ಪುರುಷರಿಗಾಗಿ ಟಿವಿಎಸ್‌ ‘ಜ್ಯುಪಿಟರ್’ ಸ್ಕೂಟರ್

7

ಪುರುಷರಿಗಾಗಿ ಟಿವಿಎಸ್‌ ‘ಜ್ಯುಪಿಟರ್’ ಸ್ಕೂಟರ್

Published:
Updated:

ಬೆಂಗಳೂರು: ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಿಕಾ ಕಂಪೆನಿ ಟಿವಿಎಸ್‌ ಮೋಟಾರ್‌, ವಿಶೇ­ಷವಾಗಿ ಪುರುಷರಿ ಗೆಂದೇ ಅಭಿವೃದ್ಧಿ­ಪಡಿಸಿದ ‘ಜ್ಯುಪಿಟರ್’ ಸ್ಕೂಟರನ್ನು ಇಲ್ಲಿ ಶುಕ್ರವಾರ ರಾಜ್ಯದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.‘ದೇಶದ ಒಟ್ಟಾರೆ ಸ್ಕೂಟರ್‌ ಮಾರು­ಕಟ್ಟೆ­ಯಲ್ಲಿ ಮಹಿಳಾ ಗ್ರಾಹಕರ ಪಾಲು ಶೇ 29ರಷ್ಟಿದೆ. ಪುರು­ಷ–ಮಹಿಳೆ ಇಬ್ಬರೂ ಬಳಸಬಹು-­ದಾದ ಸ್ಕೂಟ­ರ್‌ ಮಾರುಕಟ್ಟೆ ಗಾತ್ರ ಶೇ 35ರಷ್ಟಿದೆ. ಪುರುಷರಿಗಾ­ಗಿಯೇ ಇರುವ ಸ್ಕೂಟರ್‌ ಗಳ ಮಾರುಕಟ್ಟೆ ಶೇ 36ರಷ್ಟು ಪ್ರಗತಿ ಕಾಣುತ್ತಿದೆ. ತ್ವರಿತ­ವಾಗಿ ಬೆಳೆಯುತ್ತಿ ರುವ ಈ ವಲಯ ಗಮನ­ದಲ್ಲಿಟ್ಟು ಕೊಂಡು ‘ಜ್ಯುಪಿಟರ್‌’ ಮಾರು­ಕಟ್ಟೆಗೆ ಬಿಡುಗಡೆ ಮಾಡಲಾಗಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಟಿವಿಎಸ್‌ ಮೋಟಾರ್‌ನ ಮಾರುಕಟ್ಟೆ ಉಪಾಧ್ಯಕ್ಷ ಜೆ.ಶ್ರೀನಿವಾಸನ್‌ ಹೇಳಿದರು.ಬೆಂಗಳೂರಿನಲ್ಲಿ ‘ಜ್ಯುಪಿಟರ್’ ಎಕ್ಸ್‌ ಷೋರೂಂ ಬೆಲೆ ರೂ.48 ಸಾವಿರ. ಮೊಬೈಲ್‌ ಚಾರ್ಜರ್‌, ಪಾಸ್‌ ಬೈ ಸ್ವಿಚ್‌, ಎಕೊ ಮೋಡ್‌ ಸೇರಿದಂತೆ ಹೊಸ ತಲೆಮಾರಿನ 20ಕ್ಕೂ ಹೆಚ್ಚು ತಂತ್ರಜ್ಞಾನಗಳು ಇದರಲ್ಲಿವೆ. ಪೂರ್ಣ ಅಲ್ಯುಮಿನಿಯಂನಿಂದ ತಯಾರಾದ ಈ ಸ್ಕೂಟರ್‌ ಚಾಲನೆ ವೇಳೆ ಶಬ್ದ ಹೊರಡಿ ಸುವುದಿಲ್ಲ ಎನ್ನು­ವುದು ಮತ್ತೊಂದು ವಿಶೇಷ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry