`ಪುರಾಣ ಗ್ರಂಥಗಳು ಪವಿತ್ರ'

6

`ಪುರಾಣ ಗ್ರಂಥಗಳು ಪವಿತ್ರ'

Published:
Updated:

ಹೊಸದುರ್ಗ: ಭಾರತೀಯರ ಪುರಾಣ ಗ್ರಂಥಗಳು ಪರಮ ಪವಿತ್ರ ಕೃತಿಗಳಾಗಿವೆ ಇವು ವಿಶ್ವದ ಜನಪದಕ್ಕೆ ದಾರಿದೀಪವಾಗಿ ಮಾರ್ಗದರ್ಶನ ಮಾಡುತ್ತಿವೆ ಎಂದು ಬೆಲಗೂರಿನ ಬಿಂದು ಮಾಧವ ಶರ್ಮ ಸ್ವಾಮೀಜಿ ತಿಳಿಸಿದರು.ಭಾನುವಾರ ತಾಲ್ಲೂಕಿನ ಹೊನ್ನೇನಹಳ್ಳಿಯಲ್ಲಿ ಪ್ರಸಿದ್ಧ ಅಂಜನೇಯಸ್ವಾಮಿ ರಥೋತ್ಸವದ ಸಂದರ್ಭದಲ್ಲಿ ರಥಪೂಜೆ ಮಾಡಿ ತೇರು ಎಳೆದ ನಂತರ ಆಶೀರ್ವಚನ ನೀಡಿ ಅವರು ಮಾತನಾಡಿದರು. ಗ್ರಾಮಕ್ಕೆ ಸ್ವಾಮೀಜಿ ಅವರು ಆಗಮಿಸುತ್ತಿದ್ದಂತೆ ಹೊರವಲಯದಲ್ಲಿ ಸೇರಿದ್ದ ಸಹಸ್ರಾರು ಭಕ್ತರು ಹಾಗೂ ಮಹಿಳೆಯರು ಪೂರ್ಣಕುಂಭ ಮೆರವಣಿಗೆಯೊಂದಿಗೆ ಸ್ವಾಗತಿಸಿದರು.ಗ್ರಾಮದ ಸುತ್ತ ದೂಳು ಉಚ್ಛಾಯ, ಸೀತಾರಾಮ ಕಲ್ಯಾಣೋತ್ಸವ, ಕಲ್ಯಾಣೋತ್ಸವ ಮೆರವಣಿಗೆ, ಧೂಪದ ಸೇವೆ, ಬಾಯಿ ಬೀಗ, ಹೆಜ್ಜೆ ನಮಸ್ಕಾರ, ಮಳಕೆ ಆರತಿ, ಬಿಲ್ಲುಗೂಡು ಹಾಗೂ ಮಹಾಮಂಗಳಾರತಿ ಪೂಜಾ ಕಾರ್ಯಕ್ರಮ ಜರುಗಿದ ನಂತರ  ಭಕ್ತರು ಭಕ್ತಿಯಿಂದ ತೇರನ್ನು ಎಳೆದರು.ಗ್ರಾಮದ ಮುಖಂಡರು, ದೇವಾಲಯದ ಆಡಳಿತ ಸಮಿತಿ, ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳು ಹಾಗೂ ಸುತ್ತಮುತ್ತಲ ಗ್ರಾಮದ ಭಕ್ತರು ರಥೋತ್ಸವದಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry