ಪುಂಡ ಪೋಕರಿಗಳ ಹಾವಳಿ ತಪ್ಪಿಸಿ

ಭಾನುವಾರ, ಮೇ 26, 2019
27 °C

ಪುಂಡ ಪೋಕರಿಗಳ ಹಾವಳಿ ತಪ್ಪಿಸಿ

Published:
Updated:

ಬೆಂಗಳೂರಿನ ಹನುಮಂತನಗರ, ಗವೀಪುರ ಮುಂತಾದ ಬಡಾವಣೆಗಳಲ್ಲಿ ಪುಂಡ ಪೋಕರಿಗಳ ಹಾವಳಿ ಹೆಚ್ಚಾಗಿದೆ. ಗವೀಪುರಂ ಬಡಾವಣೆಯ ಅಕ್ಕಮಹಾದೇವಿ ಬಡಾವಣೆಯ ರಸ್ತೆ, ಮುಂತಾದೆಡೆಗಳಲ್ಲಿ ಬೆಳಗಿನಿಂದ ರಾತ್ರಿಯ ತನಕ ಅನೇಕ ಹುಡುಗರು ಮನೆಗಳ ಮುಂದೆ ಮತ್ತು ಅಂಗಡಿಗಳ ಮುಂದೆ ಕುಳಿತು ಹೆಂಗಸರನ್ನು ಮತ್ತು ಹುಡುಗಿಯರನ್ನು ಚುಡಾಯಿಸುತ್ತಾರೆ. ಅಸಭ್ಯವಾಗಿ ವರ್ತಿಸುತ್ತಾರೆ.ಪ್ರಶ್ನಿಸಿದರೆ ರಾತ್ರಿ ವೇಳೆಯಲ್ಲಿ ಕುಡಿದು ಬಂದು ಮನೆಗಳಿಗೆ ಕಲ್ಲು ಎಸೆಯುತ್ತಾರೆ. ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದರೂ ಪ್ರತಿಕ್ರಿಯೆ ದೊರೆತಿಲ್ಲ. ಸಮಸ್ಯೆ ಹಾಗೇ ಮುಂದುವರಿದಿದೆ.  ಆಯುಕ್ತರು ಇಂತಹ ಸಂಗತಿಗಳ ಕಡೆ ಗಮನ ನೀಡಿ ನಾಗರಿಕರಿಗೆ ನೆಮ್ಮದಿಯನ್ನು ನೀಡಬೇಕು. ಈ ಹಿಂದೆ ಅಲೋಕ್‌ಕುಮಾರ್ ಕೋದಂಡರಾಮಯ್ಯನವರ ಅವಧಿಯಲ್ಲಿ ಇಂತಹ ಪರಿಸ್ಥಿತಿ ಇರಲಿಲ್ಲ.  ದಯಮಾಡಿ ಆಯುಕ್ತರು ಗಮನಹರಿಸಿ ಸ್ಥಳೀಯ ಪೊಲೀಸ್ ಠಾಣೆಯನ್ನು ಕ್ರಿಯಾಶೀಲಗೊಳಿಸಬೇಕೆಂದು ಕೋರುತ್ತೇನೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry