ಪುನರಪಿ ಅಮಿತಾಬ್

7

ಪುನರಪಿ ಅಮಿತಾಬ್

Published:
Updated:
ಪುನರಪಿ ಅಮಿತಾಬ್

‘ಪಾ’ ಚಿತ್ರದ ವಿಭಿನ್ನ ಪಾತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ನಂತರ ಅಮಿತಾಬ್ ಬಚ್ಚನ್ ನಂತರ ಕೊಂಚ ದಿನ ಬಿಡುವು ಪಡೆದಿದ್ದರು. ಇದೀಗ ‘ಬೂಧಾ’ ಚಿತ್ರ ಒಪ್ಪಿಕೊಂಡಿದ್ದು ಅದರಲ್ಲಿ ಮನೋಬ್ರಾಂತಿ ಇರುವ 60 ವರ್ಷದ ವ್ಯಕ್ತಿಯ ಪಾತ್ರದಲ್ಲಿ ನಟಿಸಲಿದ್ದಾರೆ.ವೃತ್ತಿಯುದ್ದಕ್ಕೂ ಸವಾಲಿನ ಮತ್ತು ವಿಭಿನ್ನ ಪಾತ್ರಗಳಲ್ಲಿ ನಟಿಸಿಕೊಂಡು ಬಂದಿರುವ ಅಮಿತಾಬ್ ಈ ಚಿತ್ರದಲ್ಲಿ ದೇಹ ಬೆಳೆದಿದ್ದರೂ ಮನಸ್ಸು ಬೆಳೆಯದ ಮುಗ್ಧ ಮಾನವನಾಗಿ ಪಾತ್ರಕ್ಕೆ ಜೀವ ತುಂಬುವ ಉತ್ಸಾಹದಲ್ಲಿದ್ದಾರೆ.‘ಈ ಚಿತ್ರದಲ್ಲಿ ನನಗೆ 60 ವರ್ಷವಾಗಿದ್ದರೂ 25 ವರ್ಷದ ಯುವಕನ ಮನಸ್ಸು ಇರುತ್ತದೆ. ಅದರಿಂದ ಯುವಕನಂತೆ ಕಾಣುವ ಹಂಬಲ ಇರುತ್ತದೆ. ಇದು ನನಗೆ ವಿಶಿಷ್ಟ ಪಾತ್ರ’ ಎಂದು ಅಮಿತಾಬ್ ಹೇಳಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry