ಭಾನುವಾರ, ನವೆಂಬರ್ 17, 2019
24 °C

`ಪಿಸ್ತೂಲ್' ಗುರಿಯಲ್ಲಿ ಅಕ್ಷಯ್-ಸೋನಾಕ್ಷಿ!

Published:
Updated:
`ಪಿಸ್ತೂಲ್' ಗುರಿಯಲ್ಲಿ ಅಕ್ಷಯ್-ಸೋನಾಕ್ಷಿ!

ಎ.ಆರ್. ಮುರುಗದಾಸನ್ ನಿರ್ದೇಶನದ `ಪಿಸ್ತೂಲ್' ಚಿತ್ರದಲ್ಲಿ ಅಕ್ಷಯ್ ಕುಮಾರ್ - ಸೋನಾಕ್ಷಿ ಸಿನ್ಹ ಜೋಡಿಯಾಗಿ ನಟಿಸುತ್ತಿದ್ದಾರೆ. 2012ರಲ್ಲಿ ತೆರೆಕಂಡ, ಮುರುಗದಾಸನ್ ಅವರೇ ನಿರ್ದೇಶಿಸಿದ್ದ ತಮಿಳಿನ `ತುಪಾಕಿ' ಚಿತ್ರದ ರೀಮೇಕ್ ಇದು. ಅದರಲ್ಲಿ ವಿಜಯ್ ಮತ್ತು ಕಾಜಲ್ ಅಗರ್‌ವಾಲ್ ಜೋಡಿಯಾಗಿ ಕಾಣಿಸಿಕೊಂಡಿದ್ದರು.`ರೌಡಿ ರಾಥೋಡ್', `ಜೋಕರ್' ಚಿತ್ರಗಳ ನಂತರ ಅಕ್ಷಯ್- ಸೋನಾಕ್ಷಿ ಮತ್ತೆ ಈ ಚಿತ್ರದ ಮೂಲಕ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.`ನನ್ನ ದೇಹವನ್ನು ಸೈನಿಕರಂತೆ ತೆಳ್ಳಗೆ ಮಾಡಿಕೊಳ್ಳಲು ನಿರ್ದೇಶಕರು ಹೇಳಿದ್ದಾರೆ. ಅದರಿಂದ ಅತಿಹೆಚ್ಚು ವರ್ಕ್‌ಔಟ್ ಮಾಡುತ್ತಿರುವೆ' ಎಂದು ಅಕ್ಷಯ್‌ಕುಮಾರ್ `ಪಿಸ್ತೂಲ್'ನ ಸಿದ್ಧತೆ ಬಗ್ಗೆ ಹೇಳಿದ್ದಾರೆ.`ಮತ್ತೆ ಅಕ್ಷಯ್ ಅವರಂಥ ಅನುಭವಿ ನಟನೊಂದಿಗೆ ನಟಿಸುವ ಅವಕಾಶ ಸಿಗುತ್ತಿರುವುದು ನನ್ನ ವೃತ್ತಿ ಬದುಕಿಗೆ ನೆರವಾಗಲಿದೆ' ಎಂದಿದ್ದಾರೆ ಸೋನಾಕ್ಷಿ.

ಪ್ರತಿಕ್ರಿಯಿಸಿ (+)