ಭಾನುವಾರ, ಜೂನ್ 20, 2021
20 °C
ಆಯಾರಾಂ ಗಯಾರಾಂ...

ಪುರಂದೇಶ್ವರಿ ಬಿಜೆಪಿಗೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶಾಖಪಟ್ಟಣ (ಪಿಟಿಐ): ಮಾಜಿ ಕೇಂದ್ರ ಸಚಿವೆ ಡಿ. ಪುರಂದೇಶ್ವರಿ ಮತ್ತು ಅವರ ಪತಿ ದಗ್ಗು­ಬಾಟಿ ವೆಂಕಟೇಶ್ವರ ರಾವ್‌ ಬಿಜೆಪಿಗೆ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಮತ್ತು ಟಿಡಿಪಿ ಸ್ಥಾಪಕ ಎನ್‌.ಟಿ. ರಾಮ­ರಾವ್‌ ಪುತ್ರಿಯಾಗಿರುವ ಪುರಂದೇಶ್ವರಿ ಪ್ರಸ್ತುತ ವಿಶಾಖಪಟ್ಟಣ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.2004ರ ಲೋಕಸಭೆ ಚುನಾವಣೆಗೆ ಮೊದಲು ಕಾಂಗ್ರೆಸ್‌ ಸೇರಿದ್ದ ಅವರು ಬಪತ್ಲ ಲೋಕಸಭೆ ಕ್ಷೇತ್ರದಿಂದ ಆಯ್ಕೆ­ಯಾಗಿದ್ದರು. 2009ರ ಚುನಾವಣೆ­ಯಲ್ಲಿ ವಿಶಾಖಪಟ್ಟಣದಿಂದ ಆಯ್ಕೆ­ಯಾ­ದರು. 2004ರಿಂದ ಕಾಂಗ್ರೆಸ್‌ ಪಕ್ಷ ಬಿಡುವವರೆಗೆ ಅವರು ಕೇಂದ್ರ ಸಚಿವರಾಗಿಯೂ ಕೆಲಸ ಮಾಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.