ಬುಧವಾರ, ಜೂನ್ 23, 2021
29 °C

ಪುರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸಕ್ಕೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಡಿ : ಕಳೆದ ತಿಂಗಳು ಇಂಡಿ ಪುರಸಭೆಯ ಅಧ್ಯಕ್ಷ ಕಾಸುಗೌಡ ಬಿರಾದಾರ ಅವರ ವಿರುದ್ದ ಮಂಡಿಸಿದ್ಧ ಅವಿಶ್ವಾಸ ಮಂಡನೆಯ ಗೊತ್ತುವಳಿಗೆ ಬುಧವಾರ ಚುನಾವಣೆ ನಡೆಯಿತು.ಅವಿಶ್ವಾಸ ನಿರ್ಣಯದ ಪರ 17  ಸದಸ್ಯರು ಮತ್ತು ಅವಿಶ್ವಾಸ ನಿರ್ಣಯದ ವಿರುದ್ಧ 8 ಜನ ಸದಸ್ಯರು ಕೈಎತ್ತಿದರು. ಇದರಿಂದ ಅವಿಶ್ವಾಸ ಮಂಡನೆಗೆ ಜಯ ದೊರೆತು ಅಧ್ಯಕ್ಷ ಕಾಸುಗೌಡ ಬಿರಾದಾರ ಅಧ್ಯಕ್ಷ ಸ್ಥಾನ ಕಳೆದುಕೊಂಡರು.ಒಟ್ಟು ಪುರಸಭೆಯ 23 ಸದಸ್ಯರು, ಶಾಸಕ ಡಾ, ಸಾರ್ವಭೌಮ ಬಗಲಿ ಮತ್ತು ಸಂಸದ ರಮೇಶ ಜಿಗಜಿಣಗಿ ಸೇರಿ ಒಟ್ಟು 25 ಸದಸ್ಯ ಬಲ ಹೊಂದಿದ್ದ ಇಂಡಿ ಪುರಸಭೆಯಲ್ಲಿ ನಡೆದ ಅವಿಶ್ವಾಸ ಮಂಡನೆಯ ಚುನಾವಣೆಯಲ್ಲಿ ಶಾಸಕ ಮತ್ತು ಸಂಸದರು ಸೇರಿ ಒಟ್ಟು 17 ಜನ ಕೈಎತ್ತುವ ಮೂಲಕ ಅವಿಶ್ವಾಸ ಮಂಡನೆಗೆ ಬೆಂಬಲಿಸಿದರು. 8 ಜನ ಸದಸ್ಯರು ಮಾತ್ರ ಅವಿಶ್ವಾಸ ಮಂಡನೆಯ ವಿರುದ್ಧ ಕೈಎತ್ತಿದರು.ಚುನಾವಣೆಯ ಪ್ರಕ್ರಿಯೆ : ಬೆಳಿಗ್ಗೆ ಸರಿಯಾಗಿ 11 ಗಂಟೆಗೆ ಪುರಸಭೆಯ ಎಲ್ಲಾ ಸದಸ್ಯರು, ಶಾಸಕ ಡಾ, ಸಾರ್ವಭೌಮ ಬಗಲಿ ಮತ್ತು ಸಂಸದ ರಮೇಶ ಜಿಗಜಿಣಗಿ ಪುರಸಭೆಯ ಸಭಾ ಭವನದಲ್ಲಿ ಹಾಜರಾದರು.

 

ಸದಸ್ಯರು ಹಾಜರಾದ ಕೆಲವೇ ನಿಮಿಷಗಳಲ್ಲಿ ಚುನಾವಣೆಯ ಪ್ರಕ್ರಿಯೆ ಪ್ರಾರಂಭವಾಯಿತು. ಹಾಜರಿದ್ದ ಎಲ್ಲಾ ಸದಸ್ಯರ ಹಾಜರಾತಿ ಪಡೆದ ನಂತರ ಪುರಸಭೆಯ ಮುಖ್ಯಾಧಿಕಾರಿ ತೋಳನೂರ ಚುನಾವಣೆಯ ನಿಯಮಗಳನ್ನು ತಿಳಿಸಿದರು.

 

ನಂತರ ಅಧ್ಯಕ್ಷರ ವಿರುದ್ದ ನೀಡಿದ್ದ ಅವಿಶ್ವಾಸ ಮಂಡನೆಯ ಗೊತ್ತುವಳಿ ಪರವಾಗಿ ಕೈಎತ್ತಬೇಕೆಂದು ಮನವಿ ಮಾಡಿಕೊಂಡಾಗ ಸದಸ್ಯರು ಕೈಎತ್ತಿದರು. ಅವಿಶ್ವಾದ ಮಂಡನೆಯ ವಿರುದ್ಧ ಕೈಎತ್ತಲು ಸೂಚಿಸಿದಾಗ ಕೇವಲ 8 ಜನ ಸದಸ್ಯರು ಮಾತ್ರ ಕೈಎತ್ತಿದರು.ಮಾತಿನ ಚಕಮಕಿ : ಅಧ್ಯಕ್ಷರ ವಿರುದ್ಧ ನೀಡಿದ್ದ ಅವಿಶ್ವಾಸ ಗೊತ್ತುವಳಿ ಮಂಡನೆಯ ನಿರ್ಣಯದ ಚುನಾವಣೆಯ ಸಂದರ್ಭದಲ್ಲಿ ಚುನಾವ ಣೆಯ ನಿಯಮಗಳನ್ನು ಸರಿಯಾಗಿ ತಿಳಿಸಿಲ್ಲ. ನಿಯಮಕ್ಕನುಸಾರ ಚುನಾವಣೆ ನಡೆಸುತ್ತಿಲ್ಲ ಎಂದು ಕಾಸುಗೌಡ ಬಿರಾದಾರ ಮತ್ತು ದೇವರ ಅವರು ಪುರಸಭೆಯ ಮುಖ್ಯಾಧಿಕಾರಿ ವಿರುದ್ಧ ದೂರಿ ಮಾತಿನ ಚಕಮಕಿ ನಡೆಸಿದರು. ಆಗ ಪೊಲೀಸ್ ಸಿಬ್ಬಂದಿ ಮಧ್ಯ ಪ್ರವೇಶಸಿ, ಪರಿಸ್ಥಿತಿ ಶಾಂತಗೊಳಿಸಿದರು.ಪೋಲಿಸ್ ಬಿಗಿ ಬಂದೋಬಸ್ತ್ : ಪುರಸಭೆಯ ಅಧ್ಯಕ್ಷ ಕಾಸುಗೌಡ ಬಿರಾದಾರ ಅವರ ವಿರುದ್ಧ ಮಂಡಿಸಿದ್ದ ಅವಿಶ್ವಾಸ ಮಂಡನೆಯ ನಿರ್ಣಯದ ಸಂದರ್ಭದಲ್ಲಿ ಡಿವೈಎಸ್‌ಪಿ ಎಂ. ಮುತ್ತುರಾಜ ಅವರು ಪುರಸಭೆಯ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.