ಭಾನುವಾರ, ಡಿಸೆಂಬರ್ 15, 2019
24 °C

ಪೂಜಾ ತಾಜಾ

-ಸಂದರ್ಶನ : ಡಿ.ಎಂ. ಕುರ್ಕೆ ಪ್ರಶಾಂತ. Updated:

ಅಕ್ಷರ ಗಾತ್ರ : | |

ಪೂಜಾ ತಾಜಾ

ಟಿ ಪೂಜಾ ಗಾಂಧಿ ಚಿತ್ರ ನಿರ್ಮಾಣದತ್ತ ಹೆಜ್ಜೆಯಿಟ್ಟಿದ್ದಾರೆ. ಅವರು ಹೂಡಿಕೆ ಮಾಡುತ್ತಿರುವ ‘ಅಭಿನೇತ್ರಿ’ ಚಿತ್ರ ಅವರಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಈಗಾಗಲೇ ಚಿತ್ರದ ಪೋಸ್ಟರ್ ಗಳು ‘ಅಭಿನೇತ್ರಿ’ ಕಲ್ಪನಾ ಅವರ ಜೀವನದ ಕಥೆ...

ಎನ್ನುವ ಗುಲ್ಲುಗಳನ್ನು ಹಬ್ಬಿಸಿದೆ. ಮೊದಲ ಚಿತ್ರ ನಿರ್ಮಾಣದ ಜೊತೆ ಜೊತೆಯಲ್ಲಿಯೇ ಹೊಸ ಪೋಷಾಕು ಧರಿಸುತ್ತಿರುವ ಸಂತಸದಲ್ಲಿರುವ ಪೂಜಾಗಾಂಧಿ ಜೊತೆ ಒಂದಿಷ್ಟು ಮಾತುಕಥೆ...‘ಅಭಿನೇತ್ರಿ’ ಮಿನುಗುತಾರೆ ಕಲ್ಪನಾ ಅವರ ಜೀವನ ಆಧಾರಿತ ಚಿತ್ರ ಎನ್ನುವ ಸುದ್ದಿ ಹಬ್ಬಿದೆಯಲ್ಲ?

ಖಂಡಿತಾ ಇಲ್ಲ. ‘ಅಭಿನೇತ್ರಿ’ ಯಾವುದೇ ಒಬ್ಬ ನಟಿಯ ಜೀವನದ ಕುರಿತ ಚಿತ್ರವಲ್ಲ.

  

‘ದಿ ಟ್ರಾಜಿಡಿ ಆಫ್ ಲೆಜೆಂಡ್‘ ಎನ್ನುವ ಅಡಿ ಬರಹ ಒಬ್ಬ ವ್ಯಕ್ತಿಯ ಕುರಿತು ಹೇಳುವಂತಿದೆ?

ಇಲ್ಲಿ ‘ಲೆಜೆಂಡ್’ ಪದವನ್ನು ವಿಶಾಲ ಅರ್ಥದಲ್ಲಿ ಬಳಸಲಾಗಿದೆ. ಚಿತ್ರಜಗತ್ತಿನ ನಾಯಕಿಯರಲ್ಲಿ ಬಹು ಮಂದಿ ದಂತಕಥೆಯಾಗಿದ್ದಾರೆ. ಆ ಎಲ್ಲ ನಾಯಕಿಯರೂ ಈ ‘ಲೆಜೆಂಡ್’ನಲ್ಲಿ ಅಡಕವಾಗಿದ್ದಾರೆ.ಚಿತ್ರದ ಕಥೆಯ ಬಗ್ಗೆ ಹೇಳಿ?

ಕರ್ನಾಟಕ ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿನ ಪ್ರಮುಖ ನಟಿಯರ ಜೀವನ ಕುರಿತ ವೃತ್ತಾಂತ, ಬದುಕಿನ ಆಗುಹೋಗುಗಳೇ ಚಿತ್ರದ ಕಥಾ ವಸ್ತು. ನಟಿಯರ ಬದುಕಿನ ತವಕ ತಲ್ಲಣಗಳನ್ನು ಕಷ್ಟಸುಖಗಳನ್ನು ತೆರೆಗೆ ತರಲಾಗುವುದು.ಯಾವ ಯಾವ ನಟಿಯರ ಏಳಿರಿಳಿತಗಳನ್ನು ಚಿತ್ರ ಒಳಗೊಂಡಿದೆ?

