ಪುಸ್ತಕ ಲೋಕ

ಗುರುವಾರ , ಮೇ 23, 2019
32 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಪುಸ್ತಕ ಲೋಕ

Published:
Updated:

ನಾಡಿದ್ದು ಶಿಕ್ಷಕರ ದಿನಾಚರಣೆ. ಶಿಕ್ಷಣಕ್ಕೂ ಪುಸ್ತಕಕ್ಕೂ ಅವಿನಾಭಾವ ಸಂಬಂಧ. ಪುಸ್ತಕ ಇಲ್ಲದೇ ಶಿಕ್ಷಣವೂ ಇಲ್ಲ, ಶಿಕ್ಷಕರೂ ಇಲ್ಲ. ಕಾಕತಾಳೀಯ ಎಂಬಂತೆ ಬೆಂಗಳೂರು ವಿವಿ ಮತ್ತು ಇಂಡ್ಯಾ ಕಾಮಿಕ್ಸ್ ಸಹಯೋಗದಲ್ಲಿ ಬೃಹತ್ ಪುಸ್ತಕೋತ್ಸವ ಇದೇ ಸಂದರ್ಭದಲ್ಲಿ ನಡೆಯುತ್ತಿದೆ.ಇಲ್ಲಿ ವಿವಿಧ ಭಾಷೆ, ವಿಷಯ, ವಸ್ತುಗಳ ಪುಸ್ತಕಗಳು ವಿವಿಧ ದರಗಳಲ್ಲಿ, ರಿಯಾಯ್ತಿಯಲ್ಲಿ ದೊರೆಯುತ್ತಿವೆ. ಪುಸ್ತಕ ಪ್ರಿಯರಿಗಂತೂ ಭರ್ಜರಿ ಹಬ್ಬ. ದೇಶದ ನಾನಾ ಕಡೆ ಸುಮಾರು 300 ಪುಸ್ತಕಗಳ ಪ್ರಕಾಶಕರು, ವ್ಯಾಪಾರಿಗಳು ಭಾಗವಹಿಸಿದ್ದಾರೆ. ಉತ್ಸವದ ಅವಧಿಯಲ್ಲಿ ಗ್ರಂಥಪಾಲಕರಿಗೆ, ಶಿಕ್ಷಕರಿಗೆ, ಪ್ರಕಾಶಕರಿಗೆ ಉಪಯುಕ್ತವಾಗುವ ವಿಷಯಗಳ ಬಗ್ಗೆ ಪ್ರತಿದಿನ ವಿಚಾರ ಸಂಕಿರಣ ನಡೆಯುತ್ತಿದ್ದು, ರಾಜ್ಯದ ವಿವಿಧ ವಿವಿ ಕುಲಪತಿಗಳು, ತಜ್ಞರು, ಸಾಹಿತಿಗಳು ಭಾಗವಹಿಸುತ್ತಿದ್ದಾರೆ.ಸೋಮವಾರ ಶಿಕ್ಷಕರ ದಿನಾಚರಣೆ ನಿಮಿತ್ತ ವಿಧಾನ ಸೌಧದಿಂದ ಪುಸ್ತಕೋತ್ಸವದ ಆವರಣದವರೆಗೂ ಶೈಕ್ಷಣಿಕ ನಡಿಗೆ ಏರ್ಪಡಿಸಲಾಗುತ್ತಿದೆ. ಅಂದು ಶಿಕ್ಷಕರಿಗೆ ವಿಶೇಷವಾದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗುವುದು.  ಟಿವಿ ಹಾಗೂ ಇಂಟರ್ನೆಟ್ ಪ್ರಭಾವ ಎಲ್ಲೆಡೆ ಆವರಿಸಿದ್ದರೂ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗಿಲ್ಲ ಎನ್ನುವುದು ಈ ಉತ್ಸವ ನೋಡಿದರೆ ಮನದಟ್ಟಾಗುತ್ತದೆ.ಪುಸ್ತಕ ಮೇಳದಲ್ಲಿ ಹೆಸರಿಗೆ ತಕ್ಕಂತೆ ಪುಸ್ತಕ  ಪ್ರಪಂಚವೇ ತೆರೆದುಕೊಂಡಿದೆ. ಎಲ್ಲ ವರ್ಗದವರ ಅಭಿರುಚಿಗೆ ತಕ್ಕಂತೆ ಪುಸ್ತಕಗಳು ಇಲ್ಲಿವೆ. ಜೊತೆಗೆ ಇ-ಪುಸ್ತಕಗಳು, ಸೀಡಿಗಳು ಇತ್ಯಾದಿ ಓದುವ ಹಾಗೂ ಓದಿಸುವ ಸಾಹಿತ್ಯ ಮಾತ್ರವಲ್ಲದೆ ರಾಜ್ಯದ ವಿವಿಧ ಭಾಗದ ಆಹಾರ, ಮನರಂಜನೆಯೂ ಇದೆ.ಸುಮಾರು ಎರಡು ಲಕ್ಷಕ್ಕೂ ಅಧಿಕ ಸಂದರ್ಶಕರು ಭಾಗವಹಿಸುವ ಮತ್ತು 10 ಕೋಟಿ ರೂ ಗಳಿಗೂ ಹೆಚ್ಚಿನ ವಹಿವಾಟು ನಡೆಯುವ ನಿರೀಕ್ಷೆಯಿದೆ ಎನ್ನುತ್ತಾರೆ ಇಂಡ್ಯಾ ಕಾಮಿಕ್ಸ್‌ನ ರಘುರಾಂ.ಸಾಹಿತ್ಯ ಪರಂಪರೆಯನ್ನು ಸಾರ್ವಜನಿಕರಲ್ಲಿ ಜಾಗೃತಗೊಳಿಸಲು ಪ್ರಥಮ ಬಾರಿಗೆ ಸಚಿತ್ರ ರೂಪದಲ್ಲಿ ಸಾಹಿತಿಗಳ ಪುಸ್ತಕವನ್ನು ತರುತ್ತಿರುವುದು ಇಂಡಾ ಕಾಮಿಕ್ಸ್‌ನ ಹೆಗ್ಗಳಿಕೆ.ವಿಶೇಷ

* ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರವೇಶ ಉಚಿತ, ಸಾರ್ವಜನಿಕರಿಗೆ 20 ರೂ ಪ್ರವೇಶ ಶುಲ್ಕ.

ಪ್ರದರ್ಶನದ ಸಮಯ ಬೆಳಿಗ್ಗೆ 11ರಿಂದ ರಾತ್ರಿ 8.30.

ಸೆ. 5 ರಂದು ಶಿಕ್ಷಕರ ದಿನಾಚರಣೆ ಪ್ರಯುಕ್ತ ವಿಧಾನಸೌಧದಿಂದ ಅರಮನೆ ಮೈದಾನದ ವರೆಗೆ ಶಿಕ್ಷಕರ ನಡಿಗೆ.

ಸೆ. 7ಕ್ಕೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಗ್ರಂಥಪಾಲಕರ ಗೋಷ್ಠಿ (ಲೈಬ್ರರಿ ಮೀಟ್).

ಸೆ. 8ಕ್ಕೆ ಕವಿ ಸಮ್ಮೇಳನದಲ್ಲಿ ರಾಜ್ಯದ ಪ್ರಮುಖ ಹತ್ತು ಕವಿಗಳು ಭಾಗವಹಿಸಲಿದ್ದಾರೆ.

ಸೆ. 9ಕ್ಕೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಸಾಹಿತಿಗಳು ಪಾಲ್ಗೊಳ್ಳುವ ರೈಟರ್ಸ್‌ ಮೀಟ್.

ಡಿಜಿಟಲ್ ಪಬ್ಲಿಶಿಂಗ್ ಕ್ಷೇತ್ರದಲ್ಲಿ ಇರುವ ವಿಫುಲ ಅವಕಾಶಗಳ ಬಗ್ಗೆ ಪರಿಣಿತರಿಂದ ಕಾರ್ಯಾಗಾರ.

ಅಂತರ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ.

ಒಂದೇ ಸೂರಿನಡಿ ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಪುಸ್ತಕಗಳ, ಅಪರೂಪದ ಪುಸ್ತಕಗಳು, ಕಾಫೀ ಟೇಬಲ್ ಬುಕ್ಸ್, ಟ್ರಾವೆಲಾಗ್, ಸೀಡಿಗಳು, ಇ ಬುಕ್ಸ್, ಅಪ್ಲಿಕೇಷನ್ಸ್, ಫೋನ್ ಬುಕ್ ಸೇರಿ ವೈವಿಧ್ಯಮಯ ಶೈಕ್ಷಣಿಕ ಸಾಮಗ್ರಿಗಳು ಲಭ್ಯ.

ಐದು ರೂಪಾಯಿಯಿಂದ ಒಂದು ಲಕ್ಷ ರೂ ವರೆಗಿನ ಕೃತಿಗಳು ಇಲ್ಲಿವೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry