ಶನಿವಾರ, ಮಾರ್ಚ್ 6, 2021
20 °C
ಆಡಳಿತ ವೈಫಲ್ಯ ಆರೋಪ: ಮುಖ್ಯಾಧಿಕಾರಿಯೊಂದಿಗೆ ವಾಗ್ವಾದ

ಪುರಸಭೆಗೆ ನುಗ್ಗಿದ ದಲಿತ ಮುಖಂಡರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುರಸಭೆಗೆ ನುಗ್ಗಿದ ದಲಿತ ಮುಖಂಡರು

ಲಿಂಗಸುಗೂರು: ಹಲವು ತಿಂಗಳಿಂದ ಪುರಸಭೆ ವ್ಯಾಪ್ತಿಯ ಕರಡಕಲ್ಲ ಸೇರಿದಂತೆ ದಲಿತರು ವಾಸಿಸುವ ವಾರ್ಡ್ ಹಾಗೂ ಬಡಾವಣೆಗಳಲ್ಲಿ ಸೌಕರ್ಯ ಕಲ್ಪಿಸಲು ಪುರಸಭೆ ಆಡಳಿತ ಮಂಡಳಿ, ಮುಖ್ಯಾಧಿಕಾರಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿ ದಲಿತ ಮುಖಂಡರು ಬುಧವಾರ ಪುರಸಭೆಗೆ ನುಗ್ಗಿ ಪ್ರತಿಭಟನೆ ನಡೆಸಿದರು.ಬುಧವಾರ ತ್ರೈಮಾಸಿಕ ಸಭೆ ಆರಂಭವಾಗುತ್ತಿದ್ದಂತೆ ಕರಡಕಲ್ಲದ ಡಾ.ಬಿ.ಆರ್‌. ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಸಭೆಗೆ ಪ್ರವೇಶಿಸಿ, ಆಡಳಿತ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಲ ಸಮಯ ವಾಗ್ವಾದ ನಡೆಯಿತು. ಇದ ರಿಂದ ಸದಸ್ಯರು ಸಭೆ ಬಹಿಷ್ಕರಿಸಿ ಹೊರ ನಡೆದರು. ಆದರೂ, ದಲಿತ ಮುಖಂ ಡರು ಪ್ರತಿಭಟನೆ ಮುಂದುವರಿಸಿದರು.ಶೌಚಾಲಯ, ಅಂಬೇಡ್ಕರ್‌ ಭವನ, ಕಾಂಕ್ರಿಟ್‌ ರಸ್ತೆ, ಕುಡಿಯುವ ನೀರಿನ ಪೈಪಲೈನ್‌ ಸೇರಿದಂತೆ ವಿವಿಧ ಯೋಜನೆ ಗಳ ಹಣ ದುರ್ಬಳಕೆ ಆಗಿದೆ. ದಲಿತರ ಸಮಸ್ಯೆಗಳ ಬಗ್ಗೆ ಲಿಖಿತ, ಮೌಖಿಕ ಮಾಹಿತಿ ನೀಡಿದರು ಕ್ರಮ ಕೈಗೊಂಡಿಲ್ಲ ಎಂದು ದೂರಿದರು.ಮುಖ್ಯಾಧಿಕಾರಿ ಈರಣ್ಣ ಬಿರಾದರ ಮಾತನಾಡಿ, ಪ್ರಗತಿ ಪರಿಶೀಲನಾ ಸಭೆಗೆ ಸದಸ್ಯರಲ್ಲದ ವ್ಯಕ್ತಿಗಳಿಗೆ ಪ್ರವೇಶ ನಿರ್ಬಂ ಧಿಸಲಾಗಿದೆ. ನೀವು ಅಕ್ರಮವಾಗಿ ಪ್ರವೇಶಿಸಿ ಸಭೆ ಘನತೆಗೆ ಚ್ಯುತಿ ತಂದಿ ದ್ದೀರಿ. ಪುರಸಭೆಯ ಗೌರವ ಕಾಪಾಡ ಬೇಕು ಎಂದು ಮನವಿ ಮಾಡಿದರು.

ನಮ್ಮ ಬೇಡಿಕೆಗಳಿಗೆ ಸ್ಪಂದಿಸಿದ್ದರೆ ಇಲ್ಲಿಗೆ ಏಕೆ ಬರುತ್ತೇವೆ. ಆಡಳಿತ ವ್ಯವ ವಸ್ಥೆ ಹದಗೆಟ್ಟಿದೆ ಎಂಬುದು ನಾಗರಿಕರು ಗೊತ್ತಾಗಲಿ ಎಂದು ಬಂದಿದ್ದೇವೆ ಎಂದು ಮುಖಂಡರು ವಾಗ್ವಾದ ನಡೆಸಿದರು.ಬೇಡಿಕೆ ಈಡೇರಿಕೆಗೆ ಪಟ್ಟು ಹಿಡಿದಾಗ ಪೊಲೀಸರು ಪ್ರತಿಭಟನಾಕಾರರನ್ನು ಹೊರ ಹಾಕಿದರು. ಮುಖ್ಯಾಧಿಕಾರಿ ಮತ್ತು ಆಡಳಿತ ಮಂಡಳಿ ದಲಿತರ ಬಗ್ಗೆ ಸೌಜನ್ಯ ತೋರುತ್ತಿಲ್ಲ. ಸೌಲಭ್ಯ ಕಲ್ಪಿಸದಿರುವ ಬಗ್ಗೆ ಧಿಕ್ಕಾರ ಕೂಗಿದರು.ದಲಿತ ಮುಖಂಡರಾದ ಹನು ಮಂತಪ್ಪ ತವಗ, ಆಜಪ್ಪ ಕರಡಕಲ್ಲ, ದೇವೇಂದ್ರಪ್ಪ, ನಾಗಪ್ಪ ಈಚನಾಳ, ದ್ಯಾಮಣ್ಣ ನಿಲೋಗಲ್‌, ಅಮರೇಶ, ನಾಗರಾಜ, ಪ್ರೇಮಜಿ ಗೊರೆಬಾಳ, ರಮೇಶ ಇತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.