ಪುರಸಭೆ ಮುಂದೆ ವಿಷ ಸೇವಿಸಿ ಆತ್ಮಹತ್ಯೆ

7

ಪುರಸಭೆ ಮುಂದೆ ವಿಷ ಸೇವಿಸಿ ಆತ್ಮಹತ್ಯೆ

Published:
Updated:
ಪುರಸಭೆ ಮುಂದೆ ವಿಷ ಸೇವಿಸಿ ಆತ್ಮಹತ್ಯೆ

ಶಿಗ್ಗಾಂವ:  ಸಾರ್ವಜನಿಕ ಸ್ಥಳದಲ್ಲಿ ಜಿ.ಪಂ. ಮಾಜಿ ಸದಸ್ಯ ಮಹಾನಿಂಗಪ್ಪ ಹಳವಳ್ಳಿ ಕಾಂಪೌಂಡ್  ನಿರ್ಮಿಸಿದ್ದು, ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮನನೊಂದ ವ್ಯಕ್ತಿಯೊಬ್ಬ ವಿಷಸೇವಿಸಿ ಪುರಸಭೆ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಬಂಕಾಪುರದಲ್ಲಿ ಸೋಮವಾರ ನಡೆದಿದೆ.  ಮಹಾದೇವಪ್ಪ ನೀಲಪ್ಪ ಹಳವಳ್ಳಿ (55) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಬಂಕಾಪುರ ಪೊಲೀಸ್     ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮಹಾನಿಂಗಪ್ಪ ಹಳವಳ್ಳಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮೃತ ಮಹಾದೇವಪ್ಪನ  ಕುಟುಂಬದವರು ಸೇರಿದಂತೆ ಸಾರ್ವಜನಿಕರು ಪುರಸಭೆ ಕಾರ್ಯಲಯದ ಎದುರು  ಶವವಿಟ್ಟು ಸೋಮವಾರ ಸಂಜೆ ಪ್ರತಿಭಟನೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry