ಪುಟ್ಟಣ್ಣ ಶೆಟ್ಟರನ್ನು ಮರೆಯಬಹುದೆ?

7

ಪುಟ್ಟಣ್ಣ ಶೆಟ್ಟರನ್ನು ಮರೆಯಬಹುದೆ?

Published:
Updated:

ಕನ್ನಡನಾಡಿಗೆ ಅನುಪಮ ಸೇವೆ ಸಲ್ಲಿಸಿದವರೆಂದು ಡಿವಿಜಿ ಅವರಿಂದ ತುಂಬು ಪ್ರಶಂಸೆಗೆ ಪಾತ್ರರಾದ ಸರ್. ಕೆ.ಪಿ.ಪುಟ್ಟಣ್ಣ ಶೆಟ್ಟಿ ಅವರನ್ನು ಈಗಿನ ಪೀಳಿಗೆ ನೆನಪು ಮಾಡಿಕೊಳ್ಳುವಂಥ ಕೆಲಸ ಆಗಬೇಕಿದೆ.

 

ಮೈಸೂರು ಬ್ಯಾಂಕ್ ಸ್ಥಾಪನೆಗೆ ಮೂಲ ಪ್ರೇರಕರೇ ಅವರು ಎಂದು ಡಿವಿಜಿ ಸ್ಮರಿಸಿಕೊಂಡಿದ್ದರು. ಅವರ ಹೆಸರನ್ನು ಬೆಂಗಳೂರು ನಗರದ ಪುರಭವನಕ್ಕೆ ಇಡಲಾಗಿದ್ದರೂ ಅದರಲ್ಲಿ ಅವರನ್ನು ಸರ್. ಪುಟ್ಟಣ್ಣ ಚೆಟ್ಟಿ ಎಂದು ತಪ್ಪಾಗಿ ಬರೆಯಲಾಗಿದೆ.

ಅದು ಸರ್. ಪುಟ್ಟಣ್ಣ ಶೆಟ್ಟಿ ಎಂದು ಬದಲಾಗಬೇಕಿದೆ. ಅವರ ಪ್ರಯತ್ನದಿಂದ ಸ್ಥಾಪನೆಯಾಗಿದ್ದ ಮೈಸೂರು ಬ್ಯಾಂಕ್‌ನ ಶಾಖೆಗಳಲ್ಲಿ ಸರ್. ಎಂ. ವಿಶ್ವೇಶ್ವರಯ್ಯ ಅವರೊಂದಿಗೆ ಪುಟ್ಟಣ್ಣ ಶೆಟ್ಟರ ಭಾವಚಿತ್ರವನ್ನು ಶಾಶ್ವತವಾಗಿ ಹಾಕಿ ಗೌರವಿಸಬೇಕು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry