ಪುಸ್ತಕಗಳು ಜೀವನಪರ್ಯಂತ ಸಂಗಾತಿ

7

ಪುಸ್ತಕಗಳು ಜೀವನಪರ್ಯಂತ ಸಂಗಾತಿ

Published:
Updated:

ಬೆಂಗಳೂರು: ‘ಪುಸ್ತಕಗಳು ಜೀವನ ಪರ್ಯಂತ ಅತ್ಯುತ್ತಮ ಸಂಗಾತಿಗಳು’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಸಿದ್ದಪ್ಪ ಅವರು ಅಭಿಪ್ರಾಯಪಟ್ಟರು.ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಮಂಗಳವಾರದಿಂದ ಆರಂಭವಾದ ನಾಲ್ಕು ದಿನಗಳ ‘ಪುಸ್ತಕ ಪ್ರದರ್ಶನ’ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಮುಖ್ಯ ಅತಿಥಿಗಳಾಗಿದ್ದ ಕುಲಪತಿ ಡಾ.ಎನ್.ಪ್ರಭುದೇವ್ ಅವರು ಗ್ರಂಥಾಲಯದ ಉತ್ತಮ ಕಾರ್ಯಕ್ರಮಗಳಿಗೆ ವಿಶ್ವವಿದ್ಯಾಲಯವು ಅಗತ್ಯ ಸಹಾಯ ಸಹಕಾರಗಳನ್ನು ನೀಡುತ್ತಿದೆ ಎಂದರು. ಪ್ರತಿ ವರ್ಷ ಗ್ರಂಥಾಲಯಕ್ಕೆ ನೀಡುತ್ತಿದ್ದ ರೂ. 50 ಲಕ್ಷ ಅನುದಾನವನ್ನು ಒಂದೂವರೆ ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದರು.ರಾಷ್ಟ್ರೀಯ ಪುಸ್ತಕ ಪ್ರದರ್ಶನ: ಬರುವ ಆಗಸ್ಟ್ 12ರಂದು ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್.ರಂಗನಾಥನ್‌ರವರ ಜನ್ಮದಿನವನ್ನು ಗ್ರಂಥಪಾಲಕರ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಅಂದಿನಿಂದ ಹತ್ತು ದಿನಗಳ ಕಾಲ ‘ರಾಷ್ಟ್ರೀಯ ಪುಸ್ತಕ ಪ್ರದರ್ಶನ’ವನ್ನು ಏರ್ಪಡಿಸಲು ತೀರ್ಮಾನಿಸಲಾಗಿದೆ.  ಕಾರ್ಯಕ್ರಮದ ನೇತೃತ್ವವನ್ನು ಬೆಂಗಳೂರು ವಿ.ವಿ. ವಹಿಸಿಕೊಳ್ಳಲಿದೆ ಎಂದು ಪ್ರಭುದೇವ್ ಘೋಷಿಸಿದರು.ಕುಲಸಚಿವ ಪ್ರೊ.ಆರ್.ಎಂ.ರಂಗನಾಥ್ ಮಾತನಾಡಿ, ‘ಬೆಂಗಳೂರು ವಿ.ವಿ. ಗ್ರಂಥಾಲಯದಲ್ಲಿ ಗ್ರಂಥಗಳು ಸಂಪದ್ಭರಿತವಾಗಿದ್ದು ವಿವಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಯೋಗಿಸಿ ಶೈಕ್ಷಣಿಕ ಮಟ್ಟದಲ್ಲಿ ವಿ.ವಿ.ಯನ್ನು ಬೆಳೆಸಬೇಕಾಗಿದೆ’ ಎಂದರು. ಹಣಕಾಸು ಅಧಿಕಾರಿ ಎ.ಎಸ್.ರಿಜ್ವಿ, ಗ್ರಂಥಪಾಲಕ ಡಾ.ಪಾಂಡುರಂಗ ವಿ.ಕೊಣ್ಣೂರ, ಉಪ ಗ್ರಂಥಪಾಲಕ ಡಾ.ಕೆ.ದೊರೆಸ್ವಾಮಿ, ರಮಣಿ ಮೋಹನ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry