ಪೂಜೆಗೆ ತ್ರಿಭಾಷಾ ಸೂತ್ರ: ವಿರೋಧ

7

ಪೂಜೆಗೆ ತ್ರಿಭಾಷಾ ಸೂತ್ರ: ವಿರೋಧ

Published:
Updated:

ಬೆಂಗಳೂರು: ಬೆಂಗಳೂರು ಮಹಾ ಧರ್ಮ ಕ್ಷೇತ್ರದ ವಜ್ರ ಮಹೋತ್ಸವ ದಲ್ಲಿ ತ್ರಿಭಾಷಾ ಸೂತ್ರವನ್ನು ಅನುಸರಿ ಸಲು   ಕ್ಯಾಥೋಲಿಕ್‌ ಧರ್ಮಾಧ್ಯಕ್ಷರು ನಿರ್ಧ­ರಿ­ಸಿ­ರುವುದಕ್ಕೆ ಅಖಿಲ ಕರ್ನಾಟಕ ಕ್ಯಾಥೋಲಿಕ್‌ ಕ್ರೈಸ್ತರ ಕನ್ನಡ ಸಂಘ ವಿರೋಧ ವ್ಯಕ್ತಪಡಿಸಿದೆ. ಇದೇ 22ರಂದು ಕೋಲ್ಸ್‌ ಪಾರ್ಕ್‌ ಬಳಿ ಇರುವ ಸೇಂಟ್‌ ಫ್ರಾನ್ಸಿಸ್‌ ಝೇವಿ ಯರ್‌ ಚರ್ಚ್‌ನ ಆವರಣಲ್ಲಿ ವಜ್ರ ಮಹೋತ್ಸವವನ್ನು ಆಚರಿಸ ಲಾಗು ತ್ತಿದ್ದು, ಅಂದು ನಡೆಯುವ ಪೂಜಾ ವಿಧಿಯನ್ನು ಇಂಗ್ಲಿಷ್‌, ತಮಿಳು ಹಾಗೂ ಕನ್ನಡ ಭಾಷೆಯಲ್ಲಿ ನಡೆಸಲು ಧರ್ಮಾ­ಧ್ಯಕ್ಷ ಡಾ.ಬರ್ನಾಡ್‌ ಮೊರಾಸ್‌ ನಿರ್ಧರಿಸಿದ್ದಾರೆ. ಇದು ಕನ್ನಡ ವಿರೋಧಿ ಚಟುವಟಿಕೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ರಫಾಯಲ್‌ ರಾಜ್‌  ಪತ್ರಿಕಾಗೋಷ್ಠಿ ಯಲ್ಲಿ ದೂರಿದರು.ಇದುವರೆಗೂ ೨೦ ವರ್ಷಗಳ ಕಾಲ ಇಬ್ಬರು ತಮಿಳು ಮತ್ತು ೨೮ ವರ್ಷಗಳ ಕಾಲ ಮೂವರು ಕೊಂಕಣಿ ಧರ್ಮಾ ಧ್ಯಕ್ಷರು ಆಡಳಿತ ನಡೆಸಿದ್ದಾರೆ.  ಜೊತೆಗೆ ಕೋಟ್ಯಂತರ ರೂಪಾಯಿ ಹಣ ದೋಚಿ, ಕನ್ನಡಿಗರಿಗೆ ಹಾಗೂ ಸ್ಥಳೀಯರಿಗೆ ಅವಮಾನ ಮಾಡಿದ್ದಾರೆ ಎಂದು ಬಿ.ಟಿ ಲಲಿತಾ ನಾಯಕ್‌ ಆರೋಪಿಸಿದರು.ವಜ್ರ ಮಹೋತ್ಸವದ ದಿನದಂದು ಚರ್ಚ್‌ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ರಫಾಯಲ್‌ ರಾಜ್‌ ಎಚ್ಚರಿಕೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry