ಶನಿವಾರ, ಜುಲೈ 31, 2021
27 °C

ಪುರಸಭೆ ವಶಕ್ಕೆ 83 ವಾಣಿಜ್ಯ ಮಳಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆ.ಆರ್.ನಗರ: 20 ವರ್ಷಗಳಿಂದ ಬಾಡಿಗೆದಾರರ ವಶದಲ್ಲಿದ್ದ ಪುರಸಭೆಗೆ ಸೇರಿದ (ಬಾಡಿಗೆ ಅವಧಿ ಮುಗಿದ) 83 ವಾಣಿಜ್ಯ ಮಳಿಗೆಗಳನ್ನು ಪುರಸಭೆ ಮುಖ್ಯಾಧಿಕಾರಿಯೂ ಆದ ತಹ ಶೀಲ್ದಾರ್ ಟಿ.ಜವರೇಗೌಡ ಪೊಲೀಸ್ ಭದ್ರತೆಯಲ್ಲಿ ಶುಕ್ರವಾರ ವಶಕ್ಕೆ ಪಡೆದರು.ಸಿಎಂ ರಸ್ತೆಯಲ್ಲಿನ ಕಾಮಧೇನು ಸ್ವೀಟ್ಸ್ ಮಾಲೀಕರು ತಮಗೆ ಸೇರಿದ ವಾಣಿಜ್ಯ ಮಳಿಗೆ ತೆರವು ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದ ಹಿನ್ನಲೆಯಲ್ಲಿ ಕಾಮಧೇನು ಸ್ವೀಟ್ಸ್ ಹೊರತುಪಡಿಸಿ ವಿವಿ ರಸ್ತೆ, ಸಿಎಂ ರಸ್ತೆ, ಬಜಾರ್ ರಸ್ತೆ ಮತ್ತು ಬಸ್ ನಿಲ್ದಾಣ ಹಿಂಭಾಗದ 83 ವಾಣಿಜ್ಯ ಮಳಿಗೆಗಳನ್ನು ವಶಕ್ಕೆ ಪಡೆಯಲಾಯಿತು.20 ವರ್ಷದ ಹಿಂದೆ ಐದು ವರ್ಷಗಳ ಅವಧಿಗಾಗಿ ಬಾಡಿಗೆ ದಾರರು ಪಡೆದಿದ್ದರು. ಆದರೆ, ತಾವು ಪಡೆದ ಮಳಿಗೆಗಳನ್ನು ಅವಧಿ ಮುಗಿದ ನಂತರ ತೆರವು ಮಾಡದೇ ಕಡಿಮೆ ಬಾಡಿಗೆ ದರಗಳಲ್ಲಿ 4 ಅವಧಿ ಯವರೆಗೂ ಮುಂದುವರೆಸಿಕೊಂಡು ಬಂದಿದ್ದರು. ಅಲ್ಲದೇ ಕೆಲವರು ಲಕ್ಷಾಂತರ ರೂಪಾಯಿಗಳಿಗೆ ಇತರರಿಗೆ ಪರಭಾರೆ ಮಾಡಿದ್ದರು.ಇದನ್ನು ಗಮನಿಸಿದ ಸಂಘ ಸಂಸ್ಥೆಗಳು, ಸಾರ್ವಜನಿಕರು, ‘ವಾಣಿಜ್ಯ ಮಳಿಗೆ ಬಾಡಿಗೆದಾರರಿಂದ ಪ್ರತಿ ತಿಂಗಳು ಲಕ್ಷಾಂತರ ಹಣ ನಷ್ಟವಾಗುತ್ತಿದೆ. ಕೂಡಲೇ ವಾಣಿಜ್ಯ ಮಳಿಗೆ ಹರಾಜು ಹಾಕಿಸುವಂತೆ ಒತ್ತಾಯಿಸಿ ಒಂದು ವರ್ಷದಿಂದ ಪ್ರತಿಭಟನೆ ಮಾಡುತ್ತದ್ದರಲ್ಲದೇ, ಜಿಲ್ಲಾಧಿಕಾರಿ, ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸುತ್ತ ಬಂದಿದ್ದರು.ವಾಣಿಜ್ಯ ಮಳಿಗೆ ತೆರವು ಮಾಡಸದೇ ಇರಲು ಪುರಸಭೆಯ ಕೆಲವು ಸದಸ್ಯರಿಗೆ, ಅಧಿಕಾರಿಗಳಿಗೆ ಮಳಿಗೆದಾರರು ಹಣ ನೀಡಿದ್ದಾರೆ ಎಂಬ ಆರೋಪ ಕೂಡ ಕೇಳಿ ಬರುತ್ತಿತ್ತು.ಈ ಎಲ್ಲ ಬೆಳವಣಿಗೆ ಗಮನಿಸಿದ ಜಿಲ್ಲಾಧಿಕಾರಿಗಳು ಕೂಡಲೇ ವಾಣಿಜ್ಯ ಮಳಿಗೆ ವಶಕ್ಕೆ ಪಡೆಯುವಂತೆ ಮುಖ್ಯಾಧಿಕಾರಿಯೂ ಆದ ತಹಶೀಲ್ದಾರ್‌ಗೆ ಆದೇಶ ಮಾಡಿದ್ದರು. ಇದರಿಂದ ಶುಕ್ರವಾರ ತೆರವು ಕಾರ್ಯಾಚರಣೆ ನಡೆಯಿತು. ಇದು ಸಾರ್ವಜನಿಕ ವಲಯದಲ್ಲಿ ಹರ್ಷಕ್ಕೆ ಕಾರಣವಾಗಿದೆ.ಪುರಸಭೆ ಅಧ್ಯಕ್ಷ ತಮ್ಮನಾಯಕ, ವ್ಯವಸ್ಥಾಪಕ ನಾಗಶೆಟ್ಟಿ, ಅಧಿಕಾರಿ ಗಳಾದ ಸುದರ್ಶನ್, ಎಂಜಿನಿಯರ್ ರವಿಕುಮಾರ್, ಸಿಪಿಐ ಎಸ್.ಎನ್. ಸಂದೇಶ್‌ಕುಮಾರ್, ಎಸ್‌ಐ ಅನಿಲ್ ಕುಮಾರ್, ನಾರಾಯಣ್ ಮತ್ತು ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.