ಬುಧವಾರ, ಮಾರ್ಚ್ 3, 2021
31 °C
18, 19ನೇ ಶತಮಾನಕ್ಕೆ ಸೇರಿರುವ ಕುಡುಗೋಲು

ಪುರಾತನ ಕುಡುಗೋಲು ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುರಾತನ ಕುಡುಗೋಲು ಕೊಡುಗೆ

ಚನ್ನಮ್ಮನ ಕಿತ್ತೂರು: 18 ಅಥವಾ 19ನೇ ಶತಮಾನದ್ದು ಎನ್ನಲಾದ ಪುರಾತನ ಬದು (ಹಾಳೆ) ಸವರುವ ದೊಡ್ಡ ಆಕಾರದ ಎರಡು ಕುಡುಗೋಲುಗಳನ್ನು ಸಮೀಪದ ಡೊಂಬರಕೊಪ್ಪದ ಸಿದ್ದಲಿಂಗಪ್ಪ ಕಲ್ಲೇದ ಅವರು ಇಲ್ಲಿಯ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ.



ಈ ಮೂಲಕ ಅವರು ಇತಿಹಾಸ ಪ್ರಜ್ಞೆ ಮೆರೆದಿದ್ದಾರೆ. 4.5 ಕೆ.ಜಿ ತೂಕದ ಒಂದು ಕುಡಗೋಲು ಸುಮಾರು 5 ಅಡಿ ಉದ್ದವಿದೆ. ಅದರ ಹಿಡಿಕೆಯೇ 7 ಅಂಗುಲದಷ್ಟು ದೊಡ್ಡದಿದೆ.  ಮತ್ತೊಂದು ಕುಡುಗೋಲು 3 ಕೆ.ಜಿಯಷ್ಟಿದ್ದು ಸುಮಾರು 3.5 ಅಡಿ ಉದ್ದವಿದೆ. ಇದರ ಹಿಡಿಕೆ 6 ಅಂಗುಲದಷ್ಟಿದೆ.



‘ಹೊಲದ ಹಾಳೆ ಸವರಲು, ಮಣ್ಣು ಸಮ ಮಾಡಲು ಹಿಂದೆ ಏನು ಉಪಕರಣ ಬಳಸುತ್ತಿದ್ದರು ಎಂಬುದಕ್ಕೆ ಈ ಬದು ಸವರುವ ಕುಡುಗೋಲು ನಿದರ್ಶನವಾಗಿದೆ’ ಎಂದು ಪುರಾತತ್ವ ಇಲಾಖೆ ಸಹಾಯಕ ಕ್ಯೂರೇಟರ್ ಎನ್. ರಾಘವೇಂದ್ರ ತಿಳಿಸಿದರು.



‘ಇವುಗಳನ್ನು ಅಂದಗೊಳಿಸಿ ಒಂದು ಫ್ರೇಮ್ ಹಾಕಿಸಿ ವಸ್ತು ಸಂಗ್ರಹಾಲಯದಲ್ಲಿ   ಪ್ರದರ್ಶನಕ್ಕೆ ಇಡಲಾಗುವುದು’ ಎಂದು ಅವರು ಹೇಳಿದರು. ಕಿತ್ತೂರು ಅಥವಾ ಸುತ್ತಮುತ್ತಲಿನ ಊರುಗಳಲ್ಲಿ ಇಂತಹ ವಿಶೇಷ ವಸ್ತುಗಳೇನಾದರೂ ಸಿಕ್ಕರೆ ಅಥವಾ ಮನೆಯಲ್ಲಿದ್ದರೆ ಅವುಗಳನ್ನು ವಸ್ತು ಸಂಗ್ರಹಾಲಯಕ್ಕೆ ನೀಡುವಂತೆಯೂ ಅವರು ಮನವಿ ಮಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.