ಪುರಿ ಮಠದಲ್ಲಿ 14 ಟನ್ ಬೆಳ್ಳಿ ಇಟ್ಟಿಗೆ ಪತ್ತೆ

7

ಪುರಿ ಮಠದಲ್ಲಿ 14 ಟನ್ ಬೆಳ್ಳಿ ಇಟ್ಟಿಗೆ ಪತ್ತೆ

Published:
Updated:

ಪುರಿ (ಪಿಟಿಐ): ಇಲ್ಲಿಯ ಶ್ರೀ ಜಗನ್ನಾಥ ದೇವಸ್ಥಾನದ ಎದುರಿನಲ್ಲಿ ಇರುವ ಎಮಾರ್ ಮಠದಲ್ಲಿ 349 ಬೆಳ್ಳಿಯ ಇಟ್ಟಿಗೆಗಳು ಶನಿವಾರ ಪತ್ತೆಯಾಗಿವೆ.ಮೂರು ಮರದ ಪೆಟ್ಟಿಗೆಗಳಲ್ಲಿ ತುಂಬಿಸಿಟ್ಟಿದ್ದ ಈ ಇಟ್ಟಿಗೆಗಳ ಒಟ್ಟು ತೂಕ 14 ಟನ್! ಪ್ರತಿ ಇಟ್ಟಿಗೆಯೂ 38ರಿಂದ 40 ಕೆ.ಜಿ. ಭಾರವಾಗಿದೆ. ಈ  ಇಟ್ಟಿಗೆಗಳಲ್ಲಿ ಕೆಲವನ್ನು ಕದ್ದು ಮಾರಲು ಯತ್ನಿಸಿದ ಇಬ್ಬರನ್ನು ಬಂಧಿಸಿದ್ದರಿಂದ ಪೆಟ್ಟಿಗೆಗಳಲ್ಲಿ ಅವಿತಿದ್ದ ರಹಸ್ಯ ಬಹಿರಂಗಗೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry