ಪುನರ್‌ನವೀಕರಣ ಯೋಜನೆ: ಪ್ರತಿ ರಾಜ್ಯದಲ್ಲೂ 2 ಮಾದರಿ ನಗರ

7

ಪುನರ್‌ನವೀಕರಣ ಯೋಜನೆ: ಪ್ರತಿ ರಾಜ್ಯದಲ್ಲೂ 2 ಮಾದರಿ ನಗರ

Published:
Updated:

ನವದೆಹಲಿ (ಪಿಟಿಐ): ಜವಾಹರಲಾಲ್ ನೆಹರೂ ರಾಷ್ಟ್ರೀಯ ನಗರ ಪುನರ್‌ನವೀಕರಣ ಯೋಜನೆಯಡಿ ಪ್ರತಿ ರಾಜ್ಯದಲ್ಲೂ ಎರಡು ಮಾದರಿ ನಗರಗಳನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.ಮಾಲಿನ್ಯ ಮುಕ್ತ ವಾತಾವರಣ ಮತ್ತು ಉತ್ತಮ ಸಾರಿಗೆ ವ್ಯವಸ್ಥೆ ಸೇರಿದಂತೆ ಎಲ್ಲ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ ಮಾದರಿ ನಗರಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಕಮಲ್‌ನಾಥ್ ಮಂಗಳವಾರ ತಿಳಿಸಿದರು.ಹೊಸ ಯೋಜನೆಯಡಿ ಈ ನಗರಗಳ ಅಭಿವೃದ್ಧಿಗೆ ಹಣ ನೀಡಲಾಗುವುದು. ಐದು ಲಕ್ಷದಿಂದ ಹತ್ತು ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳನ್ನು `ಮಾದರಿ~ ನಗರಗಳನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ಇದಕ್ಕಾಗಿ ಆಸ್ಟ್ರೀಯಾ ತಂತ್ರಜ್ಞಾನ ಸಂಸ್ಥೆಯ ನೆರವು ಕೋರಲಾಗಿದೆ ಎಂದು ಸಚಿವರು ಹೇಳಿದರು.ಆಸ್ಟ್ರೀಯಾದ ಸಾರಿಗೆ ಮತ್ತು ತಂತ್ರಜ್ಞಾನ ಸಚಿವ ಡೋರಿಸ್ ಬ್ಯೂರಿಸ್ ಅವರ ನೇತೃತ್ವದ ನಿಯೋಗದೊಂದಿಗೆ ಚರ್ಚೆ ನಡೆಸಿದ ನಂತರ   ಸುದ್ದಿಗಾರರೊಂದಿಗೆ ಮಾತನಾಡಿದ ಕಮಲ್‌ನಾಥ್, ಅಂತರರಾಷ್ಟ್ರೀಯ ಮಟ್ಟದಲ್ಲಿ ಲಭ್ಯವಿರುವ ಇನ್ನೂ ಕೆಲವು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಈ ಮಾದರಿ ನಗರಗಳನ್ನು ನಿರ್ಮಿಸಲಾಗುತ್ತದೆ ಎಂದರು.ಉಜ್ಜಯನಿ, ಜಬಲ್‌ಪುರದಂತಹ ಚಿಕ್ಕ ನಗರಗಳನ್ನು ಮಾತ್ರ ಈ ಉದ್ದೇಶಕ್ಕೆ ಬಳಸಿಕೊಳ್ಳಲು ಗಣನೆಗೆ ತೆಗೆದುಕೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಬೃಹತ್ ನಗರಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದರು. ಆಸ್ಟ್ರೀಯಾ ತಂತ್ರಜ್ಞಾನ ಸಂಸ್ಥೆ ರಾಷ್ಟ್ರೀಯ ನಗರಾಭಿವೃದ್ಧಿ ವ್ಯವಹಾರಗಳ ಸಂಸ್ಥೆ ಜಂಟಿಯಾಗಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಿವೆ ಎಂದು ಸಚಿವ ಕಮಲ್‌ನಾಥ್ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry