ಪುರಸಭೆ ಅವ್ಯವಹಾರ ತನಿಖೆಗೆ ಆಗ್ರಹಿಸಿ ಮುಂದುವರಿದ ಧರಣಿ

7

ಪುರಸಭೆ ಅವ್ಯವಹಾರ ತನಿಖೆಗೆ ಆಗ್ರಹಿಸಿ ಮುಂದುವರಿದ ಧರಣಿ

Published:
Updated:

ಸವಣೂರು: ಸ್ಥಳೀಯ ಪುರಸಭೆಯ ಅವ್ಯವಹಾರ ಖಂಡಿಸಿ, ಸವಣೂರಿನ ಸಾರ್ವಜನಿಕರು ನಡೆಸುತ್ತಿರುವ ಅರೆ ಬೆತ್ತಲೆ ಧರಣಿ ಸತ್ಯಾಗ್ರಹ ಐದನೇ ದಿನ ಪೂರ್ಣಗೊಳಿಸಿದೆ.ಪುರಸಭೆಯ ಸರಣಿ ಅವ್ಯವಹಾರ ಗಳ ಬಗ್ಗೆ ಇಲಾಖಾ ಅಧಿಕಾರಿಗಳಿಗೆ ಮನವಿ ಅರ್ಪಿಸಿರುವ ಪ್ರತಿಭಟನಾಕಾ ರರು, ವಿವಿಧ ಯೋಜನೆಗಳ ಅಡಿ ಅಪೂರ್ಣಗೊಂಡಿರುವ ಕಾಮಗಾರಿಗಳ ಬಗ್ಗೆ ವಿವರಣೆ ನೀಡಿದ್ದಾರೆ.ರೂ. 60 ಲಕ್ಷ ಅನುದಾನದಲ್ಲಿ ಮಾಹೂರ ಕ್ರಾಸ್‌ನಿಂದ ಶುಕ್ರವಾರ ಪೇಟೆ, ಎ.ಸಿ.ಕಚೇರಿ ಮೂಲಕ ಡಾ. ಸಿದ್ಧಿಕಿ ಆಸ್ಪತ್ರೆಯವರೆಗೆ ಕೈಗೊಳ್ಳಬೇಕಾ ಗಿದ್ದ  ಕಾಲುವೆ ಹಾಗೂ ರಸ್ತೆ ನಿರ್ಮಾ ಣದ ಕಾಮಗಾರಿ ನಡೆದಿಲ್ಲ. ಕೊಳಚೆ ಪ್ರದೇಶ ಅಭಿವೃದ್ಧಿಗೆ ಖರ್ಚು ಮಾಡಿ ರುವ 1 ಕೋಟಿ ಅನುದಾನದಲ್ಲಿ ಯಾವುದೇ ಕಾಮಗಾರಿ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.43.71ಲಕ್ಷ ಅನುದಾನದಲ್ಲಿ ಮಂಗಳವಾರ ಪೇಟೆ ಕ್ರಾಸ್‌ನಿಂದ ಸಿಂಪಿಗಲ್ಲಿ ಮೂಲಕ ಲಾಲಷಾಕಟ್ಟಿ, ಲಕ್ಷ್ಮೇಶ್ವರ ನಾಕಾದವರಿಗೂ ಗಟಾರ ಮತ್ತು ರಸ್ತೆ ಕಾಮಗಾರಿ ಮತ್ತು 24.48 ಲಕ್ಷ ರುಗಳ ಅನುದಾನಲ್ಲಿ ಸವಣೂರಿನ ಹುಗ್ಗಿಸ್ವಾಮಿ ಮನೆಯಿಂದ ಬಸವಣ್ಣ ದೇವರ ಗುಡಿಯವರೆಗೆ, ವಿಠ್ಠಲ ದೇವಸ್ಥಾನ ರಸ್ತೆಯ ಖಾಜಾಂದೆ ಮನೆಯಿಂದ ಸಿಂಪಿಗಲ್ಲಿ ಹಾಗೂ ಕೆಮ್ಮಣ್ಣಕೇರಿ ಮನೆಯಿಂದ ಮಂಗಳ ವಾರ ಪೇಟಿಯಿಂದ ಮಸೀದವರಿಗೆ ಸಿಸಿ ರಸ್ತೆ ನಿರ್ಮಾಣ ಮತ್ತು ಗಟಾರ ನಿರ್ಮಾಣ ಕಾಮಗಾರಿಗಳು ಕೈಗೊಂಡಿಲ್ಲ.ಈ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗಿದ್ದರೂ ಸಹ ಏಕೆ ಕಾಮಗಾರಿ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಈ ಕುರಿತು 15 ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿ  ಶೀಲಿಸಿ, ತಪ್ಪಿಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಕಾಮಗಾರಿ  ಪೂರ್ಣಗೊಳಿಸುವಂತೆ ಆಗ್ರಹಿಸಿದ್ದಾರೆ.ಮಹಾದೇವ ಮಹೇಂದ್ರಕರ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯ ದರ್ಶಿ ಡಿ.ಎಸ್. ಮಾಳಗಿ, ಮಂಜುನಾಥ ತೋಶಿಖಾನಿ, ವಿಠ್ಠಲ್ ರಾಶಿನಕರ, ನಾಗರಾಜ ರಾಶಿನಕಾರ, ನಾಗರಾಜ ಬಾಳಿಕಾಯಿ, ಮೋಹನ ಕಲ್ಯಾಣಕರ, ಸಂತೋಷ ಅಚಲಕರ, ಕುಮಾರಸ್ವಾಮಿ ಹಿರೇಮಠ, ನೀಲಪ್ಪ ಬಂಕಾಪುರ,  ಗುಲೇಷರ ಖಾನ. ಎಂ ಪಠಾಣ, ಆಫರಿ ಮೋಮೀನ್, ರಹೀಮಖಾನ ಬಿರಾ ದಾರ, ಅಲ್ತಾಫ ಚೂಡಿಗಾರ, ಬಸವ ರಾಜ ಇತರರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry