ಭಾನುವಾರ, ನವೆಂಬರ್ 17, 2019
24 °C

ಪುಸ್ತಕ ಪರಿಷೆ; ಭರ್ಜರಿ ಭೋಜನ

Published:
Updated:

ಹಾಸನ: ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಕೆಲವರು ಕಲಾಭವನದೊಳಗೆ ಗೋಷ್ಠಿಗಳಲ್ಲಿ ತಲ್ಲೆನರಾಗಿದ್ದರೆ, ಓದುವ ಹುಚ್ಚು ಬೆಳೆಸಿಕೊಂಡಿದ್ದವರು ಪುಸ್ತಕ ಮಳಿಗೆಗಳಲ್ಲಿ ಪುಸ್ತಕಗಳಿಗಾಗಿ ಹುಡುಕಾಟ ನಡೆಸುತ್ತಿದ್ದರು. ಪುಸ್ತಕ ಮಳಿಗೆಗಳು ಸಹ ಸಾಹಿತ್ಯ ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿದ್ದವು.ನಗರದ ಹಾಸನಾಂಬ ಕಲಾಕ್ಷೇತ್ರದ ಆವರಣದಲ್ಲಿ ಹಾಕಿದ್ದ ಪೆಂಡಾಲ್‌ಗಳಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಪ್ರಕಾಶಕರು ಪುಸ್ತಕಗಳನ್ನು ತಂದು ಮಾರಾಟಕ್ಕಿಟ್ಟಿದ್ದರು. ನಾಡಿನ ಪ್ರಮುಖ ಲೇಖಕರ ಕಥೆ, ಕವನ, ಜೀವನಚರಿತ್ರೆ, ಮತ್ತಿತರ ಕೃತಿಗಳು ಮಾರಾಟಕ್ಕಿದ್ದವು. ಸಮ್ಮೇಳನಕ್ಕೆ ಬಂದಿದ್ದ ಎಲ್ಲರೂ ಮಳಿಗೆಗಳಲ್ಲೂ ಒಂದು ಸುತ್ತು ಹಾಕಿಯೇ ಮನೆಗೆ ಹೋಗಿದ್ದಾರೆ.ಊಟದಲ್ಲಿ ಬದಲಾವಣೆ

ಸಾಹಿತ್ಯ ಸಮ್ಮೇಳನದ ಮೊದಲ ದಿನ ಏರ್ಪಡಿಸಿದ್ದ ಮಧ್ಯಾಹ್ನದ ಊಟದ ವ್ಯವಸ್ಥೆಬಗ್ಗೆ ಕೆಲವು ಆಕ್ಷೇಪಗಳು ಬಂದಿದ್ದವು. ಹುಳಿ ಮೊಸರನ್ನ ಹಾಗೂ ಒಣಗಿದ ಚಿತ್ರಾನ್ನ ನೀಡಿದ್ದರಿಂದ ದೂರದಿಂದ ಬಂದಿದ್ದ ಕೆಲವರು ಹೋಟೆಲ್‌ಗಳಿಗೆ ಹೋಗುವಂತಾಗಿತ್ತು. ಇದನ್ನರಿತ ಆಯೋಜಕರು ತಪ್ಪನ್ನು ತಿದ್ದಿ ಕೊಂಡು ಭಾನುವಾರ ರುಚಿಯಾದ ಮೊಸರನ್ನ ಹಾಗೂ ಬಿಸಿಬೇಳೆ ಬಾತ್, ಜತೆಗೆ ಜಿಲೇಬಿಯನ್ನೂ ಉಣಬಡಿಸಿದರು.

ಪ್ರತಿಕ್ರಿಯಿಸಿ (+)