ಪ್ರಸಿದ್ಧ ನಟಿಯರು (ಮೌನ, ನಗು) ಎಂದಷ್ಟೇ ಹೇಳುವೆ. ಈ ನಟಿಯರು 70ರ ದಶಕದಲ್ಲಿ ಸಿನಿಮಾ ಜಗತ್ತಿನಲ್ಲಿ ಮಿಂಚಿದವರು.ಈ ರೀತಿಯ ಚಿತ್ರಗಳು ಈಗಾಗಲೇ ಬಂದಿವೆ, ಅಲ್ಲವೇ?

ಹೌದು. ನಟಿಯರ ಜೀವನ ಆಧಾರಿತ ಚಿತ್ರಗಳು ತೆರೆಕಂಡಿವೆ. ಆದರೆ ಆ ಚಿತ್ರಗಳು ಒಬ್ಬ ನಟಿಯ ಜೀವನದ ಕಥೆಯಾಗಿವೆ. ‘ಅಭಿನೇತ್ರಿ’ ಇದಕ್ಕೆ ಹೊರತಾದದ್ದು. ಸಿನಿಮಾದ ಪೂರ್ಣ ಸಾರ, ಹೊಸತನದ ಬಗ್ಗೆ ಈಗ ಹೇಳುವುದಿಲ್ಲ.70ರ ದಶಕದ ಅವಧಿಯ ಸ್ಪರ್ಶ ಚಿತ್ರಕ್ಕಿದೆಯೇ?

ದಕ್ಷಿಣ ಭಾರತ ಚಿತ್ರರಂಗದ ತಾಯಿ ಬೇರು ಚೆನ್ನೈ. 70ರ ದಶಕದಲ್ಲಿ ಚೆನ್ನೈನ ಸ್ಟುಡಿಯೊಗಳಲ್ಲಿ ರಾತ್ರಿ ವೇಳೆ ಕನ್ನಡ ಚಿತ್ರಗಳ ಚಿತ್ರೀಕರಣಗಳಾಗುತ್ತಿತ್ತು. ಈ ಅಂಶಗಳೂ ಸೇರಿದಂತೆ ಅಂದಿನ ನಟಿಯರ ವೇಷಭೂಷಣ ಮತ್ತಿತರ ವಿಷಯಗಳ ಜೊತೆಗೆ ಚಿತ್ರರಂಗದ ಇತರೆ ವಿಚಾರಗಳ ಬಗ್ಗೆಯೂ ಗಮನ ಹರಿಸಲಾಗುತ್ತಿದೆ.

ಆ ಅವಧಿಯ ಸೆಟ್‌ಗಳನ್ನು ಬಳಸಿಕೊಳ್ಳುತ್ತೇವೆ. ಹಳೆಯ ಸ್ಪರ್ಶ ಚಿತ್ರದಲ್ಲಿ ಢಾಳಾಗಿದ್ದರೂ ಇಂದಿನ ಟ್ರೆಂಡ್‌ಗೆ ಅನುಗುಣವಾಗಿಯೇ ಸಿನಿಮಾ ಮೂಡಿಬರಲಿದೆ.ಚಿತ್ರದಲ್ಲಿ ಹಲವು ಪಾತ್ರಗಳು ಬರುತ್ತವೆ ಎಂದಿರಿ. ಆ ಪಾತ್ರಗಳೆಲ್ಲ ನೀವೇ ಆಗಿರುತ್ತೀರಾ?

ಚಿತ್ರದಲ್ಲಿ ನನ್ನ ಪಾತ್ರದ ಹೆಸರು ನಂದಾ. ಈ ಪಾತ್ರದ ಮೂಲಕ ಇತರೆ ನಟಿಯರನ್ನು ತೋರಿಸಲಾಗುತ್ತದೆ.  2ನೇ ಪುಟಕ್ಕೆ...

