ಪೀಣ್ಯ ಮೂಲಭೂತ ಸೌಕರ್ಯ ಯೋಜನೆ: ಉದ್ಘಾಟನೆ

ಗುರುವಾರ , ಜೂಲೈ 18, 2019
24 °C

ಪೀಣ್ಯ ಮೂಲಭೂತ ಸೌಕರ್ಯ ಯೋಜನೆ: ಉದ್ಘಾಟನೆ

Published:
Updated:

ಬೆಂಗಳೂರು: ಕೇಂದ್ರ, ರಾಜ್ಯ ಸರ್ಕಾರ ಮತ್ತು ಸ್ಥಳೀಯ ಫಲಾನುಭವಿಗಳ ಧನಸಹಾಯದಿಂದ ಪೀಣ್ಯದಲ್ಲಿ ಕೈಗೊಂಡಿರುವ 24 ಕೋಟಿ ರೂಪಾಯಿ ವೆಚ್ಚದ `ಪೀಣ್ಯ ಮೂಲಸೌಕರ್ಯ ಮೇಲ್ದರ್ಜೆಗೇರಿಸುವ ಯೋಜನೆ~ (ಪಿಕ್‌ಅಪ್)ಯನ್ನು ಸಂಸದ ಡಿ.ಬಿ.ಚಂದ್ರೇಗೌಡ ಶುಕ್ರವಾರ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, `ಇಡೀ ಆಗ್ನೇಯ ಏಷ್ಯಾದಲ್ಲಿಯೇ ಪೀಣ್ಯ ಒಂದು ಪ್ರಮುಖ ಕೈಗಾರಿಕಾ ಪ್ರದೇಶವಾಗಿ ಗುರುತಿಸಿಕೊಂಡಿದೆ. ಕೈಗಾರಿಕಾ ಪ್ರದೇಶವೊಂದಕ್ಕೆ ಮೂಲಸೌಕರ್ಯಗಳು ಅಗತ್ಯ.

ಈ ನಿಟ್ಟಿನಲ್ಲಿ ಪೀಣ್ಯ ಕೈಗಾರಿಕಾ ಸಂಘ ಕೈಗೆತ್ತಿಕೊಂಡಿದ್ದ ಯೋಜನೆಯಿಂದ ಇಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಕಾರ್ಮಿಕರು ಹಾಗೂ ಉದ್ಯೋಗಿಗಳಿಗೆ ಅನುಕೂಲವಾಗಿದೆ~ ಎಂದರು.`ಒಟ್ಟು ಯೋಜನಾ ವೆಚ್ಚವಾದ ರೂ 26 ಕೋಟಿಯಲ್ಲಿ 24 ಕೋಟಿ ಖರ್ಚಿನಲ್ಲೇ ಎಲ್ಲ ಕಾಮಗಾರಿಗಳನ್ನು ಮುಗಿಸಲಾಗಿದೆ. ಉಳಿದ ಎರಡು ಕೋಟಿ ರೂಪಾಯಿಗಳನ್ನು ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲು ಅನುಮತಿ ನೀಡುವ ಕುರಿತಂತೆ ಕೇಂದ್ರ ವಾಣಿಜ್ಯ ಸಚಿವಾಲಯಕ್ಕೆ ಸಂಘ ಪತ್ರ ಬರೆಯಬೇಕು. ನಾನೂ ಈ ಬಗ್ಗೆ ಸಚಿವರೊಂದಿಗೆ ಮಾತನಾಡುವೆ.

 

ಅಗತ್ಯ ಬಂದರೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರೊಂದಿಗೂ  ಮಾತನಾಡುತ್ತೇನೆ~ ಎಂದು ಭರವಸೆ ನೀಡಿದರು.ಶಾಸಕ ಎಸ್.ಮುನಿರಾಜು, `ಶಾಸಕನಾಗಿ ಆಯ್ಕೆಯಾದ ನಂತರ ಪೀಣ್ಯ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗಾಗಿ 32 ಕೋಟಿ ರೂಪಾಯಿಗಳನ್ನು ಪ್ಯಾಕೇಜ್ ರೂಪಿಸಿ ಡಾಂಬರೀಕರಣ, ವಿದ್ಯುದ್ದೀಪಗಳನ್ನು ಅಳವಡಿಸಲಾಗಿದೆ. ಈ ಪ್ರದೇಶದಲ್ಲಿ ಬೃಹತ್ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡುವ ಉದ್ದೇಶವಿತ್ತು.

ಆದರೆ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಯವರು ಎಲ್ಲ ಜಾಗವನ್ನು ಉದ್ಯಮಗಳ ಸ್ಥಾಪನೆಗಾಗಿ ನೀಡಲು ತಮ್ಮ ವಶಕ್ಕೆ ಪಡೆದಿದ್ದಾರೆ~ ಎಂದರು.ಪಿಕ್‌ಅಪ್ ಯೋಜನೆಯ ರೂವಾರಿ ಆರ್.ಪೃಥ್ವಿರಾಜ್, `ಅಂಗವೈಕಲ್ಯ ಹೊಂದಿರುವ ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲವಾಗಲು ಉತ್ತಮ ಹಾಸ್ಟೆಲ್ ಹಾಗೂ ಮಹಿಳಾ ಕಾರ್ಮಿಕರ ಮಕ್ಕಳಿಗಾಗಿ ಶಿಶು ಪಾಲನಾ ಕೇಂದ್ರವೊಂದನ್ನು ತೆರೆಯಲಾಗಿದೆ. ಮಕ್ಕಳನ್ನು ಸಂಘದ ಸಿಬ್ಬಂದಿಯೇ ನೋಡಿಕೊಳ್ಳಲಿದ್ದಾರೆ~ ಎಂದು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry