ಪಿರಿಯಾಪಟ್ಟಣ: ಚಿರತೆ ಮೃತದೇಹ ಪತ್ತೆ

7

ಪಿರಿಯಾಪಟ್ಟಣ: ಚಿರತೆ ಮೃತದೇಹ ಪತ್ತೆ

Published:
Updated:

ಪಿರಿಯಾಪಟ್ಟಣ: ತಾಲ್ಲೂಕಿನ ನಿಲವಾಡಿ ಬಳಿ ಬಾಬನಕಟ್ಟೆ ಅರಣ್ಯ ಪ್ರದೇಶದಲ್ಲಿ ನಾಲ್ಕೂವರೆ ವರ್ಷದ ಗಂಡು ಚಿರತೆಯ ಮೃತದೇಹ ಮಂಗಳವಾರ ಪತ್ತೆಯಾಗಿದೆ.ಚಿರತೆಯ ದೇಹ ಸಂಪೂರ್ಣವಾಗಿ ಕೊಳೆತು ಹೋಗಿದ್ದು, ಈ ಬಗ್ಗೆ ದನ ಮೇಯಿಸುವ ಮಂದಿ ಮಂಗಳವಾರ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.ಮಾಹಿತಿ ಪಡೆದ ಡಿಸಿಎಫ್ ಕೇಶವ್, ವಲಯ ಅರಣ್ಯಾಧಿಕಾರಿ ಚಿನ್ನಪ್ಪ, ಪಶು ವೈದ್ಯರಾದ ಡಾ.ಉಮಾಶಂಕರ್‌ರೊಂದಿಗೆ ಭೇಟಿ ನೀಡಿ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದರು.ಮರಣೋತ್ತರ ಪರೀಕ್ಷೆ ನಡೆಸಿದ ವೈ್ಯರು ಚಿರತೆ ಸಹಜವಾಗಿ 4-5ದಿನಗಳ ಹಿಂದೆ ಸಾವ್ನಪ್ಪಿದೆ ಎಂದು ಶಂಕೆ ್ಯಕ್ತಪಡಿಸಿ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry