ಸೋಮವಾರ, ಅಕ್ಟೋಬರ್ 21, 2019
25 °C

ಪುಸ್ತಕ ರೂಪದಲ್ಲಿ ಕಲಾಚಿತ್ರಗಳು ಪ್ರಕಟ

Published:
Updated:

ಧಾರವಾಡ: ತಾಲ್ಲೂಕಿನ ದಡ್ಡಿ ಕಮಲಾಪುರದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕ್ಯಾಂಪ್‌ನಲ್ಲಿ ಮೂರು ದಿನಗಳವರೆಗೆ ಬೆಳಗಾವಿ ವಿಭಾಗ ಮಟ್ಟದ ಚಿತ್ರಕಲಾ ಸ್ಪರ್ಧೆ ಹಾಗೂ ಚಿತ್ರಕಲಾ ಶಿಕ್ಷಕರ ಕಾರ್ಯಾಗಾರವನ್ನು ಈಚೆಗೆ ಏರ್ಪಡಿಸಲಾಗಿತ್ತು.ವಿಜೇತರಿಗೆ ಬಹುಮಾನ ವಿತರಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಬಿ.ವಿ.ಕುಲಕರ್ಣಿ ಮಾತನಾಡಿ, `ಕಾರ್ಯಾಗಾರದಲ್ಲಿ ರಚನೆಯಾದ ಕಲಾಕೃತಿಗಳನ್ನು ಒಟ್ಟುಗೂಡಿಸಿ ಒಂದು ವರ್ಣರಂಜಿತ ಪುಸ್ತಕವನ್ನು ಪ್ರಕಟಿಸಲಾಗುವುದು ಎಂದರು. ಆಯುಕ್ತರ ಕಾರ್ಯಾಲಯದ ಸಹ ನಿರ್ದೇಶಕ ಜಿ.ಎಸ್.ನಾಯ್ಕ, ನಿವೃತ್ತ ಚಿತ್ರಕಲಾ ಶಿಕ್ಷಕರಾದ ಎಂ.ಆರ್.ಬಾಳಿಕಾಯಿ, ವಿ.ಎನ್.ಜೋಶಿ, ಭಾರತ ಸ್ಕೌಟ್ಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಪ್ರಭಾ ಎಂ.ಲೋಂಡೆ, ಚಿತ್ರ ಕಲಾವಿದ ಎ.ಜಿ.ಉಪ್ಪಾರ, ಪಿ.ಆರ್.ಬಾರಕೇರ ಭಾಗವಹಿಸಿದ್ದರು.ಕಾರವಾರ ಜಿಲ್ಲೆಯ ಶಿಕ್ಷಕ ಘಟಕಾಂಬಳೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ನಿವೃತ್ತ ಶಿಕ್ಷಕ ಜಿ.ವೈ.ಹಾಲಸಕರ, ಸಿ.ಎಚ್.ಮಾಳಗಿ ಅವರು ಪ್ರಾರ್ಥನೆ ಹಾಗೂ ಸ್ವಾಗತ ಗೀತೆ ಹಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ವೃತ್ತಿ ಶಿಕ್ಷಣ ಪರಿವೀಕ್ಷಕ ಬಿ.ವೈ.ಭಜಂತ್ರಿ, ಸ್ವಾಗತಿಸಿದರು. ಸಿ.ಸಿ.ಬಾರಕೇರ, ಎಸ್.ಎ.ಕೇಸರಿ ನಿರೂಪಿಸಿದರು. ತೋಟಗಿ ವಂದಿಸಿದರು.ಸ್ಪರ್ಧಾ ವಿಜೇತರು: ಪ್ರಥಮ-ಬೆಳಗಾವಿಯ ಸೇಂಟ್ ಜೋಸೆಫ್ ಕಾನ್ವೆಂಟ್‌ನ ಮಯೂರಿ ಅಣ್ವೇಕರ; ದ್ವಿತೀಯ-ಭಟ್ಕಳ ತಾಲ್ಲೂಕಿನ ಚಿತ್ರಾಪುರದ ಶ್ರಿವಲಿ ಪ್ರೌಢಶಾಲೆಯ ಆದರ್ಶ ಕೃಷ್ಣ ರೇವಣಕರ; ತೃತೀಯ-ಕಲಘಟಗಿ ತಾಲ್ಲೂಕಿನ ಗಳಗಿ ಹುಲಕೊಪ್ಪದ ಸರ್ಕಾರಿ ಪ್ರೌಢಶಾಲೆಯ ಗುರುದೇವಿ   ಹಿರೇಮಠ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)