ಗುರುವಾರ , ಮೇ 26, 2022
23 °C
ಸದ್ಯಕ್ಕೆ ಮಹಿಳಾ ನಿಲಯದಲ್ಲಿ ವಾಸ; ಇಂದು ನಿರ್ಧಾರ ಸಾಧ್ಯತೆ

ಪುತ್ರಿ `ಆಸರೆ' ಬಯಸಿದ ಕಾಳೀಬಾಯಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಜಾವಾಣಿ ವಾರ್ತೆ

ದಾವಣಗೆರೆ: ಹ
ಣವಿದ್ದ ಗಂಟಿನೊಂದಿಗೆ ಇಲ್ಲಿನ ಹದಡಿ ರಸ್ತೆಯ ಬಸ್ ನಿಲ್ದಾಣದಲ್ಲಿದ್ದ ಕಾಳೀಬಾಯಿ ಅವರಿಗೆ ಕೈಗಾರಿಕಾ ಪ್ರದೇಶದಲ್ಲಿರುವ ರಾಜ್ಯ ಮಹಿಳಾ ನಿಲಯದಲ್ಲಿ ಆಶ್ರಯ ಕಲ್ಪಿಸಲಾಗಿದೆ.ಈ ನಡುವೆ, ಮಾಧ್ಯಮದಲ್ಲಿ ಬಂದ ಸುದ್ದಿ ಗಮನಿಸಿದ ಆಕೆಯ ಪುತ್ರಿ ಲಲಿತಾ ಎನ್ನುವವರು ಪತಿ ಲಕ್ಷ್ಮಣನಾಯ್ಕ ಜತೆ ಮಹಿಳಾ ನಿಲಯಕ್ಕೆ ಬಂದಿದ್ದಾರೆ. ಇದರೊಂದಿಗೆ ಹಲವು ವರ್ಷಗಳ ನಂತರ ತಾಯಿ-ಮಗಳ ಸಂಗಮವಾಗಿದೆ. ಈ ಸಂದರ್ಭ ಅವರಿಬ್ಬರ ಸಂತಸಕ್ಕೆ ಪಾರವೇ ಇರಲಿಲ್ಲ.ತಾಯಿ ಕಾಳೀಬಾಯಿಯನ್ನು ತಮ್ಮಂದಿಗೆ ಕರೆದುಕೊಂಡು ಹೋಗುವ ಇಂಗಿತವನ್ನು ಪುತ್ರಿ ವ್ಯಕ್ತಪಡಿಸಿದ್ದಾರೆ. ಲಲಿತಾ ಅವರು ಪ್ರಸ್ತುತ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸಮೀಪದ ಮಂಡಗದ್ದೆಯಲ್ಲಿ ಪತಿಯೊಂದಿಗೆ ವಾಸವಿದ್ದಾರೆ.`ಹಲವು ವರ್ಷಗಳ ಹಿಂದೆಯೇ ತಾಯಿಯನ್ನು ನಮ್ಮಪ್ಪ ಹುಚ್ಚಿ ಎಂದು ಹೇಳಿ ಓಡಿಸಿಬಿಟ್ಟಿದ್ದ. ನಂತರ ಹುಡುಕಿದರೂ ಪತ್ತೆಯಾಗಿರಲಿಲ್ಲ. ಇದೀಗ ಮಾಧ್ಯಮದಲ್ಲಿ ಬಂದ ವರದಿ ಗಮನಿಸಿದ್ದರಿಂದ ತಾಯಿ ಪತ್ತೆಯಾಗಿದ್ದಾರೆ. ಇದು ಬಹಳ ಖುಷಿ ತರಿಸಿದೆ. ಈಗಲಾದರೂ ಅವರು ನಮ್ಮಂದಿಗೆ ಇರಲೆಂದು ಬಯಸುತ್ತೇವೆ' ಎಂದು ಆಕೆಯ ಪುತ್ರಿ ಲಲಿತಾ ತಿಳಿಸಿದ್ದಾರೆ.`ಅವರ ಬಳಿ ಇರುವ ಹಣದ ಆಸೆಗಾಗಿ ಬಂದಿಲ್ಲ. ಈ ಹಣವನ್ನು ಅವರ ವೈಯಕ್ತಿಕ ಖರ್ಚಿಗಷ್ಟೇ ಬಳಸಲಿ. ನಮ್ಮಂದಿಗೆ ಬಂದರೆ ಸಾಕು' ಎಂದು ತಿಳಿಸಿದ್ದಾರೆ ಎಂದು ಮಹಿಳಾ ನಿಲಯದ ಅಧೀಕ್ಷಕಿ ಗಂಗಮ್ಮ `ಪ್ರಜಾವಾಣಿ'ಗೆ ಮಾಹಿತಿ ನೀಡಿದರು.`ಮಗಳನ್ನು ನಾನು ಚೆನ್ನಾಗಿ ನೋಡಿಕೊಳ್ಳಲಾಗಲಿಲ್ಲ. ಮದುವೆಯನ್ನೂ ಮಾಡಲಾಗಲಿಲ್ಲ. ಇನ್ನು ಮುಂದೆಯಾದರೂ ಮಗಳೊಂದಿಗೆ ಇರುತ್ತೇನೆ. ನನ್ನನ್ನು ಕಳುಹಿಸಿಕೊಡಿ' ಎಂದು ಕಾಳೀಬಾಯಿಯೂ ಕೋರಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ಕಾಳೀಬಾಯಿಯ ಪುತ್ರಿ ಹಾಗೂ ಅಳಿಯನಿಂದ `ಚೆನ್ನಾಗಿ ನೋಡಿಕೊಳ್ಳುತ್ತೇವೆ' ಎಂದು ಕಾಗದ ಬರೆಸಿಕೊಳ್ಳಲಾಗಿದೆ. ಈ ಕುಟುಂಬದ ಫೋಟೋ ತೆಗೆಸಲಾಗಿದೆ.

