ಪೂಜೆ, ಅನ್ನದಾನಕ್ಕಿಂತ ಸಾಮಾಜಿಕ ಕಾರ್ಯ ಮುಖ್ಯ

ಬುಧವಾರ, ಜೂಲೈ 17, 2019
23 °C

ಪೂಜೆ, ಅನ್ನದಾನಕ್ಕಿಂತ ಸಾಮಾಜಿಕ ಕಾರ್ಯ ಮುಖ್ಯ

Published:
Updated:

ಉಡುಪಿ: `ಪರ್ಯಾಯದ ಎರಡು ವರ್ಷಗಳ ಕಾಲದಲ್ಲಿ ಅನವರತವೂ ಸಾಧನೆಯದೇ ಚಿಂತೆ ಕಾಡುತ್ತಿದೆ. ಕೇವಲ ಪೂಜೆ, ಧಾರ್ಮಿಕ ಸೇವೆ, ಅನ್ನದಾನ ಮಾಡಿದರೆ ಮಾತ್ರವೇ ಸಾಲದು, ಸಾಮಾಜಿಕವಾಗಿ ಸ್ಪಂದಿಸಿ ಸಮಾಜಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು~ ಎಂದು ಉಡುಪಿ ಕೃಷ್ಣಮಠದ ಪರ್ಯಾಯ ಶೀರೂರು ಲಕ್ಷ್ಮೀವರತೀರ್ಥರು ಇಲ್ಲಿ ಹೇಳಿದರು.ಲಕ್ಷ್ಮೀವರತೀರ್ಥರ ಜನ್ಮ ನಕ್ಷತ್ರದ ನಿಮಿತ್ತ ಬುಧವಾರ ರಾಜಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭ ಉದ್ಘಾಟಿಸಿ, ಬಳಿಕ 21 ಮಂದಿ ಫಲಾನುಭವಿಗಳಿಗೆ ರೂ.3 ಲಕ್ಷ ಮೊತ್ತದ `ಆರೋಗ್ಯನಿಧಿ~ ಚೆಕ್ ವಿತರಿಸಿ ಅವರು ಮಾತನಾಡಿದರು.`ಬಡಜನರಿಗೆ ಸಾಕಷ್ಟು ಸಮಸ್ಯೆಗಳು ಕಾಡುತ್ತವೆ. ಆರೋಗ್ಯ ಸಮಸ್ಯೆಗಳಿಂದ ಬಡವರು ತತ್ತರಿಸುತ್ತಿದ್ದಾರೆ. ಅವರಿಗೆ ಶಕ್ತ್ಯಾನುಸಾರ ನೆರವುವಾಗುವ ನಿಟ್ಟಿನಲ್ಲಿ ಶ್ರೀಕೃಷ್ಣಮಠದಿಂದ `ಆರೋಗ್ಯ ನಿಧಿ~ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದು ಮುಂದಿನ ಎಲ್ಲ ಸ್ವಾಮೀಜಿಗಳ ಪ–ರ್ಯಾಯದಲ್ಲಿಯೂ ಮುಂದುವರಿಯಬೇಕು ಎಂಬುದು ತಮ್ಮ ಆಶಯ~ ಎಂದರು.`ಮುಂದಿನ ಆರು ತಿಂಗಳ ಪರ್ಯಾಯ ಅವಧಿಯಲ್ಲಿ ಭಗವಂತನಿಗೆ ಪ್ರಿಯವಾಗುವಂತೆ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳುವ ಹಂಬಲವಿದೆ~ ಎಂದರು.ಸ್ವಾಮೀಜಿಗಳಿಗೆಅಭಿನಂದನೆ: ಪತ್ರಕರ್ತೆ ಸಂಧ್ಯಾ ಪೈ ಮಾತನಾಡಿ, `ಒಂದುಕಾಲದಲ್ಲಿ ಮಠಗಳೆಂದರೆ ಧಾರ್ಮಿಕ ಕೆಲಸಗಳಿಗೆ ಮಾತ್ರವೇ ಸೀಮಿತ ಎನ್ನುವ ಭಾವನೆ ಜನರಲ್ಲಿತ್ತು. ಆದರೆ ಈಗ ಮಠಗಳು ನರ-ನಾರಾಯಣನ ಸೇವೆಗೆ ಇಳಿದಿರುವುದು ಅಭಿನಂದನಾರ್ಹ~ ಎಂದರು.ಕೇಮಾರು ಈಶ ವಿಠಲದಾಸ ಸ್ವಾಮೀಜಿ ಮಾತನಾಡಿ, ಶೀರೂರುಶ್ರೀಗಳ ಸಾಮಾಜಿಕ ಕಳಕಳಿಯನ್ನು ಕೊಂಡಾಡಿದರು. ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ, `ಹಿಂದಿನ ಪರ್ಯಾಯದಲ್ಲಿ ಶೀರೂರುಶ್ರೀ ವಾಹನುಮುಕ್ತ ರಥಬೀದಿ ಕನಸು ಕಂಡಿದ್ದರು. ಅದನ್ನು ಈ ಬಾರಿ ಸಾಕಾರಗೊಳಿಸಿದರು~ ಎಂದರು. ಜಯಕೃಷ್ಣ ಶೆಟ್ಟಿ ತೋನ್ಸೆ ಮಾತನಾಡಿ, `ಶೀರೂರು ಸ್ವಾಮೀಜಿಗಳ ಜಾತಿಭೇದ ತೊಡೆದುಹಾಕಿ ಎಲ್ಲರನ್ನೂ ಒಂದುಗೂಡಿಸುತ್ತಿದ್ದಾರೆ~ ಎಂದರು.ಕಟೀಲು ಕ್ಷೇತ್ರದ ಧರ್ಮದರ್ಶಿ ಲಕ್ಷ್ಮೀನಾರಾಯಣ ಅಸ್ರಣ್ಣ, ಕಕ್ಕುಂಜೆ ನಾಗಾ ನಂದ ವಾಸುದೇವ ಆಚಾರ್ಯ,  ನಾಗೇಶ್ ಶೆಟ್ಟಿ, ಉದಯಕುಮಾರ್ ಶೆಟ್ಟಿ, ಚಲನಚಿತ್ರ ಕಲಾವಿದ ಶ್ರೀನಿವಾಸ ಮೂರ್ತಿ, ಮಠದ ದಿವಾಣ ಲಾತವ್ಯ ಆಚಾರ್ಯ, ತಲ್ಲೂರು ಶಿವರಾಮ ಶೆಟ್ಟಿ, ನಿತ್ಯಾನಂದ ಒಳಕಾಡು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry