ಪುರಸಭೆಯಿಂದ ಅಂಗಡಿ ಮಳಿಗೆಗೆ ಬೀಗಮುದ್ರೆ

7

ಪುರಸಭೆಯಿಂದ ಅಂಗಡಿ ಮಳಿಗೆಗೆ ಬೀಗಮುದ್ರೆ

Published:
Updated:

ಹಿರಿಯೂರು: ಇಲ್ಲಿನ ತೇರುಮಲ್ಲೇಶ್ವರಸ್ವಾಮಿ ದೇಗುಲದ ರಸ್ತೆಯಲ್ಲಿ ಪುರಸಭೆ ವತಿಯಿಂದ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳಲ್ಲಿ ವಹಿವಾಟು ನಡೆಸುತ್ತಾ ಬಾಡಿಗೆ ಬಾಕಿ ಉಳಿಸಿಕೊಂಡಿರುವ ಮಳಿಗೆಗಳಿಗೆ ಮುಖ್ಯಾಧಿಕಾರಿ ಚಂದ್ರಶೇಖರಪ್ಪ ನೇತೃತ್ವದಲ್ಲಿ ಗುರುವಾರ ಬೀಗಮುದ್ರೆ ಹಾಕಲಾಯಿತು.ಸುದ್ದಿಗಾರರ ಜತೆ ಮಾತನಾಡಿದ ಚಂದ್ರಶೇಖರಪ್ಪ, ಸದರಿ ರಸ್ತೆಯಲ್ಲಿ 35 ಮಳಿಗೆಗಳನ್ನು ಪುರಸಭೆಯಿಂದ ನಿರ್ಮಿಸಿದ್ದು, ಮಾಸಿಕ ್ಙ 1,300 ಬಾಡಿಗೆ ನಿಗದಿ ಪಡಿಸಲಾಗಿದ್ದು, ಒಟ್ಟಾರೆ ್ಙ 4.77 ಲಕ್ಷ ಬಾಡಿಗೆ ಬಾಕಿ ಇದೆ. ಇಂದು ಬೀಗಮುದ್ರೆ ಹಾಕಲು ಹೋದಾಗ ್ಙ 66 ಸಾವಿರ ಜಮಾ ಮಾಡಿದ್ದಾರೆ. ಇದನ್ನು ಹೊರತುಪಡಿಸಿ ್ಙ 4,11,700 ಬಾಡಿಗೆ ಬಾಕಿ ಇದೆ. 5 ಜನ ಮಾತ್ರ ಪೂರ್ಣ ಬಾಡಿಗೆ ಪಾವತಿ ಮಾಡಿದ್ದಾರೆ ಎಂದು ವಿವರಿಸಿದರು.ಮಹಮದ್ ಸಲೇಹ ್ಙ 38,750, ಚಿನ್ನೋಜಿರಾವ್ ್ಙ 32,500, ಎಚ್.ಎಸ್. ರಿಯಾಜ್ ್ಙ 28,750, ಸೈಯದ್ ಇನಾಯತ್‌ವುಲ್ಲಾ ್ಙ 25,000, ಎಚ್.ಆರ್. ಮಂಜುನಾಥ್ ್ಙ 24,750, ಜಿ. ರಂಗಾಚಾರಿ ್ಙ 19,250, ಎಂ.ಪಿ. ತಿಪ್ಪೇಸ್ವಾಮಿ ್ಙ 18,750, ಓಂಕಾರಪ್ಪ ್ಙ 16,000, ಅಮೀರ್ ಅಮ್ಲ ್ಙ 15,250, ನೂರುಲ್ಲಾ ್ಙ 14,250, ಸುಬ್ಬಯ್ಯಶೆಟ್ಟಿ ್ಙ 13,500, ರಹಮತ್ ್ಙ 12,750, ಯಶೋಧ ್ಙ 12,750, ಭಾಷಾಸಾಬ್ ್ಙ 12,500, ನೂರುಲ್ಲಾ ್ಙ 11,250, ಅಬ್ದುಲ್ ವಹಾಬ್ ್ಙ 11,000, ಮುನ್ನಾ ್ಙ 10,500, ಮಹಲಿಂಗಪ್ಪ ್ಙ 10,000 ಬಾಡಿಗೆ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಹತ್ತು ಸಾವಿರಕ್ಕಿಂತ ಹೆಚ್ಚು ಬಾಕಿ ಇರುವವರ ಬಗ್ಗೆ ಅವರು ಮಾಹಿತಿ ನೀಡಿದರು.ಸದರಿ ಮಳಿಗೆಗಳಲ್ಲಿ ವಹಿವಾಟು ನಡೆಸುತ್ತಿರುವವರು ಬಾಕಿ ಪಾವತಿಸುವ ತನಕ ಬೀಗಮುದ್ರೆ ತೆಗೆಯುವುದಿಲ್ಲ ಎಂದು ಚಂದ್ರಶೇಖರಪ್ಪ ಸ್ಪಷ್ಟಪಡಿಸಿದರು.ಹೆಸರು ಒಬ್ಬರದ್ದು, ಬಾಡಿಗೆಗೆ ಮತ್ತೊಬ್ಬರು:

ಸದರಿ ರಸ್ತೆಯಲ್ಲಿ ಪೆಟ್ಟಿಗೆ ಅಂಗಡಿ ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದವರನ್ನು, ಆರೇಳು ವರ್ಷದ ಹಿಂದೆ ರಸ್ತೆ ವಿಸ್ತರಣೆ ಹೆಸರಿನಲ್ಲಿ ತೆರವುಗೊಳಿಸಲಾಗಿತ್ತು. ನಂತರ ವಹಿವಾಟು ನಡೆಸುತ್ತಿದ್ದವರು ಬಹುತೇಕ ಬಡವರು ಇದ್ದಾರೆ. ಅವರ ಬದುಕಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಪುರಸಭೆ ವತಿಯಿಂದ ವಾಣಿಜ್ಯ ಮಳಿಗೆ ನಿರ್ಮಿಸಿ ಬಾಡಿಗೆ ನೀಡಲಾಗಿತ್ತು.ಆದರೆ, ತಮ್ಮ ಹೆಸರಿಗೆ ವಾಣಿಜ್ಯ ಮಳಿಗೆಗಳನ್ನು ಪಡೆದಿರುವ ಬಹಳಷ್ಟು ಜನ ಹೆಚ್ಚಿನ ಬಾಡಿಗೆಗೆ ಬೇರೆಯವರಿಗೆ ಮಳಿಗೆಗಳನ್ನು ಹಸ್ತಾಂತರಿಸಿದ್ದಾರೆ. ಹಿರಿಯೂರಿನಲ್ಲಿ ಕಳೆದ ಮೂರ್ನಾಲ್ಕು ವರ್ಷದಿಂದ ಬಾಡಿಗೆ ದರ ಊಹಿಸಲಾಗದಷ್ಟು ಹೆಚ್ಚಿದ್ದು, ಪುರಸಭೆ ಮಳಿಗೆಗಳನ್ನು ತಮ್ಮ ಹೆಸರಿಗೆ ಪಡೆದಿರುವವರು ತಾವು ಬಾಡಿಗೆ ವಸೂಲಿ ಮಾಡಿಕೊಂಡು ಪುರಸಭೆಗೆ ಜಮಾ ಮಾಡದೆ ಇರುವುದು ಬಾಕಿ ಹೆಚ್ಚಲು ಕಾರಣ ಎಂಬ ಸಂಗತಿ ಈಗ ಗುಟ್ಟಾಗಿ ಉಳಿದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry