ಶುಕ್ರವಾರ, ಜನವರಿ 17, 2020
24 °C

ಪುರಂದರದಾಸರ ಆರಾಧನೆಯಲ್ಲಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

* ಕೃಷ್ಣ ಚೈತನ್ಯ ಭಜನಾ ಸಭಾ: ಸುವರ್ಣ ವರ್ಷ ಮಹೋತ್ಸವದಲ್ಲಿ ಶನಿವಾರ ಪುರಂದರದಾಸ ಮತ್ತು ತ್ಯಾಗರಾಜರ ಆರಾಧನೆ ಮತ್ತು ಸೀತಾರಾಮ ಕಲ್ಯಾಣ, ರಾಧಾಕೃಷ್ಣ ಕಲ್ಯಾಣ, ರುಕ್ಮಿಣೀ ಕಲ್ಯಾಣ ಮಹೋತ್ಸವ. ಬೆಳಿಗ್ಗೆ 9ಕ್ಕೆ ಜಯದೇವ ಮಹಾಕವಿಗಳ `ಶ್ರೀ ಗೀತಗೋವಿಂದ~ ಅಷ್ಟಪದಿ ಭಜನೆ ಈರೋಡು ರಾಜಾಮಣಿ ಭಾಗವತರು ಮತ್ತು ವೃಂದ ಮುಷ್ಣಂ ರಾಜಾರಾವ್ ಮತ್ತು ಎಚ್.ಎಸ್.ಸುಧೀಂದ್ರ ಬ್ರಹ್ಮಶ್ರೀ ನರಸಿಂಹ ಮೂರ್ತಿ ಅವರ ನಿರ್ದೇಶನದಲ್ಲಿ ಪಾಂಡುರಂಗ ಭಜನಾ ಮಂಡಳಿ ಭಕ್ತರಿಂದ ಅಭಿನಯ. ಮಧ್ಯಾಹ್ನ 1ಕ್ಕೆ ಪ್ರೊ.ಮುರಳೀಧರನ್ ಹಾಗೂ ತಂಡದಿಂದ ನಾಮ ಸಂಕೀರ್ತನೆ. ಎಲ್ಲಾ ಭಾಗವತರಿಂದ `ಜಾನವಾಸ~. ಅನಂತ ಲಕ್ಷ್ಮಿ ನಟರಾಜನ್ ಮತ್ತು ತಂಡದಿಂದ  `ಗೀತ ಗೋವಿಂದ~ ನೃತ್ಯ ರೂಪಕ. ಜಯತೀರ್ಥ ಭಾಗವತರು ಮತ್ತು ವೃಂದದಿಂದ `ದಿವ್ಯ ನಾಮ ಸಂಕೀರ್ತನೆ ಮತ್ತು ಡೋಲೋತ್ಸವ~. ಭಾನುವಾರ ಸೀತಾರಾಮ ಕಲ್ಯಾಣ, ರಾಧಾಕೃಷ್ಣ ಕಲ್ಯಾಣ, ರುಕ್ಮಿಣಿ ಕೃಷ್ಣ ಕಲ್ಯಾಣ ಮಹೋತ್ಸವಗಳು. ಬೆಳಿಗ್ಗೆ 10ಕ್ಕೆ.ಮಧ್ಯಾಹ್ನ 3ಕ್ಕೆ ಗಜೇಂದ್ರ ಮತ್ತು ತಂಡದಿಂದ ನಾದಸ್ವರ. ಈಶ್ವರ ಪ್ರಸಾದ್ ಮತ್ತು ತಂಡದಿಂದ ನೃತ್ಯ ಮತ್ತು ಅಭಿನಯ.ಸ್ಥಳ: ಕುಚಲಾಂಬಾಳ್ ಕಲ್ಯಾಣ ಮಹಲ್, ಜಯನಗರ.* ದೇವಗಿರಿ ಶ್ರೀ ಗುರು ಸೇವಾ ಸಮಿತಿ: ಶನಿವಾರ ತ್ರಿವಿಕ್ರಮಾಚಾರ್ಯ ಅವರಿಂದ ಪ್ರವಚನ ಮತ್ತು ಪುರಂದರದಾಸರ ಆರಾಧನಾ ಪ್ರಯುಕ್ತ ದೇವರನಾಮ ಗಾಯನ. ಭಾನುವಾರ ದೇವರನಾಮಗಳ ಸ್ಫರ್ಧೆ. ಸ್ಥಳ: 24ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ. ಸಂಜೆ 6.30.* ಓಂ ಚಾರಿಟಬಲ್ ಟ್ರಸ್ಟ್ ಮತ್ತು ಓಂ ಸಂಸ್ಥೆ: ವಿಶ್ವನಾಥ್ ಅವರ ನೇತೃತ್ವದಲ್ಲಿ `ಪುರಂದರ ನಮನ~. ಸ್ಥಳ: ನಂ.49/1 ರಾಜೇಶ್ವರಿ ನಿಲಯ, ಈಸ್ಟ್ ಆಂಜನೇಯ ಸ್ಟ್ರೀಟ್. ಬೆಳಿಗ್ಗೆ 11.* ರಾಘವೇಂದ್ರ ಸೇವಾ ಸಮಿತಿ: ಪುರಂದರದಾಸರ ಪುಣ್ಯದಿನ ಮಹೋತ್ಸದಲ್ಲಿ ಶನಿವಾರ ವೇಣುಗೋಪಾಲಾಚಾರ್ಯ ಅವರಿಂದ ಪ್ರವಚನ. ಅಗ್ನಿಹೋತ್ರಿ `ಜಗನ್ನಾಥದಾಸರು~. ಭಾನುವಾರ ಆರ್.ಕೆ.ಪದ್ಮನಾಭ ಅವರಿಂದ ಹರಿದಾಸರ ಪದಗಳು.6ನೇ ಕ್ರಾಸ್, ಸುಧೀಂದ್ರ ನಗರ, ಮಲ್ಲೇಶ್ವರ.ಸಂಜೆ 6.30.* ಪ್ರಣವ ಸಂಗೀತ ಶಾಲೆ: ಪುರಂದರದಾಸರ ಆರಾಧನಾ ಮಹೋತ್ಸವ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ಪಂಚರತ್ನ ಕೀರ್ತನೆ ಮತ್ತು ದಾಸರ ಪದಗಳ ಗಾಯನ. ವಾಸುಕಿ, ಕೆ.ರಾಜೇಂದ್ರ ಬೆಂಡೆ (ಕೀಬೋರ್ಡ್), ಷಣ್ಮುಖ, ಮ.ಮುರಳೀಧರ್ ಕಾಮತ್ (ತಬಲಾ), ಮಹೇಶ್ (ರಿದಂ ಪ್ಯಾಡ್), ಪೂರ್ಣಪ್ರಸಾದ್ (ಬುಲ್‌ಬುಲ್ ತರಂಗ್), ಪಂಚರತ್ನ ಕೀರ್ತನೆ: ಅನಿರುದ್ಧ್ ನಾಡಿಗ್ (ವಯೋಲಿನ್), ನಾಗೇಂದ್ರ ಪ್ರಸಾದ್, ರಾಮನಾರಾಯಣ್ ಶರ್ಮಾ (ಮೃದಂಗ).ಸ್ಥಳ: ಶ್ರೀ ರಾಮ ದೇವಸ್ಥಾನ, ಮಾಡಲ್ ಹೌಸ್ ಬ್ಲಾಕ್, ಬಸವನ ಗುಡಿ. ಸಂಜೆ 4.

 

ಪ್ರತಿಕ್ರಿಯಿಸಿ (+)