ಪುಟಾಣಿ ಕೈಗಳ ಸಸ್ಯಾಂದೋಲನ

7

ಪುಟಾಣಿ ಕೈಗಳ ಸಸ್ಯಾಂದೋಲನ

Published:
Updated:
ಪುಟಾಣಿ ಕೈಗಳ ಸಸ್ಯಾಂದೋಲನ

ಪುಟ್ಟ, ಪುಟ್ಟ ಕೈಯಲ್ಲಿ ಪುಟ್ಟ ಸಸಿಗಳು. ಅದನ್ನು ನೆಟ್ಟು ನೀರುಣಿಸಿ ಅದಕ್ಕೆಲ್ಲ ತಮ್ಮ ಹೆಸರು ಇಟ್ಟು ಸಂಭ್ರಮಿಸುತ್ತಿದ್ದ ಪುಟಾಣಿಗಳು. 

ಇದು ಕಂಡು ಬಂದಿದ್ದು ಬೆಂಗಳೂರಿನ ಪ್ರತಿಷ್ಠಿತ ಡೇ ಕೇರ್ ಮತ್ತು ಪೂರ್ವ ಪ್ರಾಥಮಿಕ ಶಾಲೆ ಕಾರಾ 4 ಕಿಡ್ಸ್ ಮಕ್ಕಳಲ್ಲಿ ಪರಿಸರ ಅರಿವು ಮೂಡಿಸಲು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ.

ಆರು ತಿಂಗಳಿನಿಂದ ಆರು ವರ್ಷದ ಮಕ್ಕಳು ಈ ಹಸಿರು ಆಂದೋಲನದಲ್ಲಿ ಭಾಗಿಗಳಾದರು. ಪ್ರತಿ ಮಗು ಕೂಡ 2 ಸಸಿ ನೆಡುವುದರೊಂದಿಗೆ ನಾಮಕರಣ ಮಾಡಿದ್ದು ವಿಶೇಷ ಎನ್ನಿಸಿತು.

ಇಂದಿರಾ ನಗರ, ಎಚ್‌ಎಸ್‌ಆರ್ ಬಡಾವಣೆ ಮತ್ತು ನಂದಿ ದುರ್ಗದ  ರಸ್ತೆಯ ಸುತ್ತಲ ಪರಿಸರವನ್ನು ಹಸಿರಾಗಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.

ಈ ಬಗ್ಗೆ ಮಾತನಾಡಿದ ಕಾರಾ 4 ಕಿಡ್ಸ್ ಅಧ್ಯಕ್ಷ ರುಸ್ತುಮ್‌ಜಿ ಅವರು `ಸಸಿಗಳಿಗೆ ಮಕ್ಕಳ ಹೆಸರು ಮತ್ತು ಮಾಲೀಕತ್ವ ನೀಡುವ ಹಸಿರು ಆಂದೋಲನದ ಮೂಲಕ ಅವರಿಗೆ  ಪರಿಸರದ ಮೌಲ್ಯ ತಿಳಿಸಲು ಇದೊಂದು ಉತ್ತಮ ವೇದಿಕೆ~ ಎಂದರು. ಈ ಆಂದೋಲನದ ಭಾಗವಾಗಿ 150ಕ್ಕೂ ಹೆಚ್ಚು ಮಕ್ಕಳು ತಲಾ ಎರಡು ಸಸಿ ದತ್ತು ಪಡೆದರು. ಅದನ್ನು ಪೋಷಿಸುವ ಹೊಣೆ ಹೊತ್ತುಕೊಂಡರು. ನಿತ್ಯ ಅದನ್ನು ಗಮನಿಸುವ, ಸ್ಪರ್ಶಿಸಿಸುವ, ಹೂ ಬಿಟ್ಟಾಗಿ ಮೂಸಿ ಪರಿಮಳದ ಖುಷಿ ಪಡುವ, ನೀರುಣಿಸುವ ಪ್ರತಿಜ್ಞೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry