ಶನಿವಾರ, ಏಪ್ರಿಲ್ 17, 2021
31 °C

ಪುನರ್ವಸತಿ ಕೇಂದ್ರದ ಅಭಿವೃದ್ಧಿಗೆ 1 ಕೋಟಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಮಟ್ಟಿ: ಚಿಮ್ಮಲಗಿ ಪುನರ್ವಸತಿ ಕೇಂದ್ರದ(ಭಾಗ-2)  ಮೂಲ ಸೌಲಭ್ಯ ಒದಗಿಸಲು ರೂ. 1 ಕೋಟಿ  ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.ಚಿಮ್ಮಲಗಿ ಪು.ಕೇಂ.ಭಾಗ-2 ರಲ್ಲಿ ಜರುಗಿದ ರಂಭಾಪುರಿ ಪ್ರಸನ್ನರೇಣುಕ ವೀರ ಗಂಗಾಧರ ದೇಶೀಕೇಂದ್ರಶಿವಾಚಾರ್ಯರ 30ನೇ ವಾರ್ಷಿಕ ಪುಣ್ಯ ಯಾತ್ರೋತ್ಸವ ಹಾಗೂ 12ನೇ ಪೂರ್ಣಿಮಾ ಶಿವಾನುಭವ ಗೋಷ್ಠಿ ಮತ್ತು ಶ್ರಿಮಠದ ಕರ್ತೃಗದ್ದುಗೆಗಳ ಕಟ್ಟಡದ ಶಿಲಾನ್ಯಾಸ ಹಾಗೂ ಮಠದ ಮಹಾದ್ವಾರ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ  ಮುಖ್ಯ ಅತಿಥಿಗಳಾಗಿ ಮಾತನಾಡಿದರು.ನಾಲ್ಕೂವರೆ ವರ್ಷಗಳಲ್ಲಿ  ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಆಗಿವೆ ಎಂದರು. ಸರಕಾರದ ಮುಂದೆ ಕಿತ್ತೂರ ಬಿಟ್ಟು ಬೇರೆ ತಾಲ್ಲೂಕುಗಳ ರಚನೆಯ ಪ್ರಸ್ತಾವ ಇಲ್ಲ.  ತಾಲ್ಲೂಕು ರಚನೆಗೆ ಸರಕಾರ ಮುಂದಾದರೇ ನಿಡಗುಂದಿ ಹಾಗೂ ಕೊಲ್ಹಾರ ಎರಡು ತಾಲ್ಲೂಕುಗಳ ರಚನೆಗೆ ನಾನು ಬದ್ಧನಾಗಿದ್ದೇನೆ, ಇದರಲ್ಲಿ ಯಾವುದೇ ಸಂಶಯ ಬೇಡ ಎಂದು  ಹೇಳಿದರು.ಸಂಸದ ರಮೇಶ ಜಿಗಜಿಣಗಿ, ಶಿವಾನಂದ ಕಲ್ಲೂರ, ಸೋಮನಗೌಡ ಪಾಟೀಲ (ಮನಗೂಳಿ), ಮಾತನಾಡಿದರು. ಅಶೋಕ ಹಂಚಲಿ ಉಪನ್ಯಾಸ ನೀಡಿದರು.ಮಠದ ನೀಲಕಂಠ ಸ್ವಾಮೀಜಿ, ತಡವಲಗಾ ಹಿರೇಮಠದ ರಾಚೋಟೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಯುವ ಧುರೀಣ ಸಂಗರಾಜ ದೇಸಾಯಿ, ಜಿ.ಪಂ. ಉಪಾಧ್ಯಕ್ಷ ಚಂದ್ರಶೇಖರಗೌಡ ಪಾಟೀಲ, ಜಿ.ಪಂ ಸದಸ್ಯ ಶಿವಾನಂದ ಅವಟಿ, ಅಂಬೋಜಿ ಪವಾರ, ತಾ.ಪಂ.ಸದಸ್ಯೆ ರೇಣುಕಾ ವಾಲೀಕಾರ ಉಪಸ್ಥಿತರಿದ್ದರು. ಜಕಣಾಚಾರಿ ಪ್ರಶಸ್ತಿ ಪುರಸ್ಕೃತ ಮಲ್ಲಣ್ಣ ಮಾಯಾಚಾರಿ ಅವರನ್ನು ಸನ್ಮಾನಿಸ ಲಾಯಿತು. ಗುರು ಬರಗಿಮಠ ಸ್ವಾಗತಿಸಿದರು. ರಾಮು ಜಗತಾಪ ಕಾರ್ಯಕ್ರಮ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.