ಪುಸ್ತಕಗಳ ಲೋಕಾರ್ಪಣೆ

7

ಪುಸ್ತಕಗಳ ಲೋಕಾರ್ಪಣೆ

Published:
Updated:

ನಾಲ್ಕನೇ ಆಯಾಮ

ಸ್ವಪ್ನ ಬುಕ್ ಹೌಸ್: ಬುಧವಾರ ಪ್ರಜಾವಾಣಿ ಸಹ ಸಂಪಾದಕ ಪದ್ಮರಾಜ ದಂಡಾವತಿ ಅವರ ‘ನಾಲ್ಕನೇ ಆಯಾಮ’ ಅಂಕಣ ಬರಹಗಳ ಎರಡು ಸಂಪುಟ ಲೋಕಾರ್ಪಣೆ. ಪೂಜ್ಯಾ ಮೋಹನ್ ಅವರಿಂದ ಸುಗಮ ಸಂಗೀತ. ಅತಿಥಿಗಳು: ಪ್ರಜಾವಾಣಿ ಸಂಪಾದಕ ಕೆ.ಎನ್. ಶಾಂತಕುಮಾರ್, ಚಂದ್ರಶೇಖರ ಕಂಬಾರ, ಮನು ಬಳಿಗಾರ್.‘ನಾಲ್ಕನೇ ಆಯಾಮ’ ಅಂಕಣ ಬರಹಗಳು ಪ್ರಚಲಿತ ವಿದ್ಯಮಾನಗಳಿಗೆ ಸೂಕ್ಷ್ಮ ಮನಸ್ಸಿನ ಸೃಜನಶೀಲ ಪ್ರತಿಕ್ರಿಯೆ. ಸಾಮಾಜಿಕ ಕಾಳಜಿ ಹಾಗೂ ಪರಿಣಾಮಕಾರಿ ಭಾಷೆ, ರಾಜಕಾರಣ ಮಾತ್ರವಲ್ಲದೆ, ಸಾಹಿತ್ಯ-ಸಂಸ್ಕೃತಿ, ಮಾನವೀಯತೆ, ಪ್ರವಾಸದ ಅನುಭವಗಳು, ವ್ಯಕ್ತಿಚಿತ್ರಗಳನ್ನು ಒಳಗೊಂಡ ಬರಹಗಳು ತಮ್ಮ ವಸ್ತು ವೈವಿಧ್ಯದಿಂದಲೂ ಗಮನಸೆಳೆಯುತ್ತವೆ. ಇವು ಸಮಕಾಲೀನ ಸಾಂಸ್ಕೃತಿಕ- ರಾಜಕಾರಣ ಚರಿತ್ರೆಯ ಗುಣವನ್ನೂ ಪಡೆದಿವೆ.ಸ್ಥಳ: ಕನ್ನಡ ಭವನ, ಜೆ.ಸಿ. ರಸ್ತೆ. ಸಂಜೆ 4.‘ಛಂದ’ ಸಂಭ್ರಮ

ಛಂದ ಪುಸ್ತಕ: ಬುಧವಾರ ‘ಛಂದ ಪ್ರಶಸ್ತಿ’ ಪಡೆದ ಕಣಾದ ರಾಘವ ಅವರ ‘ಮೊದಲ ಮಳೆಯ ಮಣ್ಣು’ ಕಥಾಸಂಕಲನ, ಪ್ರಶಾಂತ ಬೀಚಿ ಅವರ ‘ಕಿಲಿಮಂಜಾರೋ’ ಪ್ರವಾಸ ಕಥನ, ಸುನಂದಾ ಪ್ರಕಾಶ ಕಡಮೆ ಅವರ ‘ಬರೀ ಎರಡು ರೆಕ್ಕೆ’ ಹಾಗೂ ಎಂ.ಆರ್.ದತ್ತಾತ್ರಿ ಅವರ ‘ದ್ವೀಪವ ಬಯಸಿ’ ಕಾದಂಬರಿ ಲೋಕಾರ್ಪಣೆ.ಅತಿಥಿಗಳು: ಎಚ್.ಎಸ್.ವೆಂಕಟೇಶಮೂರ್ತಿ, ಅಮರೇಶ ನುಗಡೋಣಿ ಹಾಗೂ ಬೆಳಗೋಡು ರಮೇಶ್ ಭಟ್.

ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ. ಬೆಳಿಗ್ಗೆ 10.30.ಬದುಕಿನಾಚೆಯೂ ಬದುಕಿದವರು...

ಹಿತ್ತಲಗಿಡ ಪ್ರಕಾಶನ
: ಬುಧವಾರ ಜಯಂತ ಕಾಯ್ಕಿಣಿ ಅವರಿಂದ ಡಾ. ಸುಮಾ ಹೆಬ್ಬಾರ ಅವರ ಸಂಗ್ರಹ ಬರಹ ‘ಬದುಕಿನಾಚೆಯೂ ಬದುಕಿದವರು’ (ಕಿಬ್ಬಳ್ಳಿ ಸೋದರದ್ವಯರ ಸ್ಮರಣ ಸಂಚಿಕೆ ) ಲೋಕಾರ್ಪಣೆ. ಕೃತಿ ಕುರಿತು: ಹರಿಶ್ಚಂದ್ರ ಭಟ್, ಶರತ್ ಕಲ್ಕೋಡ್. ಅತಿಥಿಗಳು: ಆರ್.ಜಿ. ರಾಯ್ಕರ್, ಡಾ. ಉಷಾರಾಣಿ, ವಿ.ಎನ್. ಭಟ್ಟ. ತದ್ದಲಸೆ ವಿಘ್ನೇಶ್ವರ ಶರ್ಮ, ಭಾಗೀರಥಿ ಹೆಗಡೆ, ಡಾ. ಭೈರಪ್ಪ, ಎಂ,ವಿ. ಜಾಗೀರದಾರ್. ವಿ.ಜೆ. ನಾಯಕ್, ನಾ.ಸು. ಭರತನಹಳ್ಳಿ, ಡಾ. ಶಿವರಾಮ ಪೈಲೂರು, ಹೇಮಂತ ಹೆಗಡೆ, ರಾಜಶೇಖರ, ವೈ.ನಾ. ಶರ್ಮ, ಟಿ.ಆರ್. ಜಗದೀಶ್. ಅಧ್ಯಕ್ಷತೆ: ಜಿ.ಎಂ. ಶಿರಹಟ್ಟಿ. ಸ್ಥಳ: ಕನ್ನಡ ವಿಶ್ವ ಬ್ರಾಹ್ಮಣರ ಸಭಾಂಗಣ, ನ್ಯೂ ಟೌನ್ ಕ್ಲಬ್ ಹತ್ತಿರ, ಯಲಹಂಕ ಉಪನಗರ. ಸಂಜೆ 4.ರೈತನಾಗುವ ಹಾದಿಯಲ್ಲಿ

ದೇಸಿ ಪುಸ್ತಕ: ಮಂಗಳವಾರ ನಾರಾಯಣ ರೆಡ್ಡಿ ಅವರಿಂದ ಎಸ್.ಎಂ. ಪೆಜತ್ತಾಯ ಅವರ ‘ರೈತನಾಗುವ ಹಾದಿಯಲ್ಲಿ’ ಕೃತಿ ಲೋಕಾರ್ಪಣೆ. ಅತಿಥಿಗಳು: ರವಿ ಕೃಷ್ಣಾರೆಡ್ಡಿ, ಸಿಂಧು. ಅಧ್ಯಕ್ಷತೆ: ಡಾ. ನಾರಾಯಣ ಗೌಡ. ಸ್ಥಳ: ಕನ್ನಡ ಭವನ, ಜೆ.ಸಿ.ರಸ್ತೆ. ಸಂಜೆ 6.ಇತಿಹಾಸ, ಪೂರ್ವಾವಲೋಕನ

ಅಭಿನವ ಸಂಸ್ಥೆ: ಮಂಗಳವಾರ ಷ. ಶೆಟ್ಟರ್ ಅವರಿಂದ ಎಚ್.ಎಸ್. ಗೋಪಾಲ್‌ರಾವ್ ಅವರ ನಮ್ಮದಿದು ಇತಿಹಾಸ (ಸ್ಥಳೀಯ ಚರಿತ್ರೆ ಮತ್ತು ಸಂಸ್ಕೃತಿಗಳು) ಮತ್ತು ಎಸ್.ಎನ್. ಬಾಲಗಂಗಾಧರ ಅವರ ಪೂರ್ವಾವಲೋಕನ (ವಸಾಹತು ಪ್ರಜ್ಞೆ ಮತ್ತು ಸಾಂಸ್ಕೃತಿಕ ಅಧ್ಯಯನ) ಕೃತಿ ಲೋಕಾರ್ಪಣೆ. ಕೃತಿ ಪ್ರತಿಕ್ರಿಯೆ: ಎನ್.ಎಸ್.ತಾರಾನಾಥ್, ವಿವೇಕ್ ಧಾರೇಶ್ವರ.ಧ್ವನಿಯ ಬರಹ ರೂಪವೇ ಅಕ್ಷರ. ಅದು ನಾಶವಾಗುವುದಿಲ್ಲ. ಅಕ್ಷರವು ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಪ್ರತಿನಿಧಿಸುತ್ತದೆ ಎಂಬ ನಂಬಿಕೆ ಇದೆ. ಇನ್ನು ಹಲವು ಅರ್ಥಗಳಿರುವ ಅಕ್ಷರವು ಇತಿಹಾಸವನ್ನು ದಾಖಲಿಸಿದೆ. ಕಳೆದ ಕಾಲದ ಯಾವುದೇ ವಿಷಯವು ಅಕ್ಷರ ರೂಪದಲ್ಲಿ ದಾಖಲಾಗಿದ್ದರೆ ಮಾತ್ರ ಇತಿಹಾಸ ಎಂಬುದು ಒಪ್ಪಿತವಾದ ಮಾತು. ಶಿಲೆ, ತಾಡಪತ್ರ, ಭೂರ್ಜಪತ್ರ, ಕಡತ ಕಾಗದ ಇತ್ಯಾದಿಗಳ ಮೇಲಿನ ಅಕ್ಷರ ರೂಪದ ದಾಖಲೆಗಳು ಇತಿಹಾಸದ ಅಧ್ಯಯನಕ್ಕೆ ಆಕರಗಳು. ಅದು ಹೇಗೆ ಎನ್ನುವುದರ ವಿವರಣೆಯೇ ನಮ್ಮದಿದು ಇತಿಹಾಸ. ಸ್ಥಳ; ಕನ್ನಡ ಸಾಹಿತ್ಯ ಪರಿಷತ್, ಚಾಮರಾಜಪೇಟೆ. ಸಂಜೆ 6.ಯುವ ಜಾಗೃತಿ

ಸಹೇಲಿ ಸಂಸ್ಥೆ
: ಸ್ವಾಮಿ ವಿವೇಕಾನಂದ ಸ್ಮರಣಾರ್ಥ ಜನ್ಮದಿನಾಚರಣೆ. ನಂತರ 11ಕ್ಕೆ  ಪ್ರಮೋದ್ ಮುತಾಲಿಕ್ ಅವರಿಂದ ಕಿರಣ್ ಸಹೇಲಿ ಅವರು ಬರೆದಿರುವ ‘ಪರಬ್ರಹ್ಮನಾಗಲು 21 ಸೂತ್ರಗಳು’ ಕೃತಿ ಲೋಕಾರ್ಪಣೆ. ‘ರಾಮಕೃಷ್ಣ ವಿವೇಕ ವೈಭವ’ ನಾಟಕ ಪ್ರದರ್ಶನ. ಅತಿಥಿಗಳು: ಸುಮತೀಂದ್ರ ನಾಡಿಗ್, ವಿನೋದ್ ಸಿಂಘಲ್.ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಬೆಳಿಗ್ಗೆ 9.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry