ಗುರುವಾರ , ಜೂನ್ 24, 2021
27 °C

ಪೀಲೆ ಗೋಲುಗಳು, ಸಚಿನ್ ಶತಕಗಳು...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಫುಟ್‌ಬಾಲ್ ದಂತಕತೆ ಬ್ರೆಜಿಲ್‌ನ ಪೀಲೆ ಅವರ 1281 ಗೋಲುಗಳಿಗೆ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಶತಕಗಳ ಶತಕದ ಹೋಲಿಕೆ...!ಈ ಹೋಲಿಕೆ ಮಾಡಿದ್ದು ಇಂಗ್ಲೆಂಡ್‌ನ ಮಾಜಿ ಬೌಲರ್ ಆ್ಯಂಗಸ್ ಫ್ರೇಸರ್. ಇದನ್ನು `ದಿ ಇಂಡಿಪೆಂಡೆಂಟ್~ ಪತ್ರಿಕೆಯ ತಮ್ಮ ಅಂಕಣದಲ್ಲಿ ಬರೆದಿದ್ದಾರೆ. ಸಚಿನ್ ಚೊಚ್ಚಲ ಶತಕ ಗಳಿಸಿದಾಗ ಫ್ರೇಸರ್ ಬೌಲಿಂಗ್ ಮಾಡಿ ತೀವ್ರ ದಂಡನೆಗೆ ಒಳಗಾಗಿದ್ದರು.`ಶತಕಗಳ ಶತಕ ಗಳಿಸುವುದು ಅದ್ಭುತ ದಾಖಲೆ. ಇದು ಡಾನ್ ಬ್ರಾಡ್ಮನ್ ಅವರ ಟೆಸ್ಟ್ ಸರಾಸರಿ 99.94ಗಿಂತ ದೊಡ್ಡ ಸಾಧನೆ. ಸಚಿನ್ ಅವರ ಈ ಸಾಧನೆಯನ್ನು ಪೀಲೆಯ 1281 ಗೋಲುಗಳಿಗೆ ಹೋಲಿಸಬಹುದು. ಅಥವಾ ಒಲಿಂಪಿಕ್ಸ್‌ನ ರೋಯಿಂಗ್‌ನಲ್ಲಿ ಸರ್ ಸ್ಟೀವ್ ರೆಡ್‌ಗ್ರೇವ್ ಗಳಿಸಿದ ಐದು ಚಿನ್ನದ ಪದಕಗಳ ಸಾಧನೆಗೂ ಹೋಲಿಸಬಹುದು~ ಎಂದು ಫ್ರೇಸರ್ ಹೇಳಿದ್ದಾರೆ.ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗಲೇ ಸಚಿನ್ ಅವರ ಪ್ರತಿಭೆ ಅನಾವರಣವಾಗಿತ್ತು ಎಂದು ಅವರು ತಮ್ಮ ಅಂಕಣದಲ್ಲಿ ತಿಳಿಸಿದ್ದಾರೆ.`1990ರ ಭಾಗದಲ್ಲಿ ನಾನು ಅವರಿಗೆ ಬೌಲಿಂಗ್ ಮಾಡಿದ್ದೆ. ಆ ಎಸೆತಗಳನ್ನು ಸಚಿನ್ ತೀವ್ರವಾಗಿ ದಂಡಿಸಿದ್ದರು. ಜೊತೆಗೆ ಚೊಚ್ಚಲ ಶತಕ ಗಳಿಸಿದ್ದರು. ಆ ಲಿಟಲ್ ಮಾಸ್ಟರ್ ಈಗ ಶತಕಗಳ ಶತಕದ ಸಾಧನೆ ಮಾಡಿದ್ದಾರೆ ಎಂಬುದು ಖುಷಿ  ನೀಡುವ ವಿಷಯ.ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ~ ಎಂದಿದ್ದಾರೆ. ಆದರೆ ಅವರ ವಿದಾಯವನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟ ಎಂದು ಫ್ರೇಸರ್ ಹೇಳಿದ್ದಾರೆ. `ಕ್ರಿಕೆಟ್ ಕ್ರೇಜ್ ಭಾರತದ ಜನರು ಅವರ ವಿದಾಯವನ್ನು ಯಾವ ರೀತಿ ಸಹಿಸಿಕೊಳ್ಳುತ್ತಾರೆ ಎಂಬುದು ತಿಳಿಯದು. ಆ ಸಮಯ ಚಕ್ರವರ್ತಿಯೊಬ್ಬ ಸಾವನ್ನಪ್ಪಿದಂತೆ~ ಎಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.