ಬುಧವಾರ, ಜೂನ್ 16, 2021
27 °C

ಪುಣ್ಯಾಶ್ರಮಕ್ಕೆ ಉದಾರ ದಾನ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುರುಗೋಡು (ಬಳ್ಳಾರಿ ಜಿಲ್ಲೆ):  ಹಾನಗಲ್ ಕುಮಾರಸ್ವಾಮಿಗಳ ಕೃಪಾಕಟಾಕ್ಷದಿಂದ ಅಂಧ-ಅನಾಥ ಮಕ್ಕಳ ಕೈಯಲ್ಲಿದ್ದ ~ಭಿಕ್ಷಾಪಾತ್ರೆ ತೆಗೆದು ಅಕ್ಷಯ ಪಾತ್ರೆ~ ನೀಡುವ ಶಕ್ತಿ ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ಲಭಿಸಿದೆ ಎಂದು ಕಲ್ಲಯ್ಯ ಅಜ್ಜ ಹೇಳಿದರು.ಸಮೀಪದ ಸಿರಿಗೇರಿ ಗ್ರಾಮದಲ್ಲಿ ಶುಕ್ರವಾರದಿಂದ ಮೂರು ದಿನ ನಡೆಯುವ ~ಪುಟ್ಟರಾಜರ ಜೋಳಿಗೆ ನಿಮ್ಮ ಮನೆಬಾಗಿಲಿಗೆ~ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಪುಟ್ಟರಾಜ ಶ್ರೀಗಳ ಕಾಲಾನಂತರ ಆಶ್ರಮದಲ್ಲಿ ಅಂದಾಜು 60 ಲಕ್ಷ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿ ನಡೆದಿವೆ. ಆಶ್ರಮದಲ್ಲಿ 260ಕ್ಕೂ ಅಧಿಕ ಜನರು ಸಂಗೀತ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ವಿವರಿಸಿದರು.  ಇಲ್ಲಿನ ಮುಸ್ಲಿಮ್ ಬಾಂಧವರು ಖಾದರ್ ಬಾಷಾ ಅವರ ನೇತೃತ್ವದಲ್ಲಿ  10,000 ರೂಪಾಯಿ ದೇಣಿಗೆ ನೀಡಿದರು.  ಮೃತ್ಯುಂಜಯಸ್ವಾಮಿ,  ಎಸ್.ಎಂ. ನಾಗರಾಜಸ್ವಾಮಿ, ಚಂದ್ರಶೇಖರಗೌಡ, ಮುರ್ಷಿದ್ ಅಹ್ಮದ್‌ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.