ಪುಸ್ತಕ ಪ್ರಾಧಿಕಾರದ 2014ರ ಪ್ರಶಸ್ತಿ ಪ್ರಕಟ

7
ಪ್ರೊ. ಬಿ. ಶೇಖ್ ಅಲಿಗೆ ‘ಡಾ.ಎಂ.ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ’

ಪುಸ್ತಕ ಪ್ರಾಧಿಕಾರದ 2014ರ ಪ್ರಶಸ್ತಿ ಪ್ರಕಟ

Published:
Updated:
ಪುಸ್ತಕ ಪ್ರಾಧಿಕಾರದ 2014ರ ಪ್ರಶಸ್ತಿ ಪ್ರಕಟ

ಬೆಂಗಳೂರು: ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಅವರ ಹೆಸರಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಸ್ಥಾಪಿಸಿರುವ  ‘ಮಾನವಿಕ ಅಧ್ಯಯನ ಪ್ರಶಸ್ತಿ’ಗೆ ಮೈಸೂರಿನ ಸಂಶೋಧಕ ಪ್ರೊ. ಬಿ. ಶೇಖ್ ಅಲಿ ಅವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ₹ 75 ಸಾವಿರ ನಗದು ಒಳಗೊಂಡಿದೆ.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಬಂಜಗೆರೆ ಜಯಪ್ರಕಾಶ್‌ ಈ ಕುರಿತು ಮಾಹಿತಿ ನೀಡಿದರು.

2014 ನೇ ಸಾಲಿನ ಅತ್ಯುತ್ತಮ ಪ್ರಕಾಶನ ಪ್ರಶಸ್ತಿಗೆ ಬೆಂಗಳೂರಿನ ಅಂಕಿತ ಪ್ರಕಾಶನ ಆಯ್ಕೆಯಾಗಿದೆ.ಪ್ರಶಸ್ತಿಯು ₹ 1 ಲಕ್ಷ ನಗದು ಒಳಗೊಂಡಿದೆ. ಡಾ. ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿಗೆ ಧಾರವಾಡದ ಡಾ. ತೇಜಸ್ವಿ ಕಟ್ಟೀಮನಿ ಆಯ್ಕೆಯಾಗಿದ್ದಾರೆ.ಪ್ರಶಸ್ತಿಯು ₹50 ಸಾವಿರ ನಗದು ಒಳಗೊಂಡಿದೆ. ಡಾ. ಅನುಪಮಾ ನಿರಂಜನ ವೈದ್ಯಕೀಯ ಮತ್ತು ವಿಜ್ಞಾನ ಸಾಹಿತ್ಯ ಪ್ರಶಸ್ತಿಗೆ ಬೆಂಗಳೂರಿನ ವೈದ್ಯ ಡಾ. ಬಿ.ಟಿ. ರುದ್ರೇಶ್‌ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ₹25 ಸಾವಿರ ನಗದು ಒಳಗೊಂಡಿದೆ. ಪುಸ್ತಕ ಸೊಗಸು ಬಹುಮಾನಕ್ಕೆ ಆರು ಪುಸ್ತಕಗಳು ಆಯ್ಕೆಯಾಗಿವೆ.ಪ್ರಥಮ: ಆರ್‌.ಪಿ. ಹೆಗಡೆ ಅವರ ಅನುವಾದಿತ ಕೃತಿ ‘ದಲಿತ ಸಾಹಿತ್ಯದ ಸೌಂದರ್ಯ ಶಾಸ್ತ್ರ’. ಲಡಾಯಿ     ಪ್ರಕಾಶನ ಗದಗ. ₹25 ಸಾವಿರ ನಗದು.

ದ್ವಿತೀಯ: ಡಿ.ಬಿ. ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಅವರ ‘ಬುಡ್ಡಿ ದೀಪದ ಬೆಳಕು’. ಬಹುರೂಪಿ ಪ್ರಕಾಶನ, ಬೆಂಗಳೂರು. ₹20 ಸಾವಿರ ನಗದು.ತೃತೀಯ: ಕಡಿದಾಳ್‌ ಪ್ರಕಾಶ್‌ ಅವರ ‘ಕುವೆಂಪು ಚಿತ್ರ ಸಂಪುಟ’. ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಪ್ರಕಾಶನ, ಶಿವಮೊಗ್ಗ. ₹15ಸಾವಿರ ನಗದು.ಮಕ್ಕಳ ಪುಸ್ತಕ ಸೊಗಸು ಬಹುಮಾನ: ಗಿರೀಶ್‌ ಜಕಾಪುರೆ ಅವರ ‘ನನ್ನ ಸೈಕಲ್‌ ಸವಾರಿ’. ಪೂರ್ವಶ್ರೀ ಪ್ರಕಾಶನ, ಸೊಲ್ಲಾಪುರ. ₹8 ಸಾವಿರ ನಗದು.ಮುಖಪುಟ ವಿನ್ಯಾಸ ಬಹುಮಾನ

ಪ್ರಥಮ:
ಕೇಶವ ರೆಡ್ಡಿ ಹಂದ್ರಾಳ ಅವರ ‘ಮರೆತ ಭಾರತ’. ಕಲಾವಿದ ಮುರಳೀಧರ ವಿ. ರಾಥೋಡ್‌. ₹10ಸಾವಿರ ನಗದು.

ದ್ವಿತೀಯ: ಡಾ. ಎಂ.ಎಸ್‌. ಆಶಾದೇವಿ ಅವರ ‘ಹುದುಗಲಾರದ ದುಃಖ’. ಕಲಾವಿದ ರಘು ಅಪಾರ. ₹8 ಸಾವಿರ ನಗದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry