ಭಾನುವಾರ, ಅಕ್ಟೋಬರ್ 20, 2019
25 °C

ಪುಣೆಯಲ್ಲಿ ಬಿಡ್ವೆ ಅಂತ್ಯ ಸಂಸ್ಕಾರ

Published:
Updated:

ಮುಂಬೈ (ಪಿಟಿಐ): ಕಳೆದ ತಿಂಗಳು ಬ್ರಿಟನ್‌ನಲ್ಲಿ ಹತ್ಯೆಗೀಡಾದ ಭಾರತೀಯ ವಿದ್ಯಾರ್ಥಿ ಅನುಜ್ ಬಿಡ್ವೆ ಅವರ ಅಂತ್ಯಸಂಸ್ಕಾರ ಶನಿವಾರ ಪುಣೆಯಲ್ಲಿ ನಡೆಯಿತು. ಚಳಿಯನ್ನೂ ಲೆಕ್ಕಿಸದೆ ಪಾಲ್ಗೊಂಡಿದ್ದ ಸಾವಿರಾರು ಜನ, ಅನುಜ್‌ಗೆ ಅಂತಿಮ ನಮನ ಸಲ್ಲಿಸಿದರು.ಮಹಾರಾಷ್ಟ್ರ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ವಿನೋದ್ ತಾವ್ಡೆ, ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರಕಾಶ್ ಜಾವಡೇಕರ್, ಪುಣೆ ಸಂಸದ ಗಿರೀಶ್ ಬಾಪಟ್  ಅನುಜ್ ಮನೆಗೆ ಭೇಟಿ ನೀಡಿದ್ದರು. ಲಂಡನ್‌ನಿಂದ ಬೆಳಿಗ್ಗೆ 11.45ಕ್ಕೆ ಅನುಜ್ ಪೋಷಕರು ಬ್ರಿಟಿಷ್ ಏರ್‌ವೇಸ್ ವಿಮಾನದಲ್ಲಿ ಮೃತದೇಹವನ್ನು ಮುಂಬೈಗೆ ತಂದು ಬಳಿಕ ಪುಣೆಗೆ ಒಯ್ದರು.

Post Comments (+)