ಪುತ್ರ ರಿಷದ್ ವಿಪ್ರೊ ಸಿಇಒ ಆಗಲ್ಲ: ಪ್ರೇಮ್‌ಜಿ

7

ಪುತ್ರ ರಿಷದ್ ವಿಪ್ರೊ ಸಿಇಒ ಆಗಲ್ಲ: ಪ್ರೇಮ್‌ಜಿ

Published:
Updated:
ಪುತ್ರ ರಿಷದ್ ವಿಪ್ರೊ ಸಿಇಒ ಆಗಲ್ಲ: ಪ್ರೇಮ್‌ಜಿ

ದಾವೋಸ್(ಪಿಟಿಐ): `ವಿಪ್ರೊ'ದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ (ಸಿಇಒ) ತಮ್ಮ ಪುತ್ರ ರಿಷದ್  (35) ಯಾವತ್ತಿಗೂ ನೇಮಕಗೊಳ್ಳುವುದಿಲ್ಲ ಎಂದು ಅಜೀಂ ಪ್ರೇಮ್‌ಜಿ ಹೇಳಿದ್ದಾರೆ. ಆದರೆ, ಕಂಪೆನಿಯ ಸಂಸ್ಥಾಪಕ ಮಾಲೀಕರ ಪ್ರತಿನಿಧಿಯಾಗಿ     ನಿರ್ದೇಶಕ ಮಂಡಳಿಯಲ್ಲಿರುವರು ಎಂದು ಸ್ಪಷ್ಟಪಡಿಸಿದ್ದಾರೆ.ಇಲ್ಲಿ `ವಿಶ್ವ ಆರ್ಥಿಕ ವೇದಿಕೆ' ಕಾರ್ಯಕ್ರಮದ ನಂತರ ಟಿವಿ ಸಂದರ್ಶನ ನೀಡಿದ ಪ್ರೇಮ್‌ಜಿ, `ತಮ್ಮ ಪುತ್ರರಿಬ್ಬರೂ ಸಂಸ್ಥೆಯ `ಸಿಇಒ' ಹುದ್ದೆಯ ಹಾದಿಯಲ್ಲಿಲ್ಲ. ರಿಷದ್‌ನ ವೃತ್ತಿಬದುಕಿನ ಮೆಟ್ಟಿಲುಗಳಲ್ಲಿ ಈ ಹುದ್ದೆಯ ಪ್ರಸ್ತಾಪವಿಲ್ಲ' ಎಂದು ಹೇಳಿದ್ದಾರೆ.2007ರಲ್ಲಿ `ವಿಶೇಷ ಯೋಜನೆಗಳ ವಿಭಾಗದ ಬಿಜಿನೆಸ್ ಹೆಡ್' ಆಗಿ ವಿಪ್ರೊ ಸಂಸ್ಥೆ ಪ್ರವೇಶಿಸಿದ ಹಾರ್ವರ್ಡ್ ಬಿಜಿನೆಸ್ ಸ್ಕೂಲ್ ಪದವೀಧರ ರಿಷದ್, 3 ವರ್ಷ ನಂತರ `ಮುಖ್ಯ ಕಾರ್ಯತಂತ್ರ ಅಧಿಕಾರಿ'ಯಾಗಿ ಬಡ್ತಿ  ಪಡೆದರು.`ಸಿಇಒ' ಟಿ.ಕೆ.ಕುರಿಯನ್ ಭವಿಷ್ಯದಲ್ಲಿ ಸಂಸ್ಥೆಯಲ್ಲಿ ಇನ್ನಷ್ಟು ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎನ್ನುವ ಮೂಲಕ ಅವರು `ವ್ಯವಸ್ಥಾಪಕ ನಿರ್ದೇಶಕ' ಹುದ್ದೆ ಅಲಂಕರಿಸಲಿದ್ದಾರೆ ಎಂಬ ಸುಳಿವನ್ನೂ ಪ್ರೇಮ್‌ಜಿ ನೀಡಿದ್ದಾರೆ.`ವಿಪ್ರೊ'ದಲ್ಲಿ ಪ್ರೇಮ್‌ಜಿ  ಶೇ 3.7ರಷ್ಟು ನೇರ ಪಾಲುದಾರಿಕೆ ಇದ್ದರೆ, ಅವರದೇ ಮಾಲೀಕತ್ವದ ವಿವಿಧ ಸಂಸ್ಥೆಗಳು ವಿಪ್ರೊದಲ್ಲಿ ಶೇ 74 ಷೇರು ಹೊಂದಿವೆ.ರಿಷದ್ ಶೇ 0.03ರಷ್ಟು ನೇರ ಪಾಲುದಾರಿಕೆ ಹೊಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry