ಪೀಣ್ಯದಲ್ಲಿ ಮೆಗಾ ಮೇಳ

7

ಪೀಣ್ಯದಲ್ಲಿ ಮೆಗಾ ಮೇಳ

Published:
Updated:
ಪೀಣ್ಯದಲ್ಲಿ ಮೆಗಾ ಮೇಳ

ಪೀಣ್ಯ ಕೈಗಾರಿಕಾ ಸಂಘದ ವತಿಯಿಂದ ಮಾರಾಟಗಾರರ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಕೈಗಾರಿಕಾ ವಸ್ತು ಪ್ರದರ್ಶನ ‘ಪಿಐಎ ಮೆಗಾ ಶೋ 2011’ ಗುರುವಾರದಿಂದ ಶನಿವಾರದ ವರೆಗೆ ನಡೆಯಲಿದೆ.ಇಲ್ಲಿನ ಆರು ಸಾವಿರ ಕೈಗಾರಿಕೋದ್ಯಮಿಗಳಿಗೆ ತಮ್ಮ ಉತ್ಪನ್ನಗಳ ಪ್ರದರ್ಶನ ಮತ್ತು ಮಾರುಕಟ್ಟೆ ಕಲ್ಪಿಸುವುದು ಇದರ ಉದ್ದೇಶ.ದಕ್ಷಿಣ ಏಷ್ಯದ ಅತ್ಯಂತ ಬೃಹತ್ ಕೈಗಾರಿಕಾ ವಲಯವೆಂದೇ ಹೆಸರಾದ, ಅತ್ಯಂತ ಹಳೆಯ ಕೈಗಾರಿಕಾ ಪ್ರದೇಶಗಳಲ್ಲಿ ಒಂದಾದ ಪೀಣ್ಯದ 40 ಚ.ಕಿ.ಮೀ ಪ್ರದೇಶದಲ್ಲಿ ಸುಮಾರು 5000 ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳಿವೆ. ಮೆಶಿನ್ ಟೂಲ್ಸ್, ಆಟೊಮೊಬೈಲ್, ವಿಮಾನ ಉಪಕರಣಗಳು, ಸಿದ್ಧ ಉಡುಪುಗಳು ಹಾಗೂ ಪ್ಯಾಕೇಜಿಂಗ್ ಕೈಗಾರಿಕೆಗಳ ಚಟುವಟಿಕೆಗಳು ನಡೆಯುತ್ತಿವೆ.ಗುರುವಾರ ಬೆಳಿಗ್ಗೆ ಉದ್ಘಾಟನೆ: ಸಚಿವ ಆರ್. ಅಶೋಕ. ಅತಿಥಿಗಳು: ಸಿ.ಎಚ್. ವಿಜಯಶಂಕರ್, ಎಂ. ಶ್ರೀನಿವಾಸ, ಎಸ್. ಮುನಿರಾಜು ಹಾಗೂ ಆಶಾ ಸುರೇಶ್. ಸ್ಥಳ: ಕೆಎಸ್‌ಆರ್‌ಟಿಸಿ ಬಸ್‌ಸ್ಟ್ಯಾಂಡ್ ನಿವೇಶನ, ಅಯ್ಯಪ್ಪ ದೇವಸ್ಥಾನದ ಹಿಂದೆ, 1ನೇ ಹಂತ, ಪೀಣ್ಯ ಕೈಗಾರಿಕಾ ಪ್ರದೇಶ. ಬೆಳಿಗ್ಗೆ 11.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry