ಬುಧವಾರ, ಡಿಸೆಂಬರ್ 11, 2019
25 °C

ಪುನೀತ್ ನನ್ನಿಷ್ಟದ ಸಹ ನಟ

Published:
Updated:
ಪುನೀತ್ ನನ್ನಿಷ್ಟದ ಸಹ ನಟ

ನಿಧಿ ಸುಬ್ಬಯ್ಯ ಈಗ ಎರಡು ಕಾರಣಗಳಿಂದ ಸುದ್ದಿಯಲ್ಲಿದ್ದಾರೆ. ಒಂದು- ಬಿಕಿನಿ ತೊಟ್ಟು ಕ್ಯಾಲೆಂಡರ್‌ಗೆ ಪೋಸು ಕೊಟ್ಟ್ದ್ದಿದಕ್ಕೆ. ಎರಡು- ಒಂದಾದ ಮೇಲೊಂದು ಅವಕಾಶ ಅವರನ್ನು ಹುಡುಕಿಕೊಂಡು ಬರುತ್ತಿರುವುದಕ್ಕೆ.ಪುನೀತ್ ನಾಯಕರಾಗಿ ನಟಿಸಿ, ಸೂರಿ ನಿರ್ದೇಶಿಸಿರುವ `ಅಣ್ಣಾಬಾಂಡ್~ ಈಗ ಅರ್ಧದಷ್ಟು ಚಿತ್ರೀಕರಣ ಮುಗಿಸಿದೆ. ಸದ್ಯಕ್ಕೆ ಚಿತ್ರೀಕರಣಕ್ಕೆ ಒಂದು ವಾರದ ಬಿಡುವು. ಈ ಬಿಡುವಿನಲ್ಲೇ ನಿಧಿ ಪುನೀತ್ ಜೊತೆ ನಟಿಸಿದ ಅನುಭವವನ್ನು ಆಪ್ತೇಷ್ಟರ ಜೊತೆ ಮೆಲುಕು ಹಾಕುತ್ತಿದ್ದಾರೆ.`ಪುನೀತ್ ರಾಜ್‌ಕುಮಾರ್ ನನ್ನಿಷ್ಟದ ಸಹ ನಟ. ಅವರು ಎಲ್ಲರೊಂದಿಗೂ ಖುಷಿಯಾಗಿರುತ್ತಾರೆ. ಅವರ ಜೊತೆ ನಟಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ~ ಎನ್ನುತ್ತಾರೆ ನಿಧಿ ಸುಬ್ಬಯ್ಯ. ಕಳೆದ ವರ್ಷ ನಿಧಿ ಪಾಲಿಗೆ ಖುಷಿ ಕೊಟ್ಟ ಸಿನಿಮಾ `ಕೃಷ್ಣನ್ ಮ್ಯಾರೇಜ್ ಸ್ಟೋರಿ~. ಸಾಧಾರಣ ಯಶಸ್ಸು ಕಂಡ ಈ ಚಿತ್ರದಲ್ಲಿ ನಿಧಿ ಪಾತ್ರದ ಕುರಿತು ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, ವಿಜಯ್ ಜೊತೆ ಅವರು ನಟಿಸಿದ `ವೀರಬಾಹು~ ನೆಲಕಚ್ಚಿತು.ಈ ವರ್ಷ ಅವರು ಕಳೆದ ವರ್ಷಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸುತ್ತಿದ್ದಾರೆ. `ಅಣ್ಣಾ ಬಾಂಡ್~ನಲ್ಲಿನ ಛಾಯಾಗ್ರಾಹಕಿ ಪಾತ್ರ ನಿಜಕ್ಕೂ ಸವಾಲಿನದಾಗಿದೆ. ಚಿತ್ರತಂಡ ಉತ್ತಮ ಸಹಕಾರ ನೀಡುತ್ತಿದೆ~ ಎನ್ನುವ ಅವರು ಮೇಲಿಂದ ಮೇಲೆ ಸಿನಿಮಾದಲ್ಲಿ ಯಾಕೆ ನಟಿಸಲಿಲ್ಲ ಎಂಬುದಕ್ಕೂ ಕಾರಣ ಕೊಡುತ್ತಾರೆ. `ಪಂಚರಂಗಿ~ ನಂತರ ಸಾಕಷ್ಟು ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದವು. ಆದರೆ, ಪಾತ್ರಗಳ ಪ್ರಾಮುಖ್ಯಕ್ಕಷ್ಟೇ ಬೆಲೆ ಕೊಡುವ ಅವರು ಬಂದದ್ದನ್ನೆಲ್ಲಾ ಒಪ್ಪಿಕೊಳ್ಳಲಿಲ್ಲ.

 

ಬಾಲಿವುಡ್‌ನಲ್ಲಿ ಒಂದು ಅವಕಾಶ ಹುಡುಕಿಕೊಂಡು ಬಂದಿರುವ ಸುದ್ದಿಯೂ ಇದೆ. ಅದು ನಿಜವಾದರೂ ಇನ್ನೂ ಮಾತುಕತೆಯ ಹಂತದಲ್ಲಿರುವುದರಿಂದ, ಅವಕಾಶ ಕೊಡುತ್ತಿರುವವರು ಯಾರೆಂಬುದನ್ನು ಬಹಿರಂಗಪಡಿಸಲು ಅವರು ಸಿದ್ಧರಿಲ್ಲ.

ಹೊಸವರ್ಷದಲ್ಲಿ ತಾಳ್ಮೆ ರೂಢಿಸಿಕೊಳ್ಳುವುದು ಹಾಗೂ ಬಿಡುವು ಸಿಕ್ಕಾಗ ಥಾಯ್ಲೆಂಡ್‌ಗೆ ಹಾರುವುದು ಅವರ ಸಂಕಲ್ಪ.

ಪ್ರತಿಕ್ರಿಯಿಸಿ (+)