ಪಿಸಿಬಿ ನಿರ್ಧಾರಕ್ಕೆ ಹೈಕೋರ್ಟ್ ತಡೆಯಾಜ್ಞೆ

ಶನಿವಾರ, ಜೂಲೈ 20, 2019
28 °C

ಪಿಸಿಬಿ ನಿರ್ಧಾರಕ್ಕೆ ಹೈಕೋರ್ಟ್ ತಡೆಯಾಜ್ಞೆ

Published:
Updated:

ಕರಾಚಿ: ಪಾಕಿಸ್ತಾನ ತಂಡದ ನಾಯಕತ್ವದಿಂದ ಶಾಹಿದ್ ಆಫ್ರಿದಿಯನ್ನು ಅಮಾನತುಗೊಳಿಸಿರುವ  ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಆದೇಶಕ್ಕೆ ಸಿಂಧ್ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.ಆಲ್‌ರೌಂಡರ್ ಆಫ್ರಿದಿ ತಮ್ಮ ವಿರುದ್ಧ ಪಿಸಿಬಿ ನೀಡಿರುವ ಆದೇಶವನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿರುವ ನ್ಯಾಯಾಲಯವು ಮಂಗಳವಾರ ತಡೆಯಾಜ್ಞೆ ನೀಡಿದೆ.`ಪಿಸಿಬಿಯು ತೆಗೆದುಕೊಂಡಿರು ಶಿಸ್ತಿನ ಕ್ರಮ ಮತ್ತು ಶಿಕ್ಷೆಯ ವಿರುದ್ಧ ಸಿಂಧ್ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದು, ಇವತ್ತು ಹೈಕೋರ್ಟ್  ತಡೆಯಾಜ್ಞೆ ನೀಡಿದೆ. ಎಂದು ಆಫ್ರಿದಿಯ ವಕೀಲ ಅಲಿ ಝಫರ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry