ಮಂಗಳವಾರ, ಜೂನ್ 22, 2021
27 °C

ಪುಟ್ಟ ಹಕ್ಕಿಯ ಕಲರವ ನೆನೆದು...

ಸುಜಾತಾ ಪಾಟೀಲ Updated:

ಅಕ್ಷರ ಗಾತ್ರ : | |

ಪರಿಸರ ವಿಕೋಪದಿಂದ ಗುಬ್ಬಿಗಳು ಕಣ್ಮರೆ­ಯಾಗು­ತ್ತಿರುವ ಬಗ್ಗೆ ಸಾಕಷ್ಟು ಶೋಧನೆ ನಡೆಯು­ತ್ತಿ­ದ್ದರೂ ಸಮಸ್ಯೆಗೆ ಪರಿಹಾರ ಮಾತ್ರ ಪೂರ್ಣ ಪ್ರಮಾಣದಲ್ಲಿ ದೊರೆತಿಲ್ಲ. ಪರಿಸರವಷ್ಟೇ ಅಲ್ಲ ಮಾನವ ನಿರ್ಮಿತ ಮೊಬೈಲ್ ಟಾವರ್ ಗಳಿಂದ ಸೂಸುವ ವಿದ್ಯುತ್ ಕಾಂತೀಯ ತರಂಗಗಳು ಹಾಗೂ ಈಗಿನ ನೂತನ ರೀತಿಯ ಮನೆಗಳು ಗುಬ್ಬಿಗಳ ಉಳಿವಿಗೆ ಪೂರಕವಾಗಿಲ್ಲ.

ಮನೆ ಅಂಗಳದ ಗುಬ್ಬಿಗಳ ದಿನವನ್ನು ವಿಶ್ವ ಮಟ್ಟದಲ್ಲಿ ಸಂಘಟಿಸುವಲ್ಲಿ ‘ನೇಚರ್ ಫಾರ್ ಎವರ್ ಸೊಸೈಟಿ’ ಕೊಡುಗೆ ಅನನ್ಯವಾದುದು.

ಗುಬ್ಬಿಗಳ ಉಳಿವಿಗಾಗಿ ಮನೆ ಅಂಗಳ ತೋಟವಾಗಬೇಕು. ಮನೆ ಮಾಳಿಗೆಯ ಮೇಲೆ ಮಡಿಕೆ ನೀರು ಅವುಗಳಿಗೆ ಆವ್ಹಾನ ನೀಡುವಂತಾಗಬೇಕು.‘ ಹಕ್ಕಿಗಳ ಲೋಕದಲಿ ರೆಕ್ಕೆ ಮೂಡುವುದೆನಗೆ...ಎನ್ನುವ ರಾಷ್ಟ್ರಕವಿ ಕುವೆಂಪು ಅವರ ಕವನದ ಸಾಲುಗಳು ಮತ್ತೆ, ಮತ್ತೆ ಹಕ್ಕಿಗಳನ್ನು ನೆನಪಿಸುತ್ತವೆ. ಹೀಗಾಗಿ ಮನೆ ಅಂಗಳದ ಮುಖ್ಯ ಅತಿಥಿಯನ್ನು ಮತ್ತೆ ಬರಮಾಡಿಕೊಳ್ಳುವಲ್ಲಿ ಮತ್ತು ಅವುಗಳ ಬದುಕಿಗೆ ಭರವಸೆ ತುಂಬುವಲ್ಲಿ ನಮ್ಮ ಸಂಕಲ್ಪ ಅತ್ಯವಶ್ಯಕ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.