ಮಂಗಳವಾರ, ನವೆಂಬರ್ 19, 2019
23 °C

ಪುಟಿದೇಳುವ ವಿಶ್ವಾಸವಿದೆ: ಪಾಂಟಿಂಗ್

Published:
Updated:

ಜೈಪುರ (ಪಿಟಿಐ): `ನಾನು ಹಾಗೂ ಸಚಿನ್ ತೆಂಡೂಲ್ಕರ್ ಹೆಚ್ಚು ಜವಾಬ್ದಾರಿಯಿಂದ ಆಡಬೇಕು. ನಮ್ಮಿಬ್ಬರ ವೈಫಲ್ಯ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತಿದೆ. ಹಾಗಾಗಿ ಸ್ಥಿರ ಪ್ರದರ್ಶನ ತೋರುವುದು ತುಂಬಾ ಅಗತ್ಯವಾಗಿದೆ. ಟೂರ್ನಿಯಲ್ಲಿ ಪುಟಿದೇಳುವ ವಿಶ್ವಾಸವಿದೆ' ಎಂದು ಮುಂಬೈ ಇಂಡಿಯನ್ಸ್ ತಂಡದ ನಾಯಕ ರಿಕಿ ಪಾಂಟಿಂಗ್ ನುಡಿದಿದ್ದಾರೆ.ಐಪಿಎಲ್ ಆರನೇ ಆವೃತ್ತಿಯಲ್ಲಿ ಐದು ಪಂದ್ಯಗಳಿಂದ ಆರು ಪಾಯಿಂಟ್ ಹೊಂದಿರುವ ಈ ತಂಡದವರು ಬುಧವಾರ ರಾತ್ರಿ ರಾಜಸ್ತಾನ ರಾಯಲ್ಸ್ ಎದುರು ಹೀನಾಯ ಸೋಲು ಕಂಡಿದ್ದರು. ರಾಹುಲ್ ದ್ರಾವಿಡ್ ಸಾರಥ್ಯದ ರಾಯಲ್ಸ್ ನೀಡಿದ್ದ 180 ರನ್‌ಗಳ `ಗುರಿಗೆ ಉತ್ತರವಾಗಿ ಮುಂಬೈ ಇಂಡಿಯನ್ಸ್ 18.2 ಓವರ್‌ಗಳಲ್ಲಿ ಕೇವಲ 92 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತ್ತು.87 ರನ್‌ಗಳ ಗೆಲುವಿನಿಂದ ರಾಯಲ್ಸ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಐದು ಪಂದ್ಯಗಳಿಂದ ಒಟ್ಟು ಎಂಟು ಪಾಯಿಂಟ್ ಹೊಂದಿದೆ.`ಸ್ಥಿರ ಪ್ರದರ್ಶನದ ಮೂಲಕ ಟೂರ್ನಿಯ ಪಾಯಿಂಟ್ ಪಟ್ಟಿಯಲ್ಲಿ ಮೇಲಿನ ಕ್ರಮಾಂಕದಲ್ಲಿ ಇರಬೇಕಾದರೆ ಸಚಿನ್ ಹಾಗೂ ನನ್ನಿಂದ ಉತ್ತಮ ಆಟ ಮೂಡಿಬರಬೇಕು' ಎಂದು ಅವರು ಪಂದ್ಯದ ನಂತರ ಪ್ರತಿಕ್ರಿಯಿಸಿದರು.

ಪ್ರತಿಕ್ರಿಯಿಸಿ (+)