ಪ್ರಸಕ್ತ ಸನ್ನಿವೇಶದಲ್ಲಿ ಪ್ರಖ್ಯಾತರ ಜೀವನ ಆಧಾರಿತ ಚಿತ್ರಗಳ ಸಂಖ್ಯೆ ಹೆಚ್ಚುತ್ತಿದೆ. ಆ ಹಿನ್ನೆಲೆಯಲ್ಲಿ ನಿಮ್ಮ ಪ್ರಯತ್ನವೇ?

ನಾವು ಯಾರನ್ನೂ ನಕಲಿಸುತ್ತಿಲ್ಲ. ಇತ್ತೀಚೆಗೆ ‘ಸಿಲ್ಕ್’ ಬಂದಿತು. ಅದು ಒಬ್ಬ ನಾಯಕಿಯ ಕಥೆ. ಆದರೆ ನಮ್ಮದು ವಿಭಿನ್ನ ಯತ್ನ. ಇದು ಪಕ್ಕಾ ವ್ಯಾಪಾರಿ ಚಿತ್ರ.ಮೊದಲ ಬಾರಿ ಚಿತ್ರ ನಿರ್ಮಾಣದಲ್ಲಿ ತೊಡಗಿದ್ದೀರಿ. ಮುಂದಿನ ನಿರ್ಮಾಣದ ಯೋಜನೆಗಳೇನು?

‘ಶ್ರೀಕೃಷ್ಣ ಪ್ರೊಡೆಕ್ಷನ್’ ಅನ್ನು ವಿಸ್ತರಿಸುವ ಗುರಿ. ‘ಅಭಿನೇತ್ರಿ’ ಚಿತ್ರಕ್ಕೆ ಸ್ನೇಹಿತೆ ವೈಜಂತಿಯೂ ಬಂಡವಾಳ ತೊಡಗಿಸಿದ್ದಾರೆ. ಕಿರುತೆರೆಯಲ್ಲಿ ಕೂಡ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವ ಯೋಜನೆ ಇದೆ. ಮುಂದಿನ ದಿನಗಳಲ್ಲಿ ನಿರ್ಮಾಣದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಳ್ಳುವೆ.ವಿವಾದ ಮತ್ತು ಪೂಜಾಗಾಂಧಿಗೂ ಅವಿನಾಭಾವ ನಂಟು ಇದ್ದಂತಿದೆ...

‘ದಂಡುಪಾಳ್ಯ’ ಚಿತ್ರ ವಿವಾದಕ್ಕೀಡಾದರೂ ಜನರು ಅದನ್ನು ಸ್ವೀಕರಿಸಿದರು. ಉದ್ದೇಶಪೂರ್ವಕವಾಗಿಯೇ ಕೆಲವರು ಸಣ್ಣದ್ದನ್ನು ದೊಡ್ಡದು ಮಾಡಿ ವಿವಾದ ಎಬ್ಬಿಸುತ್ತಾರೆ. ವಿವಾದಗಳನ್ನು ಇನ್ನು ಮುಂದೆ ತಲೆಗೆ ಹಚ್ಚಿಕೊಳ್ಳುವುದಿಲ್ಲ.

ರಾಜಕಾರಣದಲ್ಲಿ ನಿಮ್ಮ ಮುಂದಿನ ನಡೆ ಏನು?

ನಾನು ಸ್ಪರ್ಧಿಸಿದ್ದ ರಾಯಚೂರು ವಿಧಾನಸಭಾ ಕ್ಷೇತ್ರದ ಜನರ ಸಂಪರ್ಕ ಈಗಲೂ ಇದೆ.

-ಸಂದರ್ಶನ : ಡಿ.ಎಂ. ಕುರ್ಕೆ ಪ್ರಶಾಂತ.

ಪ್ರತಿಕ್ರಿಯಿಸಿ (+)