ಶೇಕಡಾ 82, ಕಲಾ ವಿಭಾಗಕ್ಕೆ ಶೇಕಡಾ 90 ಮತ್ತು ವಾಣಿಜ್ಯ ವಿಭಾಗಕ್ಕೆ ಶೇಕಡಾ 89 ಫಲಿತಾಂಶ ಲಭಿಸಿದೆ. ಕಲೆ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಪರೀಕ್ಷೆಗೆ ಕುಳಿತಿದ್ದ ಒಟ್ಟು 261 ವಿದ್ಯಾರ್ಥಿಗಳಲ್ಲಿ 121 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 72 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ, 29 ವಿದ್ಯಾರ್ಥಿಗಳು ತೃತೀಯ ಶ್ರೇಣಿ ಪಡೆದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ದೀಪಿಕಾ ಎಂಬ ವಿದ್ಯಾರ್ಥಿನಿ ಶೇಕಡಾ 92.66 ಮತ್ತು ಮೇಘನಾ ಎಂಬ ವಿದ್ಯಾರ್ಥಿನಿ ಶೇಕಡಾ 86.33 ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಆಡಳಿತಾಧಿಕಾರಿ ರಾಘವೇಂದ್ರ ಪಾಟೀಲ ಮತ್ತು ಕಾಲೇಜಿನ ಸಿಬ್ಬಂದಿ ಅಭಿನಂದಿಸಿದ್ದಾರೆ.

ಮೊಳಕಾಲ್ಮುರು ವರದಿ

ಇಲ್ಲಿನ ಸರ್ಕಾರಿ ಪಿಯು ಕಾಲೇಜು ಒಟ್ಟಾರೆ ಶೇ 61.17 ಫಲಿತಾಂಶ ಪಡೆದುಕೊಂಡಿದೆ. ಕಲಾ ವಿಭಾಗದಲ್ಲಿ 112 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 74 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 66, ವಿಜ್ಞಾನ ವಿಭಾಗದಲ್ಲಿ 21 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, ಈ ಪೈಕಿ ಎಂಟು ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 38.19, ವಾಣಿಜ್ಯ ವಿಭಾಗದಲ್ಲಿ 34 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇದರಲ್ಲಿ 20 ಮಂದಿ ಉತ್ತೀರ್ಣರಾಗುವ ಮೂಲಕ ಶೇ 58.82 ಫಲಿತಾಂಶ ಲಭ್ಯವಾಗಿದೆ. ಕಲಾ ವಿಭಾಗದಲ್ಲಿ ಪಿ. ಆಂಜನೇಯ 20 ಹಾಗೂ ವಾಣಿಜ್ಯ ವಿಭಾಗದಲ್ಲಿ ಸೌಮ್ಯ 523 ಅಂಕ ಪಡೆದು ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾಗಿದ್ದಾರೆ. ಎಂದು ಮೂಲಗಳು ತಿಳಿಸಿವೆ.

ಕೊಂಡ್ಲಹಳ್ಳಿ: ಸರ್ಕಾರಿ ಪಿಯು ಕಾಲೇನಿನಲ್ಲಿ ಪರೀಕ್ಷೆ ಬರೆದಿದ್ದ ಒಟ್ಟು 19 ವಿದ್ಯಾರ್ಥಿಗಳಲ್ಲಿ, 3 ಪ್ರಥಮ, 29 ದ್ವಿತೀಯ ಮತ್ತು 28 ಮಂದಿ ತೃತೀಯ ಶ್ರೇಣಿ ಸೇರಿದಂತೆ ಒಟ್ಟು 92 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry