ಪುಣೆ ಸ್ಫೋಟ: ಶಂಕಿತರ ಕಸ್ಟಡಿ ವಿಸ್ತರಣೆ

7

ಪುಣೆ ಸ್ಫೋಟ: ಶಂಕಿತರ ಕಸ್ಟಡಿ ವಿಸ್ತರಣೆ

Published:
Updated:

ನವದೆಹಲಿ (ಪಿಟಿಐ): ಪುಣೆ ಸ್ಫೋಟಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಿಷೇಧಿತ ಇಂಡಿಯನ್ ಮುಜಾಹಿದ್ದೀನ್ (ಐಎಂ) ಸಂಘಟನೆ ಮೂವರು ಶಂಕಿತ ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿಯನ್ನು ದೆಹಲಿ ಕೋರ್ಟ್ 10 ದಿನಗಳಿಗೆ ವಿಸ್ತರಿಸಿದೆ.ಆರೋಪಿಗಳಾದ ಅಸದ್ ಖಾನ್ (33), ಇಮ್ರಾನ್ ಖಾನ್ (31), ಸೈಯದ್ ಫಿರೋಜ್ (38) ಪೊಲೀಸರ ವಶದಲ್ಲಿದ್ದು, ಬಂಧನದ ಅವಧಿಯನ್ನು ವಿಸ್ತರಿಸಿ  ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಬುಧವಾರ ಆದೇಶಿಸಿದರು.ಪ್ರಕರಣದ ಮತ್ತೊಬ್ಬ ಐಎಂ ಸದಸ್ಯನನ್ನು ಮಹಾರಾಷ್ಟ್ರದಲ್ಲಿ ಬಂಧಿಸಲಾಗಿದ್ದು, ಅ.30ರ ವರೆಗೆ ಆತನನ್ನು ವಿಶೇಷ ದಳದ ವಶಕ್ಕೆ ನೀಡಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry