ಪೀಪ್ಲಿ ಲೈವ್: ಆಸ್ಕರ್ ಸ್ಪರ್ಧೆಯಿಂದ ಹೊರಕ್ಕೆ

7

ಪೀಪ್ಲಿ ಲೈವ್: ಆಸ್ಕರ್ ಸ್ಪರ್ಧೆಯಿಂದ ಹೊರಕ್ಕೆ

Published:
Updated:

ಮುಂಬೈ (ಪಿಟಿಐ): ಈ ವರ್ಷದ ಉತ್ತಮ ವಿದೇಶಿ ಭಾಷೆಯ ಚಲನಚಿತ್ರ ವಿಭಾಗದಲ್ಲಿ ಭಾರತದಿಂದ ಆಸ್ಕರ್ ಪ್ರಶಸ್ತಿಗಾಗಿ ಅಧಿಕೃತ ಪ್ರವೇಶ ಪಡೆದಿದ್ದ ‘ಪೀಪ್ಲಿ ಲೈವ್’ ಸ್ಪರ್ಧೆಯಿಂದ ಹೊರ ಬಿದ್ದಿದೆ.

ಅಂತಿಮವಾಗಿ ಒಂಬತ್ತು ಚಿತ್ರಗಳು ಆಯ್ಕೆಯಾಗಿದ್ದು ‘ಪೀಪ್ಲಿ ಲೈವ್’ ಈ ಪಟ್ಟಿಯಲ್ಲಿ ಸೇರಿಲ್ಲ. ಅಂತಿಮ ಪಟ್ಟಿಯಲ್ಲಿ ಚಲನಚಿತ್ರ ಸೇರ್ಪಡೆಯಾಗದ್ದಕ್ಕೆ ನಿರಾಶೆಯಾಗಿದೆ. ಆದರೆ ಪ್ರಶಸ್ತಿಗೆ ಪರಿಗಣಿಸಲಾದ 66 ಚಲನಚಿತ್ರಗಳಲ್ಲಿ ಚಿತ್ರ ಸೇರ್ಪಡೆಯಾಗಿದ್ದೇ ಗೌರವ ಎಂದು ಭಾವಿಸುವುದಾಗಿ ‘ಪೀಪ್ಲಿ ಲೈವ್’ ನಿರ್ಮಾಪಕ ಅಮೀರ್ ಖಾನ್ ಪ್ರತಿಕ್ರಿಯಿಸಿದ್ದಾರೆ.

‘ಪ್ರಶಸ್ತಿಗೆ ಪರಿಗಣಿಸಲಾದ ಒಟ್ಟು 50-60 ಚಲನಚಿತ್ರಗಳು ಅತ್ಯುತ್ತಮವಾಗಿದ್ದವು. ಇದೇ ಒಂದು ರೀತಿಯ ಗೌರವ. ಆದರೆ ಹೌದು, ಮೊದಲಿನ ಐದು ಸ್ಥಾನದಲ್ಲಿ ಆಯ್ಕೆಯಾಗಲು ಸಾಧ್ಯವಾಗಲಿಲ್ಲ. ಇದರಿಂದ ನಮಗೆ ನಿರಾಶೆ ಆಗಿದೆ’ ಎಂದು ಅಮೀರ್ ಹೇಳಿದ್ದಾರೆ.

ಅನುಷಾ ರಿಜ್ವಿ ನಿರ್ದೇಶನದ ಮೊದಲ ಚಿತ್ರ ‘ಪೀಪ್ಲಿ ಲೈವ್’. ರೈತರ ಆತ್ಮಹತ್ಯೆ ಬಗ್ಗೆ ಮಾಧ್ಯಮಗಳ ಲಘು ಧೋರಣೆಯನ್ನು ವಿಡಂಬನೆ ಮಾಡಿತ್ದ್ತು. ಒಟ್ಟು 66 ಚಲನಚಿತ್ರಗಳಲ್ಲಿ ಒಂಬತ್ತು ಚಲನಚಿತ್ರಗಳನ್ನು ಆಯ್ಕೆ ಮಾಡಲಾಗಿದ್ದು ಇವುಗಳಲ್ಲಿ ಅಂತಿಮವಾಗಿ ಐದು ಚಿತ್ರಗಳನ್ನು ಆಸ್ಕರ್‌ಗಾಗಿ ಅಕಾಡೆಮಿ ಈ ತಿಂಗಳ 25ರಂದು ಆಯ್ಕೆ ಮಾಡಲಿದೆ.

ಮೆಕ್ಸಿಕನ್, ಅಲ್ಜೀರಿಯಾ, ಕೆನಡಾ, ಡೆನ್ಮಾರ್ಕ್, ಗ್ರೀಕ್, ಜಪಾನ್, ದಕ್ಷಿಣ ಆಫ್ರಿಕಾ, ಸ್ಪೇನ್‌ನ  ಮತ್ತು ಸ್ವೀಡನ್ ಚಲನಚಿತ್ರಗಳು ಆಸ್ಕರ್ ಸ್ಪರ್ಧೆಯಲ್ಲಿ ಉಳಿದಿವೆ. 83ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ಫೆ. 27ರಂದು ಭಾನುವಾರ ಹಾಲಿವುಡ್‌ನ ಕೊಡಾಕ್ ಥಿಯೇಟರ್‌ನಲ್ಲಿ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry