ಶುಕ್ರವಾರ, ನವೆಂಬರ್ 15, 2019
24 °C

ಪೂಜಾ ಗಾಂಧಿಗೆ ನೋಟಿಸ್ ಜಾರಿ

Published:
Updated:

ರಾಯಚೂರು: ಮಾದರಿ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ಚಲನ ಚಿತ್ರನಟಿ ಪೂಜಾಗಾಂಧಿಗೆ ಸಹಾಯಕ ಆಯುಕ್ತೆ ಮಂಜುಶ್ರೀ ನೋಟಿಸ್ ಜಾರಿ ಮಾಡಿದ್ದಾರೆ.ಏ.7ರಂದು ಇನ್ನೋವಾ ಮತ್ತು ಟಾಟಾ ಸಫಾರಿ ವಾಹನದ ಮೂಲಕ ಭೇಟಿ ನೀಡಿ ಚುನಾವಣಾ ಪ್ರಚಾರ ಕೈಗೊಂಡಿರುವುದು ತಿಳಿದಿದೆ ಎಂದು ಹೇಳಿದ್ದಾರೆ.ಪ್ರಚಾರಕ್ಕಾಗಿ ವಾಹನ ಬಳಸಿದ್ದು, ವಾಹನಗಳ ಪರವಾನಗಿ, ಚುನಾವಣಾ ಪ್ರಚಾರಕ್ಕಾಗಿ ಅನುಮತಿ ಪಡೆದಿರುವ ಬಗ್ಗೆ 24 ತಾಸಿನೊಳಗೆ ವಿವರಣೆ  ನೀಡಲು ಸೂಚಿಸಲಾಗಿದೆ.

ಪ್ರತಿಕ್ರಿಯಿಸಿ (+)