ಪಿಸಿಐ ಸಲಹೆ ಕೇಳಿದ ಪ್ರಸಾರ ಖಾತೆ

ಬುಧವಾರ, ಜೂಲೈ 24, 2019
27 °C
ಮಾಧ್ಯಮ ಕ್ಷೇತ್ರದಲ್ಲಿ ಎಫ್‌ಡಿಐ

ಪಿಸಿಐ ಸಲಹೆ ಕೇಳಿದ ಪ್ರಸಾರ ಖಾತೆ

Published:
Updated:

ನವದೆಹಲಿ (ಪಿಟಿಐ): ಮಾಧ್ಯಮ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹೂಡಿಕೆಗೆ ಸಂಬಂಧಿಸಿದಂತೆ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯವು (ಐಬಿ) ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮತ್ತು ಭಾರತೀಯ ಪತ್ರಿಕಾ ಮಂಡಳಿಗೆ (ಪಿಸಿಐ) ತಮ್ಮ ಶಿಫಾರಸುಗಳನ್ನು ಸಲ್ಲಿಸುವಂತೆ ಕೋರಿದೆ.ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಇಲಾಖೆ (ಡಿಐಪಿಪಿ) ಮಾಧ್ಯಮ ಕ್ಷೇತ್ರದಲ್ಲಿ ಎಫ್‌ಡಿಐ ಮಿತಿ ಹೆಚ್ಚಿಸುವ ಕುರಿತು ಐಬಿಗೆ ಪ್ರಸ್ತಾವ ಸಲ್ಲಿಸಿದ್ದ ಬೆನ್ನಲ್ಲೇ, ಸಚಿವಾಲಯವು ಪ್ರಸಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಟ್ರಾಯ್ ಮತ್ತು ಮುದ್ರಣ ಮಾಧ್ಯಮಕ್ಕೆ ಸಂಬಂಧಿಸಿದಂತೆ ಪಿಸಿಐ ತಮ್ಮ ಶಿಫಾರಸುಗಳನ್ನು ಸಲ್ಲಿಸುವಂತೆ ಹೇಳಿಕೆಯಲ್ಲಿ ತಿಳಿಸಿದೆ.`ಮಾಧ್ಯಮ ಕ್ಷೇತ್ರದಲಿ ಎಫ್‌ಡಿಐ ಕುರಿತ ಸಾಧಕ- ಬಾಧಕಗಳ ನೋಟ ಇನ್ನೂ ಅಪೂರ್ಣವಾಗಿದೆ. ಅಲ್ಲದೆ, ಭಾರತೀಯ ವೃತ್ತಪತ್ರಿಕಾ ಸಂಸ್ಥೆ (ಐಎನ್‌ಎಸ್) ತನ್ನ ಅಭಿಪ್ರಾಯ ನೀಡಲು ಇನ್ನೂ ಸ್ವಲ್ಪ ಕಾಲಾವಕಾಶ ಕೋರಿದ್ದು, ಸುದ್ದಿ ಪ್ರಸಾರದಾರರ ಸಂಘ (ಎನ್‌ಬಿಎ) ಈ ಕುರಿತು ಇದುವರೆಗೂ ಏನನ್ನು ಹೇಳಿಲ್ಲ' ಎಂದು ಸಚಿವಾಲಯ ಹೇಳಿದೆ. `ಟ್ರಾಯ್ ಶಿಫಾರಸು ಮೇರೆಗೆ ಕಳೆದ ಸೆಪ್ಟೆಂಬರ್ 20ರಂದು ಪ್ರಸಾರ ಕ್ಷೇತ್ರದಲ್ಲಿನ ವಿದೇಶಿ ಬಂಡವಾಳ ಹೂಡಿಕೆಯ ಮಿತಿಯನ್ನು ಪರಿಷ್ಕರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry