ಸೋಮವಾರ, ಮೇ 23, 2022
24 °C
ಖಾಸಗಿ ಬಸ್-ಲಾರಿ ಡಿಕ್ಕಿ

ಪುತ್ತೂರು: ವಿದ್ಯಾರ್ಥಿಗಳು ಸೇರಿ 22 ಮಂದಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುತ್ತೂರು: ಖಾಸಗಿ ಬಸ್ ಮತ್ತು ಲಾರಿಯೊಂದರ ನಡುವೆ ಡಿಕ್ಕಿ ಸಂಭವಿಸಿ ಎರಡೂ ವಾಹನದ ಚಾಲಕರು ಹಾಗೂ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳು ಸೇರಿದಂತೆ 22 ಮಂದಿ ಗಾಯಗೊಂಡ ಘಟನೆ ಬುಧವಾರ ಸಂಜೆ ಪೋಳ್ಯದ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ಲಾರಿ ಮತ್ತು ಪುತ್ತೂರಿನಿಂದ ವಿಟ್ಲಕ್ಕೆ ತೆರಳುತ್ತಿದ್ದ ವೆಲಂಕಣಿ ಹೆಸರಿನ  ಖಾಸಗಿ ಬಸ್ ನಡುವೆ ಡಿಕ್ಕಿ ಸಂಭವಿಸಿದೆ.ಲಾರಿ ಚಾಲಕ ಸುಳ್ಯ ತಾಲ್ಲೂಕಿನ ಏನೆಕಲ್ಲು ನಿವಾಸಿ ಜಗದೀಶ್ ಎನ್. (25)  ಲಾರಿಯಲ್ಲಿದ್ದ ಅವರ ಸಹೋದರ  ಕುಸುಮಾಧರ್ (23), ಸ್ನೇಹಿತ ಏನೆಕಲ್ಲಿನ  ಸುಜಿತ್ (25),  ಲಾರಿ ಕ್ಲೀನರ್ ಏನೆಕಲ್ಲಿನ ರಂಜಿತ್ (20), ಬಸ್ ಚಾಲಕ ವಿಟ್ಲ ನಿವಾಸಿ  ಬಾಲಕೃಷ್ಣ (35), ನಿರ್ವಾಹಕ ರಾಜೇಶ್, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳಾದ ಅಳಿಕೆಮಜಲಿನ ಪ್ರತಿಭಾ, ಅಳಿಕೆಯ ಚಿನ್ಮಯ್ ,ವಿಟ್ಲದ ಸಿಮ್ರೋನ್ ,ಪೆರ್ಲದ ಸುಜಿತಾ ರೈ ,ಕಾಂಞಂಗಾಡಿನ ದಿವ್ಯಾ, ಅಳಿಕೆಮಜಲಿನ ಪ್ರಜ್ವಳಾ ,ಸಾರಡ್ಕದ ನಿರಂಜನ್ ,ಉಳಿದ ಪ್ರಯಾಣಿಕರಾದ ಕನ್ಯಾನದ ಸರಸ್ವತಿ, ಪುತ್ತೂರಿನ ಗಣೇಶ್ ಬಾಳಿಗ, ಬೈರಿಕಟ್ಟೆಯ ಯಶೋಧಾ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಅಲ್ಪಸ್ವಲ್ಪ ಗಾಯಗೊಂಡಿದ್ದ ವಿದ್ಯಾರ್ಥಿಗಳಾದ ನೀರ್ಕಜೆಯ ಶಿಲ್ಪ ,ಅಳಿಕೆಯ ಅನನ್ಯ ,ಸಾಲೆತ್ತೂರಿನ ಸ್ವಾತಿ , ಬಸ್ಸಿನಲ್ಲಿದ್ದ ಉಳಿದ ಪ್ರಯಾಣಿಕರಾದ ನಾರಾಯಣ, ಜಲಜಾಕ್ಷಿ, ಮಾಲಿನಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.ಸರಸ್ವತಿ, ಯಶೋಧಾ, ನಾರಾಯಣ, ಜಲಜಾಕ್ಷಿ, ಮಾಲಿನಿ, ವಿದ್ಯಾರ್ಥಿಗಳಾದ ಚಿನ್ಮಯಿ, ಪ್ರತಿಭಾ, ಸಿಮ್ರೋನ್, ಆಶ್ವಿತಾ, ದಿವ್ಯಾ, ಪ್ರಜ್ವಲ್, ನಿರಂಜನ್  ಎಂಬವರು ಗಾಯಗೊಂಡಿದ್ದಾರೆ. ಪುತ್ತೂರು ಸಂಚಾರಿ ಪೊಲೀಸರು ಪ್ರಕರಣ  ದಾಖಲಿಸಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.