ಸದ್ಯಕ್ಕೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಜುಲೈ 16ರಂದು ಚಿಲ್ಲರೆ ಹಣವನ್ನು ಬ್ಯಾಂಕ್‌ಗೆ ನೀಡಿ ನೋಟಾಗಿ ಪರಿವರ್ತಿಸಿದ ನಂತರ, ಆಕೆಯ ಪುತ್ರಿಯ ಬ್ಯಾಂಕ್ ಖಾತೆ ಮತ್ತಿತರ ವಿವರ ಪಡೆದು ಹಣ ಹಸ್ತಾಂತರಿಸಲಾಗುವುದು. ನಂತರ, ಕಾಳೀಬಾಯಿ ಎಲ್ಲಿರಬೇಕು ಎಂಬುದನ್ನು ನಿರ್ಧರಿಸಲಾಗುವುದು' ಎಂದು ಸ್ಪಷ್ಟಪಡಿಸಿದರು.`15-20 ವರ್ಷದ ಹಿಂದೆಯೇ ಮನೆ ಬಿಟ್ಟು ಬಂದೆ ಎಂದು ಕಾಳಿಬಾಯಿ ಹೇಳುತ್ತಾಳೆ. ಪತಿ, ಪುತ್ರ ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ ಎಂದು ನುಡಿಯುತ್ತಾಳೆ' ಎಂದು ಗಂಗಮ್ಮ ತಿಳಿಸಿದರು.ಭಾನುವಾರ ಇಲ್ಲಿನ ಹದಡಿ ರಸ್ತೆಯ ಬಸ್ ನಿಲ್ದಾಣ ಸ್ವಚ್ಛಗೊಳಿಸಲು ಪಾಲಿಕೆ ಸಿಬ್ಬಂದಿ ಮುಂದಾದಾಗ ಕಾಳೀಬಾಯಿಯ ಗಂಟುಗಳು ಪತ್ತೆಯಾಗಿದ್ದವು. ಅದರಲ್ಲಿದ್ದ ಬಹುತೇಕ ಚಿಲ್ಲರೆ ಹಣವನ್ನು ಕೆಟಿಜೆ ನಗರ ಠಾಣೆಯಲ್ಲಿ ಎಣಿಕೆ ಮಾಡಲಾಗಿತ್ತು. ಕೆಲ ನೋಟುಗಳು ಬಿಟ್ಟರೆ ಬಹುತೇಕ ಚಿಲ್ಲರೆಯೇ ಇದ್ದ ಈ ಹಣದ ಒಟ್ಟು ಮೌಲ್ಯ ರೂ 31,200 ಆಗಿತ್ತು.

ಇದನ್ನು ಎರಡು ಸಿಮೆಂಟಿನ ಚೀಲದಲ್ಲಿ ತುಂಬಿಕೊಂಡು ಹೋಗಿ, ರಾಜ್ಯ ಮಹಿಳಾ ನಿಲಯಕ್ಕೆ ಸಾಗಿಸಲಾಗಿದೆ. ಪೊಲೀಸರು, ಆಕೆಗೆ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಮಹಿಳಾ ನಿಲಯದಲ್ಲಿ ಆಶ್ರಯ ಕಲ್ಪಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.